Site icon Vistara News

Boys Drown: ಮೀನು ಹಿಡಿಯಲು ಹೋಗಿ ಇಬ್ಬರು ಬಾಲಕರ ಸಾವು

Arsalan Khan and Anin Khan

ಬೆಂಗಳೂರು: ಮೀನು ಹಿಡಿಯಲು ಹೋಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಬನ್ನೇರುಘಟ್ಟ ರಸ್ತೆ ಬಳಿ ನಡೆದಿದೆ. ಶುಕ್ರವಾರ ಸಂಜೆ ಬಾಲಕರು ನಾಪತ್ತೆಯಾಗಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿರುವ ನೀರಿನ ತೊಟ್ಟಿಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ಬಾಲಕರು ನೀರಿನಲ್ಲಿ (Boys Drown) ಮುಳುಗಿದ್ದಾರೆ.

ಅರ್ಸಲನ್ ಖಾನ್ (9) ಮತ್ತು ಅನೀನ್ ಖಾನ್ (7) ಮೃತ ಬಾಲಕರು. ಬಾಲಕರು ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಭಾನುವಾರ ಬನ್ನೇರುಘಟ್ಟ ರಸ್ತೆಯ ಪಾಳು ಬಂಗಲೆ ಬಳಿ ಶೋಧನೆ ನಡೆಸಿದಾಗ ಬಾಲಕರು ಮೃತಪಟ್ಟಿರುವುದು ತಿಳಿದುಬಂದಿದೆ. ಟ್ಯಾಂಕ್‌ನಿಂದ ಬಾಲಕರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ. ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Assault Case : ಉದ್ಯಮಿಗೆ ಮಚ್ಚು ಬೀಸಿದ ಭೂಗಳ್ಳರು!

ಬೈಕ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

ಬೈಕ್‌ಗೆ ಕಾರು ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ನಗರದ ಪೀಣ್ಯ ಮೇಲ್ಸೇತುವೆ ಮೇಲೆ ನಡೆದಿದೆ. ಮಗನೊಂದಿಗೆ ಮಹಿಳೆ ಬೈಕ್‌ನಲ್ಲಿ ನೆಲಮಂಗಲದ ಕಡೆ ಹೋಗುತ್ತಿದ್ದಾಗ ಹಿಂದೆಯಿಂದ ಕಾರು ಡಿಕ್ಕಿಯಾಗಿ ಅಪಘಾತ ನಡೆದಿದೆ. ಅಶ್ವಿನಿ ಮೃತ ಮಹಿಳೆ. ಘಟನೆ ಸಂಬಂಧ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಾಘಾತ ಮಾಡಿದ್ದ ಚಾಲಕನನ್ನು ಕಾರು ಸಮೇತ ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಕೊಲೆ

Accused Arrested

ಚಿಕ್ಕಬಳ್ಳಾಪುರ: ಬೈಕ್ ರಿಪೇರಿ ಮಾಡಿಸಿಕೊಂಡು ಹಣ ಕೊಡದೆ ಸತಾಯಿಸಿದ್ದಲ್ಲದೇ ಧಮ್ಕಿ ಹಾಕಿದ್ದಕ್ಕೆ ಸಿಟ್ಟಿಗೆದ್ದ ನಾಲ್ವರು ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು (Murder case) ಕೊಂದಿದ್ದಾರೆ. ಗೌರಿಬಿದನೂರು ತಾಲೂಕಿನ ಚನ್ನಬೈರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚನ್ನಬೈರನಹಳ್ಳಿ ಗ್ರಾಮದ ಸತ್ಯನಾರಾಯಣ (45) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಕಲ್ಲೋಡಿ ಎಂಬಲ್ಲಿ ಚೇತನ್ ಗ್ಯಾರೇಜ್ ನಡೆಸುತ್ತಿದ್ದ. ಸತ್ಯನಾರಾಯಣ ತನ್ನ ಬೈಕ್ ರಿಪೇರಿ ಮಾಡಿಸಿದ್ದ. ಆದರೆ ಹಣ ಕೊಡದೇ ಸತಾಯಿಸುತ್ತಲೇ ಇದ್ದ. ಒಮ್ಮೆ ಚೇತನ್‌ ಹಣ ಕೇಳಿದ್ದಕ್ಕೆ ಸತ್ಯನಾರಾಯಣ ಧಮ್ಕಿ ಹಾಕಿದ್ದ ಎನ್ನಲಾಗಿದೆ.

ಇದನ್ನೂ ಓದಿ: Road Accident : ಬೈಕ್‌ಗಳ ನಡುವೆ ಡಿಕ್ಕಿ; ಬಿಎಸ್‌ಎಫ್‌ ಉದ್ಯೋಗಿ, ಯೂಟ್ಯೂಬರ್‌ ಸಾವು!

ಬಂಧಿತ ಆರೋಪಿಗಳು

ಧಮ್ಕಿ ಹಾಕಿದ್ದಕ್ಕೆ ಚೇತನ್‌ ಕೋಪಗೊಂಡಿದ್ದ. ಚೇತನ್‌ ತನ್ನ ಸ್ನೇಹಿತ ಜ್ವಾಲೇಂದ್ರ ಹಾಗೂ ಓರ್ವ ಅಪ್ರಾಪ್ತ ಬಾಲಕ ಸೇರಿ ಸತ್ಯನಾರಾಯಣನಿಗೆ ದೊಣ್ಣೆಗಳಿಂದ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಸತ್ಯ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.

Exit mobile version