ಬೆಂಗಳೂರು: ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯ ತಾಯಿ ಕೆಲಸಕ್ಕೆ ಹೊಗುವಾಗ ಸಂಬಂಧಿಕರ ಮನೆಯಲ್ಲಿ ನೋಡಿಕೊಳ್ಳಲು ಬಿಡುತ್ತಿದ್ದಳು. ಆ ಸಂದರ್ಭದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ್ದ ಖದೀಮರನ್ನು ಬಂಧಿಸಲಾಗಿದೆ.
ಸಂಬಂಧಿಕರನ್ನು ನಂಬಿ ಅವರ ಮನೆಯಲ್ಲಿ ಮಗುವನ್ನು ಬಿಟ್ಟ ಸಂದರ್ಭಗಳಲ್ಲಿ ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸಂಬಂಧಿ ಹಾಗೂ ಆತನ ಮಗ ಪ್ರತ್ಯೇಕವಾಗಿ ಹಲವು ಬಾರಿ ಬಾಲಕಿಗೆ ಕಿರುಕುಳ ನೀಡಿದ್ದಾರೆ. ಬಾಲಕಿಗೆ ಖಾಸಗಿ ಭಾಗದಲ್ಲಿ ಇನ್ಫೆಕ್ಷನ್ ಆದಾಗ ಪರಿಶೀಲಿಸಿದ ವೇಳೆ ಕೃತ್ಯ ಬಯಲಾಗಿದೆ.
ಇದನ್ನೂ ಓದಿ | Stabbing Case: ಚೂರಿ ಇರಿದು ಯುವಕನ ಕೊಲೆ ಮಾಡಿದ ಆಟೋ ಚಾಲಕ; ಕೇಳಿದಷ್ಟು ಬಾಡಿಗೆ ಕೊಡಲಿಲ್ಲವೆಂದು ಕೊಂದೇ ಬಿಟ್ಟ!
ಬಾಲಕಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಿ ಹಾಗೂ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.