Site icon Vistara News

Pro Pak Slogan: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಇಬ್ಬರ ಬಂಧನ

Pro Pak Slogans

ಬೆಂಗಳೂರು: ʼಪಾಕಿಸ್ತಾನ ಜಿಂದಾಬಾದ್ʼ ಘೋಷಣೆ (Pro Pak Slogan) ಕೂಗಿದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಜೆಪಿ ನಗರದ ಪಬ್‌ನಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದ ವೇಳೆ ಪಾಕ್‌ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಗುರಪ್ಪನಪಾಳ್ಯ ನಿವಾಸಿಗಳಾದ ಇನಾಯತ್ ಉಲ್ಲಾಖಾನ್, ಸೈಯದ್ ಮುಬಾರಕ್ ಬಂಧಿತ ಆರೋಪಿಗಳು. ಜೆ.ಪಿ. ನಗರ ಮೊದಲನೇ ಹಂತದಲ್ಲಿರುವ ಮೋಖಹಾಲಿಕ್ ಪಬ್‌ನಲ್ಲಿ‌ ಭಾರತ ಮತ್ತು ಆಸ್ಟ್ರೇಲಿಯಾ ಮ್ಯಾಚ್‌ ವೀಕ್ಷಿಸುತ್ತಿದ್ದಾಗ ಆರೋಪಿಗಳು ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾರೆ. ಇದಕ್ಕೆ ಅಲ್ಲಿದ್ದ ಕೆಲವರು ಆಕ್ಷೇಪಿಸಿದ್ದಾರೆ. ಆದರೂ ಅವರು ಕೂಗಾಡಿದ್ದಾರೆ. ಹೀಗಾಗಿ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಜೆ.ಪಿ ನಗರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದ್ಯಪಾನದ ನಶೆಯಲ್ಲಿ ಪಾಕ್‌ ಪರ ಘೋಷಣೆ ಕೂಗಿದ್ದೇವೆ ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.

ಇದನ್ನೂ ಓದಿ | Murder case : ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಗೆ ಬೀಸಾಕಿದ ಕಿಡಿಗೇಡಿಗಳು!

ನಕಲಿ ನೋಟು ಜಾಲದ ಮೇಲೆ NIA ದಾಳಿ; ಬಳ್ಳಾರಿಯಲ್ಲಿ ಒಬ್ಬ ಅರೆಸ್ಟ್‌

ನವದೆಹಲಿ/ಬೆಂಗಳೂರು: ರಾಷ್ಟ್ರೀಯ ತನಿಖಾ ದಳವು (National Investigation Agency) ನಕಲಿ ನೋಟು (Fake Currency) ಜಾಲದ ಮೇಲೆ ಮುಗಿಬಿದ್ದಿದೆ. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ (NIA Raid) ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ (One arrested in Ballary) ಹಿಡಿದಿದೆ. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ.

ನಾಲ್ಕು ರಾಜ್ಯಗಳಲ್ಲಿ ಏನೇನು ಸಿಕ್ಕಿದೆ, ಎಷ್ಟು ಜನ ಬಂಧನ?

ರಾಷ್ಟ್ರೀಯ ತನಿಖಾ ದಳವು ಏಕಕಾಲದಲ್ಲಿ ನಾಲ್ಕು ರಾಜ್ಯಗಳಲ್ಲಿ ದಾಳಿಯನ್ನು ಸಂಘಟಿಸಿತ್ತು. ನಕಲಿ ನೋಟುಗಳ ಮುದ್ರಣದ ಸ್ಪಷ್ಟ ಸುಳಿವನ್ನು ಪಡೆದೇ ಈ ದಾಳಿ ನಡೆದಿದ್ದು ಆರೋಪಿಗಳು ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.

ಗಡಿಯಾಚೆಯಿಂದ ಭಾರತಕ್ಕೆ ನಕಲಿ ನೋಟುಗಳು ಹರಿದು ಬರುತ್ತಿರುವ ಬಗ್ಗೆ ಸಂಶಯ ಮೂಡಿತ್ತು. ಈ ನಿಟ್ಟಿನಲ್ಲಿ ನವೆಂಬರ್‌ 24ರಂದು ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅದರ ಭಾಗವಾಗಿ ಆಳ ತನಿಖೆಗೆ ಇಳಿದ ಸಂಸ್ಥೆಗೆ ದೇಶದೊಳಗಿನ ದುಷ್ಟ ಪ್ರಯೋಗಗಳ ಸುಳಿವುಗಳು ಸಿಕ್ಕವು.

ಸಾಕಷ್ಟು ಅಧ್ಯಯನದ ಬಳಿಕ ಎನ್‌ಐಎ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಹುಲ್‌ ತಾನಾಜಿ ಪಾಟೀಲ್‌ ಅಲಿಯಾಸ್‌ ಜಾವೇದ್‌, ಉತ್ತರ ಪ್ರದೇಶದ ಶಹಜಹಾನ್‌ ಪುರ ಜಿಲ್ಲೆಯ ವಿವೇಕ್‌ ಠಾಕೂರ್‌ ಅಲಿಯಾಸ್‌ ಆದಿತ್ಯ ಸಿಂಗ್‌ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್‌ ಎಂಬವರ ಮೇಲೆ ಕಣ್ಣಿಟ್ಟಿತ್ತು ಮತ್ತು ಶನಿವಾರ ದಾಳಿ ಮಾಡಿ ಅವರನ್ನು ಬಂಧಿಸಿತು.

ಇದನ್ನೂ ಓದಿ | Road Accident : ಅತಿವೇಗ ತಂದ ಆಪತ್ತು; ಇಬ್ಬರ ಪ್ರಾಣ ಕಸಿದ ಅಪಘಾತಗಳು!

ಇದಲ್ಲದೆ ಬಿಹಾರ ಜಿಲ್ಲೆಯ ರೋಹ್ತಾಸ್‌ ಜಿಲ್ಲೆಯ ಶಶಿಭೂಷಣ್‌, ಮಹಾರಾಷ್ಟ್ರದ ಯಾವತ್ಮಲ್‌ ಜಿಲ್ಲೆಯ ಶಿವ ಪಾಟೀಲ್‌ ಅಲಿಯಾಸ್‌ ಭೀಮರಾವ್‌ ಅವರ ಮನೆಗಳಿಗೂ ದಾಳಿ ಮಾಡಲಾಗಿದೆ.

ವಿವೇಕ್‌ ಠಾಕೂರ್‌ ಮನೆಯಿಂದ 6600 ಮುಖ ಬೆಲೆಯ ಕರೆನ್ಸಿ, ಪ್ರಿಂಟಿಂಗ್‌ ಪೇಪರ್‌ ವಶಪಡಿಸಿಕೊಳ್ಳಲಾಗಿದೆ. ಠಾಕೂರ್‌ ಮತ್ತು ಪಾಟೀಲ್‌ ಗಡಿಯಾಚೆಯಿಂದಲೂ ಕರೆನ್ಸಿಗಳನ್ನು ತರಿಸಿಕೊಂಡು ಇಲ್ಲಿ ಪ್ರಸರಣ ಮಾಡುತ್ತಿದ್ದರು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version