ಮಂಡ್ಯ: ಕೋಲಾರದಲ್ಲಿ ಲೋಕಾಯುಕ್ತ (lokayukta) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಲಯದಿಂದ ಶಿಕ್ಷೆ ಪ್ರಕಟವಾಗಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆರ್‌ಟಿಒ ಅಧಿಕಾರಿಯಾಗಿದ್ದ ರಾಮಯ್ಯ ಮತ್ತು ಆತನ ಪತ್ನಿ ಲಲಿತಾಗೆ ಶಿಕ್ಷೆ ವಿಧಿಸಿ ಲೋಕಾಯುಕ್ತ ಕೋರ್ಟ್ ತೀರ್ಪು ನೀಡಿದೆ.
ಆರ್‌ಟಿಒ ಅಧಿಕಾರಿ ರಾಮಯ್ಯ, ಪತ್ನಿ ಲಲಿತಾ ಹೆಸರಿನಲ್ಲಿ ಮಾಡಿದ್ದ ಕೊಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಲೋಕಾಯುಕ್ತ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಧಿಕಾರಿ ಆಸ್ತಿಯಲ್ಲಿ ಸುಮಾರು ಶೇ.415.3 ಅಕ್ರಮ ಆಸ್ತಿ ಹೆಚ್ಚಳವಾಗಿರುವುದು ಪತ್ತೆಯಾಗಿತ್ತು. ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ರೂ 10,000 ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಇದನ್ನೂ ಓದಿ | ಲೋಕಾಯುಕ್ತಕ್ಕೆ ಹಲ್ಲಿದೆಯೇ, ಇಲ್ಲವೇ ನೀವೇ ನಿರ್ಧಾರ ಮಾಡಿ: ನ್ಯಾಯಮೂರ್ತಿ ಉತ್ತರ