ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ (Lok Sabha Elections) ಬಿಜೆಪಿ ಟಿಕೆಟ್ ಪಡೆದಿರುವ ಹಿರಿಯ ನಾಯಕ ವಿ. ಸೋಮಣ್ಣ (V Somanna) ಅವರು ಬುಧವಾರ ತಮಗೆ ಟಿಕೆಟ್ ಕನ್ಫರ್ಮ್ ಆಗುತ್ತಿದ್ದಂತೆಯೇ ತುಮಕೂರಿನ ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀಗಳ (Siddaganga Shri) ಜತೆಗೆ ಹೇಳಿಕೊಂಡಿದ್ದರು. ಅವರು ಶ್ರೀಗಳ ಜತೆ ಗೌಪ್ಯವಾಗಿ ಮಾತುಕತೆ (Somanna Secret meeting with Siddaganga Shri) ನಡೆಸುತ್ತಿರುವ ಫೋಟೊ ವೈರಲ್ ಆಗಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು ಸಂಜೆಯೇ ಆದರೂ ವಿ. ಸೋಮಣ್ಣ ಅವರಿಗೆ ಮಧ್ಯಾಹ್ನವೇ ಟಿಕೆಟ್ ಸಿಕ್ಕಿದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆಗ ಸೋಮಣ್ಣ ಅವರು ತುಮಕೂರು ನಗರದ ಶ್ರೀನಗರದಲ್ಲಿನ ನಗರಸಭಾ ಮಾಜಿ ಸದಸ್ಯ ಬಸವರಾಜು ಅವರ ಗೃಹ ಪ್ರವೇಶ ಕಾರ್ಯಕ್ರಮದಲ್ಲಿದ್ದರು. ಅದೇ ಕಾರ್ಯಕ್ರಮಕ್ಕೆ ಸಿದ್ದಗಂಗಾ ಶ್ರೀಗಳು ಕೂಡಾ ಪಾದಪೂಜೆಗೆ ಬಂದಿದ್ದರು.
ಆ ಸಂದರ್ಭದಲ್ಲಿ ತಮಗೆ ಟಿಕೆಟ್ ಸಿಕ್ಕಿದ ಮಾಹಿತಿಯನ್ನು ಶ್ರೀಗಳ ಜತೆ ಸೋಮಣ್ಣ ಹಂಚಿಕೊಂಡಿದ್ದರು. ಪ್ರತ್ಯೇಕ ಕೊಠಡಿಯಲ್ಲಿ ಸುಮಾರು 15 ನಿಮಿಷ ಶ್ರೀಗಳ ಜೊತೆ ಚರ್ಚೆ ನಡೆಸಿದ್ದರು ಸೋಮಣ್ಣ. ಸೋಮಣ್ಣ ಅವರಿಗೆನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಸಾಥ್ ಕೊಟ್ಟಿದ್ದರು. ವಿ. ಸೋಮಣ್ಣ ಮತ್ತು ಸಿದ್ದಗಂಗಾ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಏನೇ ವಿಚಾರಗಳಿದ್ದರೂ ಸಿದ್ದಗಂಗಾ ಶ್ರೀಗಳ ಜತೆಗೆ ಚರ್ಚೆ ಮಾಡಿಯೇ ಅವರು ಮುಂದಡಿ ಇಡುತ್ತಾರೆ.
ಇದನ್ನೂ ಓದಿ : V Somanna : ಬಿಎಸ್‌ವೈ ಗ್ರೀನ್ ಸಿಗ್ನಲ್; ವಿ. ಸೋಮಣ್ಣಗೆ ತುಮಕೂರು ಟಿಕೆಟ್ ಫಿಕ್ಸ್?
V Somanna ಯಾವುದೇ ತಯಾರಿ ಮಾಡಿಲ್ಲ, ಇನ್ನು ಸುತ್ತಾಡಬೇಕು ಎಂದ ಸೋಮಣ್ಣ
ಈ ನಡುವೆ, ಟಿಕೆಟ್ ಕನ್ಫರ್ಮ್ ಆಗುತ್ತಲೇ ಮಾತನಾಡಿದ ವಿ. ಸೋಮಣ್ಣ ಅವರು ನಾನು ಇವತ್ತಿನವರೆಗೂ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಇನ್ನಷ್ಟೇ ಸುತ್ತಾಡಬೇಕು ಎಂದು ಹೇಳಿದರು.
