Site icon Vistara News

Tumkur News: ಶಿರಾದಲ್ಲಿ ಸರಗಳ್ಳತನ ಮಾಡುತ್ತಿದ್ದ 3 ಆರೋಪಿಗಳ ಬಂಧನ

Arrest of 3 accused who were stealing gold chains in Shira

ಶಿರಾ: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಒಟ್ಟು 82 ಗ್ರಾಂ ನ 4.5 ಲಕ್ಷ ರೂ ಮೌಲ್ಯದ 3 ಚಿನ್ನದ ಸರಗಳನ್ನು (Gold Chains) ವಶಪಡಿಸಿಕೊಂಡಿರುವ ಘಟನೆ ಶಿರಾನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ನಾಗೇಂದ್ರ, ದೇವರಾಜು, ಭೂತೇಶ ಎಂಬುವವರೇ ಬಂಧಿತ ಆರೋಪಿಗಳು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ಮೋಟರ್‌ ಸೈಕಲ್‌ನಲ್ಲಿ ಬಂದು ಹೆದರಿಸಿ, ಕೈಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿ, ಕೊರಳಲ್ಲಿದ್ದ 36 ಗ್ರಾಂ ನ ಮಾಂಗಲ್ಯ ಸರ ಹಾಗೂ ಮೊಬೈಲ್‌ ಅನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದರು. ಈ ಕುರಿತು ಗಂಗಮ್ಮ ಎಂಬುವವರು ದೂರು ದಾಖಲಿಸಿದ್ದರು.

ಇದನ್ನೂ ಓದಿ: Repo Rate: ರೆಪೋ ರೇಟ್‌ನಲ್ಲಿ ಬದಲಾವಣೆ ಇಲ್ಲ! ದಾಖಲೆ ಏರಿಕೆ ಕಂಡ ಷೇರುಪೇಟೆ

ಈ ಬಗ್ಗೆ ತನಿಖೆ ಕೈಗೊಂಡ ಶಿರಾ ನಗರ ಪೊಲೀಸ್‌ ಠಾಣೆಯ ಪಿಐ ಮಂಜೇಗೌಡ ಎಸ್‌, ಪಿಎಸ್‌ಐ ಪಾಲಾಕ್ಷಪ್ರಭು, ಹೆಡ್‌ ಕಾನ್‌ಸ್ಟೇಬಲ್‌ ದುರ್ಗಯ್ಯ ಡಿ, ಸಿಬ್ಬಂದಿಗಳಾದ ರಮೇಶ್‌, ಅಬ್ದುಲ್‌ ಖಲೀಲ್‌, ನಾಗರಾಜು, ಮಂಜುನಾಥಸ್ವಾಮಿ, ತಿಪ್ಪೇಸ್ವಾಮಿ ಅವರ ತಂಡ ಆರೋಪಿ ನಾಗೇಂದ್ರ ಎಂಬುವವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಮೋಟರ್‌ಸೈಕಲ್‌ನಲ್ಲಿ ಹೊನ್ನೇನಹಳ್ಳಿ, ಪಟ್ಟನಾಯಕನಹಳ್ಳಿ ಮತ್ತು ಪಂಜಿಗಾನಹಳ್ಳಿ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: Raichur News: ದಕ್ಷಿಣ ಭಾರತದ ಡೆಲ್ಟಾ ರ‍್ಯಾಂಕಿಂಗ್‌ನಲ್ಲಿ ರಾಯಚೂರಿನ ಮಸ್ಕಿಗೆ ಪ್ರಥಮ ರ‍್ಯಾಂಕ್

ಬಂಧಿತ ಆರೋಪಿಗಳಿಂದ ಒಟ್ಟು 82 ಗ್ರಾಂ ನ 4.5 ಲಕ್ಷ ರೂ ಮೌಲ್ಯದ 3 ಚಿನ್ನದ ಸರಗಳು, ಎರಡು ಮೋಟರ್‌ ಸೈಕಲ್‌, ಒಂದು ಮೊಬೈಲ್‌ ಅನ್ನು ವಶಪಡಿಸಿಕೊಂಡಿದ್ದಾರೆ.

Exit mobile version