Site icon Vistara News

Tumkur News: ಬೈಕ್‌ನಲ್ಲಿ ಹೋಗುತ್ತಿದ್ದ ನರ್ಸ್ ಬಲಿ ಪಡೆದ ಕೇಬಲ್ ವೈರ್

Laxmibai Jadhav

ತುಮಕೂರು: ಬೈಕ್‌ನಲ್ಲಿ ಹೋಗುತ್ತಿದ್ದಾಗ ಕೇಬಲ್‌ ವೈರ್‌ಗೆ ವಿದ್ಯುತ್‌ ಸ್ಪರ್ಶಿಸಿ ನರ್ಸ್‌ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ (Tumkur News) ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದಲ್ಲಿ ನಡೆದಿದೆ. ಕೆಲಸ ಮುಗಿಸಿ ಇಪ್ಪಾಡಿಯಿಂದ ಕುಣಿಗಲ್ ಪಟ್ಟಣಕ್ಕೆ ಬೈಕ್‌ನಲ್ಲಿ ಹೋಗುವಾಗ ದಾರಿಯಲ್ಲಿ ಹಾದುಹೋಗಿದ್ದ ಕೇಬಲ್ ವೈರ್‌ಗೆ ವಿದ್ಯುತ್ ತಂತಿ ತಗುಲಿ ನರ್ಸ್‌ ಮೇಲೆ ಬಿದ್ದಿದ್ದರಿಂದ ಅವಘಡ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಂಚಲಕಟ್ಟೆ ಮೂಲದ ಲಕ್ಷ್ಮೀ ಬಾಯಿ ಜಾಧವ್ (36) ಮೃತರು. ಇವರು ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕುಣಿಗಲ್ ಪಟ್ಟಣದಲ್ಲಿ ವಾಸವಿದ್ದ ಲಕ್ಷ್ಮೀಬಾಯಿ, ಕೆಲಸ ಮುಗಿಸಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅವರ ಮೇಲೆ ಕೇಬಲ್ ವೈರ್ ಬಿದ್ದಿದೆ. ಅದಕ್ಕೆ ವಿದ್ಯುತ್‌ ತಂತಿ ಸ್ಪರ್ಶಿಸಿದ್ದರಿಂದ ನರ್ಸ್‌ ಕೊನೆಯುಸಿರೆಳೆದಿದ್ದಾರೆ.

ಇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲಕ್ಣ್ಮಣ್ ಜತೆ ಕುಣಿಗಲ್‌ಗೆ ಬೈಕ್‌ನಲ್ಲಿ ಲಕ್ಷ್ಮೀ ಬಾಯಿ ಹೋಗುತ್ತಿದ್ದರು. ಘಟನೆಯಲ್ಲಿ ಲಕ್ಷ್ಮಣ್ ಅವರಿಗೂ ಗಾಯಗಳಾಗಿದ್ದು, ಅವರನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Tumkur Tragedy : ಕುಚ್ಚಂಗಿ ಕೆರೆಯಲ್ಲಿ ಭಸ್ಮವಾದ ಕಾರು ಪತ್ತೆ, ಒಳಗೆ 3 ಶವಗಳು!

ಮಹಿಳೆಯ ಮೃತದೇಹವನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೃತ ಲಕ್ಷ್ಮೀಬಾಯಿಗೆ ಇತ್ತೀಚೆಗೆ ಮದುವೆ ನಿಶ್ಚಯವಾಗಿತ್ತು ಎಂದು ಹೇಳಲಾಗಿದೆ. ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಕ್ಷಿಣೆ ಕಿರುಕುಳ; ನರಕಯಾತನೆಯನ್ನು ಡೆತ್‌ನೋಟ್‌ನಲ್ಲಿ ಬರೆದಿಟ್ಟಳು ನಗುಮೊಗದ ಚೆಲುವೆ

ಮಂಡ್ಯ: ತನ್ನ ನೋವಿನ ಕರಾಳ ದಿನಗಳನ್ನು ಡೆತ್‌ನೋಟ್‌ನಲ್ಲಿ (Death Note) ಬರೆದಿಟ್ಟು ಗೃಹಿಣೆಯೊಬ್ಬಳು ನೇಣಿಗೆ (Self Harming) ಶರಣಾಗಿದ್ದಾಳೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಘಟನೆ (Dowry Case) ನಡೆದಿದೆ. ಪ್ರೇಮಕುಮಾರಿ (26) ಮೃತ ದುರ್ದೈವಿ.

