Site icon Vistara News

Tungabhadra river | ನಡುಗಡ್ಡೆಯಲ್ಲಿದ್ದರೂ ಬರಲೊಪ್ಪದ ರೈತರು; ಹೆಣಗಾಡಿದ ಅಧಿಕಾರಿಗಳು

tungabhara river

ಕೊಪ್ಪಳ: ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಳೆಯಾಗದಿದ್ದರೂ ತುಂಗಭದ್ರೆಯ (Tungabhadra river) ರೌದ್ರಕ್ಕೆ ಪ್ರವಾಹದ ಭೀತಿ ಎದುರಾಗಿದೆ. ಇಲ್ಲಿನ ಶಿವಪುರ ರೈತರು ನಾಟಿ ಮಾಡಲು ಗದ್ದೆಗೆ ಹೋದವರು ನಡುಗಡ್ಡೆಯಲ್ಲಿ ಉಳಿಯುವಂತಾಗಿತ್ತು. ಕೃಷಿ ಕಾಯಕದಲ್ಲಿ ನಿರಂತರಾಗಿದ್ದ ರೈತರನ್ನು ವಾಪಸ್‌ ಕರೆತರುವುದೇ ಅಗ್ನಿಶಾಮಕ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್ ನೀರನ್ನು ನದಿ ಮೂಲಕ ಹರಿಬಿಡಲಾಗಿದೆ.ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಡುಗಡ್ಡೆಯಲ್ಲಿದ್ದ 9 ಮಂದಿ ರೈತರನ್ನು ಕರೆತರಲು ಕೊಪ್ಪಳ ತಹಸೀಲ್ದಾರ ವಿಠಲ್ ಚೌಗಲೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ರಕ್ಷಣೆ ಕಾರ್ಯಾಚರಣೆಯ ಟೆನ್ಷನ್‌ನಲ್ಲಿದ್ದ ಅಧಿಕಾರಿಗಳು ಬೋಟ್ ಮೂಲಕ ಸ್ಥಳಕ್ಕೆ ತಲುಪಿದರು. ಅಲ್ಲಿಗೆ ಹೋಗಿ ನೋಡಿದಾಗ ರೈತರು ತಮ್ಮ ಪಾಡಿಗೆ ಕೃಷಿ ಕಾಯಕದಲ್ಲಿ ತೊಡಗಿದರು. ಅಪಾಯದ ಮಟ್ಟ ಅರಿಯದ ರೈತರು ನಿತ್ಯಾವು ಗದ್ದೆಗೆ ಹೋಗಿ ಬರುವುದಾಗಿ ಹೇಳಿದ್ದಾರೆ. ಇಷ್ಟು ದಿನ ವಿದ್ಯುತ್‌ ಕಡಿತಗೊಂಡಿತ್ತು, ಈಗ ವಿದ್ಯುತ್‌ ಸಂಪರ್ಕವಾಗಿದ್ದರಿಂದ ತೋಟದಲ್ಲಿ ಬಾಳೇ ಕೆಲಸವೆಲ್ಲ ಹಾಗೇ ಉಳಿದಿದೆ. ಹೀಗಾಗಿ ಸಂಜೆ ತನಕ ಗದ್ದೆಯಲ್ಲಿಯೇ ಇದ್ದು ಬರುವುದಾಗಿ ರೈತರು ಹೇಳಿದ್ದಾರೆ. ಕಡೆಗೆ ರೈತರ ಮನವೊಲಿಸಿ ಅಧಿಕಾರಿಗಳು ಗ್ರಾಮಕ್ಕೆ ವಾಪಸ್‌ ಕರೆತಂದಿದ್ದಾರೆ.

ಸೇತುವೆ ನಿರ್ಮಾಣಕ್ಕೆ ಒತ್ತಾಯ

ರೈತರು ತಮ್ಮ ಹೊಲ, ತೋಟಕ್ಕೆ ಹೋಗಬೇಕಾದರೆ ಹರಿಯುವ ನದಿಯನ್ನು ದಾಟಲೇಬೇಕಂತೆ. ಮಕ್ಕಳ ಹೊಟ್ಟೆ ಬಟ್ಟೆಗೆ ಈ ಅಪಾಯವನ್ನೆಲ್ಲ ಮೀರಿ ಗದ್ದೆ ಕೆಲಸಕ್ಕೆ ಹೋಗಲೇಬೇಕಿದೆ ಎಂದಿರುವ ರೈತರು ನಮಗೆ ಒಂದು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ | Heavy Rain | ಸತತ ಮಳೆಗೆ ಸೋಮವಾರಪೇಟೆಯಲ್ಲಿ ಭೂಕುಸಿತ; ಆತಂಕದಲ್ಲಿ ಗ್ರಾಮಸ್ಥರು

Exit mobile version