ʻʻಸುಳ್ಳು ಹೇಳಲು ನನಗೆ ಬರಲ್ಲ. ನಾನು ಆಕಾಂಕ್ಷಿ ಆಗಿ ಸುತ್ತಾಡಿದ್ದೇನೆ. ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಗೆ ಕಾಲಿಟ್ಟಿಲ್ಲ. ಆದರೆ, ತುಮಕೂರಿನಲ್ಲಿ ನನ್ನದೇ ಆದ ನೆಟ್ವರ್ಕ್ ಇದೆ. ನನಗೂ ತುಮಕೂರಿಗೆ ಅವಿನಾಭಾವ ಸಂಬಂಧ ಇದೆʼʼ ಎಂದರು. ತುಮಕೂರಿನ ಬಗ್ಗೆ ನನಗೆ ಅಲ್ಲಿರುವವರಿಗಿಂತಲೂ ಹೆಚ್ಚು ಮಾಹಿತಿ ಇಲ್ಲ. ಅಷ್ಟು ಒಳಹೊಕ್ಕು ಕೆಲಸ ಮಾಡಿದ್ದೇನೆ. ಅಲ್ಲಿನ ಎಲ್ಲಾ ಜಾತಿವಾರು ಮಾಹಿತಿ ನನಗಿದೆ ಎಂದು ಹೇಳಿದರು.
ʻʻತುಮಕೂರು ನನಗೆ ಚಿರಪರಿಚಿತ. ಬೇರೆ ರಾಜಕಾರಣಿ ಆರು ತಿಂಗಳು ತಗೋತಾರೆ.. ನಾನು ಒಂದು ತಿಂಗಳಲ್ಲೇ ಸುತ್ತಬಲ್ಲೆ. 24×7 ಕೆಲಸ ಮಾಡ್ತೀನಿʼʼ ಎಂದು ಹೇಳಿದ ವಿ. ಸೋಮಣ್ಣ ಅವರು, ಮುದ್ದಹನುಮೇಗೌಡರು ಬುದ್ಧಿವಂತರು. ಪಾದರಸದ ರೀತಿಯವರು. ಅದೇ ಜಿಲ್ಲೆಯವರು. ಸೋಮಣ್ಣ ಆ ಜಿಲ್ಲೆಯವನು, ಈ ಜಿಲ್ಲೆಯವನು ಅಂತ ಹೇಳಿದ್ರೆ ಈ ದೇಶಕ್ಕೆ ಭವಿಷ್ಯ ಇಲ್ಲ. ಅವರು ಮೂರು ವರ್ಷದಲ್ಲಿ ಮಾಡೋದು, ಮೂರು ತಿಂಗಳಲ್ಲಿ ಮಾಡಬಲ್ಲೆʼʼ ಎಂದು ಸವಾಲು ಹಾಕಿದರು.
ʻʻನರೇಂದ್ರ ಮೋದಿ ಅವರ ಆಡಳಿತ ನೋಡಿದರೆ ದೇಶ ಇನ್ನೂ ಪ್ರಬಲವಾಗಿ ಬೆಳೆಯಲಿದೆ ಅನಿಸುತ್ತದೆ. ಭಾರತಕ್ಕೆ ಇನ್ನೂ ಭವಿಷ್ಯ ಇದೆ ಅನಿಸ್ತಿದೆʼʼ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಅವರ ತುಮಕೂರು ಭೇಟಿ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಯಡಿಯೂರಪ್ಪ, ವಿಜಯೇಂದ್ರ ಅವರು ಬರ್ತಾರೆ ಅಂತಿದೆ. ಮಾಹಿತಿ ಪಡೆಯುತ್ತೇನೆ. ಅವರಿಗೆ ಹೆಚ್ಚು ಮಾರ್ಕೆಟ್ ಇದೆ. ಅದನ್ನು ಬಳಸಿಕೊಳ್ಳಬೇಕು ಎಂದರು ಸೋಮಣ್ಣ.
ತುಮಕೂರು ಕ್ಷೇತ್ರದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಸನ್ಮಾನ್ಯ ಪ್ರಧಾನಿಗಳಾದ ಶ್ರೀ @narendramodi ಜೀ ಅವರಿಗೆ, ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರಿಗೆ, ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಅವರಿಗೆ, ಭಾಜಪದ ರಾಷ್ಟ್ರಾಧ್ಯಕ್ಷರಾದ ಶ್ರೀ @JPNadda ಅವರಿಗೆ, pic.twitter.com/BYDEjiN8QQ
— V. Somanna (@VSOMANNA_BJP) March 14, 2024