Site icon Vistara News

Tungabhadra river | ಗದ್ದೆಗೆ ಹೋದ ರೈತರು ನಡುಗಡ್ಡೆಯಲ್ಲಿ ಸಿಲುಕಿದರು

Tungabhadra river

ಕೊಪ್ಪಳ: ಇಲ್ಲಿನ ಶಿವಪುರ ಬಳಿ ರೈತರು ನಾಟಿ ಮಾಡಲು ಗದ್ದೆಗೆ ಹೋದವರು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. (Tungabhadra river) ಗ್ರಾಮದ ರೈತರು ಗದ್ದೆ ಕೆಲಸಕ್ಕೆ ಹಾಗೂ ದನ ಮೇಯಿಸಲು ಹೋದ ಹತ್ತಕ್ಕೂ ಹೆಚ್ಚು ಮಂದಿ ನಡುಗಡ್ಡೆಯಲ್ಲಿ ಸಿಲುಕಿ ಹೊರ ಬರಲಾಗದೆ ಪರದಾಡುತ್ತಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿದರು

ಸತತ ಮಳೆಗೆ ತುಂಗಭದ್ರಾ ಉಕ್ಕಿ ಹರಿಯುತ್ತಿದ್ದು, ಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ರೈತರು ನಡುಗಡ್ಡೆಯಲ್ಲಿ ಸಿಲುಕುವಂತಾಗಿದೆ. ನದಿಯಲ್ಲಿ ನೀರು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ರೈತರ ಪ್ರಾಣ ಅಪಾಯದಲ್ಲಿದೆ. ಸ್ಥಳಕ್ಕೆ ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರವಾಹ ಭೀತಿ

ತುಂಗಭದ್ರಾ ಜಲಾಶಯದಿಂದ 1 ಲಕ್ಷ 70 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಹೊರ ಹರಿವು ಮತ್ತಷ್ಟು ಹೆಚ್ಚಾದರೆ ಹುಲಗಿ ಗ್ರಾಮದಲ್ಲಿರುವ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರವಾಹ ಭೀತಿ ಎದುರಾಗಲಿದೆ. ಹುಲಿಗೆಮ್ಮದೇವಿ ದೇವಸ್ಥಾನ ತುಂಗಭದ್ರಾ ನದಿಯ ಪಕ್ಕದಲ್ಲಿದೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರವಾಹ ಭೀತಿ

ತಲೆಮುಡಿ ಕೊಡುವ ಕೊಠಡಿಯೊಳಗೆ ನದಿ ನೀರು ನುಗ್ಗಿದೆ. ಭಕ್ತರು ಅಪಾಯ ಲೆಕ್ಕಿಸದೆ ನದಿಯಲ್ಲಿ ಸ್ನಾನ ಮಾಡಲು ಮುಂದಾಗುತ್ತಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮತ್ತು ದೇವಸ್ಥಾನ ಆಡಳಿತ ಮಂಡಳಿ ಪರದಾಡುತ್ತಿವೆ.

ಇದನ್ನೂ ಓದಿ | Bhima river | ಪುಣ್ಯ ಸ್ನಾನ ಮಾಡಲು ಹೋದ ಯುವಕ ನೀರುಪಾಲು

Exit mobile version