ಪ್ರೇಮಕುಮಾರಿ 2022ರಲ್ಲಿ ಮೈಸೂರಿನ ರಾಘವೇಂದ್ರ ಎಂಬುವವರನ್ನು ಮದುವೆಯಾಗಿದ್ದರು. ಮದುವೆ ಟೈಂನಲ್ಲೇ ಪ್ರೇಮಕುಮಾರಿ ಕುಟುಂಬಸ್ಥರು 150 ಗ್ರಾಂ ಚಿನ್ನ ಹಾಗೂ 5 ಲಕ್ಷ ರೂ. ವರದಕ್ಷಿಣೆ ನೀಡಿದ್ದರು. ಮದುವೆ ಆದ ಮೂರೇ ತಿಂಗಳಿಗೆ ರಾಘವೇಂದ್ರ ಕುಟುಂಬಸ್ಥರ ಅಸಲಿ ಆಟ ಶುರುವಾಗಿತ್ತು. ಹೆಚ್ಚಿನ ವರದಕ್ಷಿಣೆ ತರುವಂತೆ ಪ್ರೇಮಕುಮಾರಿಗೆ ಒತ್ತಡ ಹಾಕಿದ್ದರು. 64 ಲಕ್ಷ ರೂ ತೆಗೆದುಕೊಂಡು ಬಾ.. ಇಲ್ಲದಿದ್ದರೆ ಈ ಮನೆಯಲ್ಲಿ ಜಾಗವಿಲ್ಲ ಎಂದು ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಡೆತ್‌ ನೋಟ್‌ನಲ್ಲಿ ಪ್ರೇಮಕುಮಾರಿ ಉಲ್ಲೇಖಿಸಿದ್ದಾರೆ.

ತವರು ಮನೆಗೆ ಕಳಿಸಿ ಕೊಲೆ ಬೆದರಿಕೆ

ಹಣ ತರುವಂತೆ ಪತಿ ಕುಟುಂಬಸ್ಥರು ಒತ್ತಡ ಏರಿ ಪ್ರೇಮಕುಮಾರಿಯನ್ನು ತವರು ಮನೆಗೆ ಕಳಿಸಿದ್ದರು. ಇತ್ತ ತವರು ಮನೆಯಲ್ಲೆ ಇದ್ದುಕೊಂಡೇ ಪ್ರೇಮ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಳು. ಇತ್ತೀಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರಿಂದ ಕೊಲೆ ಮಾಡಿಸುವ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಲಾಯರ್‌ ಆಗುವ ನನ್ನ ಕನಸು ನಚ್ಚು ನೂರಾಗಿದೆ. ಇವರ ಕಾಟವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಿತ್ಯವು ಭಯದಲ್ಲೇ ಜೀವನವನ್ನು ದೂಡುವಂತಾಗಿದೆ. ಒಳ್ಳೆಯವರಂತೆ ನಟಿಸಿ, ಮೋಸ ಮಾಡಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಪ್ರೇಮಕುಮಾರಿ ಸಾಯುವ ಮುನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ.

ಇದನ್ನೂ ಓದಿ | Sonu Srinivas Gowda: ಸೋನು ಗೌಡಗೆ 4 ದಿನ ಪೊಲೀಸ್‌ ಕಸ್ಟಡಿ; ಸೋಮವಾರ ಮತ್ತೆ ಕೋರ್ಟ್‌ನಲ್ಲಿ ವಿಚಾರಣೆ

ಶ್ರೀಮಂತ ಮನೆ ಸೊಸೆಯಾದ ನನಗೆ ಸಾಯುವ ಧೈರ್ಯವು ಇಲ್ಲ, ಬದುಕುವ ಆಸೆಯು ಇಲ್ಲ. ಗಂಡ ಬಿಟ್ಟವಳು, ಮಾರ್ಯಾದೆ ತೆಗೆಯುತ್ತಿದ್ದಾಳೆ ಎಂದು ಭಾವಿಸದೇ ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಪ್ರೇಮಕುಮಾರಿ ಸುಮಾರು 5 ಪುಟಗಳ ಡೆತ್‌ನೋಟ್ ಬರೆದಿಟ್ಟು, ಬುಧವಾರ ಸಂಜೆ ನೇಣಿಗೆ ಶರಣಾಗಿದ್ದಾಳೆ. ಕುಟುಂಬಸ್ಥರು ರಾಘವೇಂದ್ರ ಕುಟುಂಬಸ್ಥರ ವಿರುದ್ಧ ಕಿಕ್ಕೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version