Site icon Vistara News

Theft Case: ಭಟ್ಕಳ ಕಳ್ಳತನ ಪ್ರಕರಣದಲ್ಲಿ ಇಬ್ಬರ ಬಂಧನ, 12 ಲಕ್ಷ ರೂ. ಮೌಲ್ಯದ ವಸ್ತುಗಳ ಜಪ್ತಿ

Rs 12 lakh seized Confiscation of valuables in Bhatkal

ಭಟ್ಕಳ: ತಾಲೂಕಿನ ಪ್ರತಿಷ್ಠಿತ ರಿಬ್ಕೋ ಸಂಸ್ಥೆಯ ಮಾಲೀಕನ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ (Theft Case) ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಟೈಲ್ಸ್ ಫಿಟ್ಟಿಂಗ್ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಸಾಧಿಕ್ ಅಲ್ಲಾಭಕ್ಷ್ ಹಾಗೂ ಮುಜಮ್ಮಿಲ್  ರಹಮತುಲ್ಲಾ ಶೇಖ್‌ ಎಂದು ಗುರುತಿಸಲಾಗಿದೆ. ಇವರಿಂದ ಒಟ್ಟು 12 ಲಕ್ಷ ರೂ ಮೌಲ್ಯದ ವಸ್ತುಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ.

ಜೂನ್ 22ರಂದು ವೆಂಕಟಾಪುರದಲ್ಲಿರುವ ರಿಬ್ಕೋ ಸಂಸ್ಥೆಯ ಮಾಲೀಕನ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಆರೋಪಿಗಳು, ಕೋಣೆಯೊಳಗಿನ ಕಪಾಟಿನ ಒಳಗೆ ಇಟ್ಟಿದ್ದ ಲಾಕರ್ ಒಡೆದು ಒಟ್ಟು 14,50,000 ರೂಪಾಯಿ ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ಹಾಗೂ ಒಂದು ವಾಚ್‌ ಅನ್ನು ಲಾಕರ್ ಸಮೇತ ಕಳುವು ಮಾಡಿಕೊಂಡು ಪರಾರಿಯಾಗಿದ್ದರು. ಬಳಿಕ ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳಾದ ಮೊಹಮ್ಮದ್ ಸಾಧಿಕ್ ಅಲ್ಲಾಭಕ್ಷ ಮತ್ತು ಮುಜಮ್ಮಿಲ್ ರಹಮತುಲ್ಲಾ ಶೇಖ್‌

ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿ.ಐ ಜಯಕುಮಾರ್, ಡಿವೈಎಸ್ಪಿ ಶ್ರೀಕಾಂತ್‌. ಕೆ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ.ವಿ, ಪಿ.ಎಸ್.ಐಗಳಾದ ಶ್ರೀಧರ ನಾಯ್ಕ, ಮಯೂರ ಪಟ್ಟಣ ಶೆಟ್ಟಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.

ಇದನ್ನೂ ಓದಿ | Girls Harrassed : ಕಾಲೇಜು ಗೋಡೆ ಮೇಲೆ ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲ ಬರಹ; ಪುಂಡರ ಮೇಲೆ ಕಣ್ಣು

ಸಿಬ್ಬಂದಿ ಮಂಜುನಾಥ ಗೊಂಡ, ದೀಪಕ್, ವಿನಾಯಕ ಪಾಟೀಲ್, ಈರಣ್ಣಾ ಪೂಜಾರಿ, ನಿಂಗನಗೌಡ ಪಾಟೀಲ್ , ವಿನೋದ ಕುಮಾರ ಜ.ಬಿ, ಚಾಲಕ ಸಿಬ್ಬಂದಿ ದೇವರಾಜ ಮೊಗೇರ, ಜಿಲ್ಲಾ ಟೆಕ್ನಿಕಲ್ ಸೆಲ್ ಸಿಬ್ಬಂದಿ ಉದಯ ಗುನಗಾ, ರಮೇಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Exit mobile version