Site icon Vistara News

Children drowned : ಆಟವಾಡುತ್ತಾ ಮೀನು ಹಿಡಿಯಲು ಕಾವೇರಿ ನದಿಗೆ ಹೋದ ಇಬ್ಬರು ಮಕ್ಕಳು ನೀರುಪಾಲು

Children drowned

#image_title

ಮಡಿಕೇರಿ: ಆಟವಾಡುವ ನೆಪ ಮತ್ತು ಮೀನು ಹಿಡಿಯುವ ಪ್ರಯೋಗ ಮಾಡಲೆಂದು ಕಾವೇರಿ‌ ನದಿ ತೀರಕ್ಕೆ ಹೋಗಿದ್ದ ಇಬ್ಬರು ಪುಟ್ಟ ಬಾಲಕರು ನೀರಿನಲ್ಲಿ ಮುಳುಗಿ (Children drowned) ಮೃತಪಟ್ಟಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಏತ ನೀರಾವರಿ ಘಟಕದ ಸಮೀಪದ ಕಾವೇರಿ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಪೃಥ್ವಿ (7), ಪ್ರಜ್ವಲ್ (4) ಇವರೆ ನೀರಿನಲ್ಲಿ ಮುಳುಗಿ ಮೃತರಾದ ಬಾಲಕರು.

ಕೂಡ್ಲೂರು‌ ಬಳಿ ಮಾವಿನತೋಪು ಸಮೀಪ ಕಾವೇರಿ‌ ನದಿಯಲ್ಲಿ ಮೀನು‌ ಹಿಡಿಯಲು ತೆರಳಿದ ಸಂದರ್ಭ ಆಕಸ್ಮಿಕವಾಗಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಮೃತ ಬಾಲಕರು ಸತೀಶ್ ಮತ್ತು ನಾಗರಾಜ್ ಎಂಬ ಸಹೋದರರ ಮಕ್ಕಳು.

ಕಾವೇರಿ ನದಿಯಲ್ಲಿ ಮಕ್ಕಳು ಮುಳುಗಿದ ಜಾಗ

ಕೂಡ್ಲೂರು‌ ನಿವಾಸಿ ಕೂಲಿ ಕಾರ್ಮಿಕ ನಾಗರಾಜ್ ಎಂಬವರ ಪುತ್ರ ಪೃಥ್ವಿ, ಆಟೋ ಚಾಲಕ ಸತೀಶ್ ಎಂಬವರ ಪುತ್ರ ಪ್ರಜ್ವಲ್ ಇಬ್ಬರು ಸಂಬಂಧದಲ್ಲಿ‌ ಸಹೋದರರು. ಇವರ ಮನೆಯ ಸಮೀಪ ಜಮೀನಿಗೆ ಹೊಂದಿಕೊಂಡಂತೆ ಕಾವೇರಿ ನದಿ ಹರಿಯುತ್ತದೆ.

ಭಾನುವಾರ ಬೆಳಗ್ಗೆ ಇವರಿಬ್ಬರು ಆಟವಾಡುತ್ತಾ ಮಿನು ಹಿಡಿಯೋಣ ಎಂದು ಕಾವೇರಿ ನದಿ ಪಾತ್ರಕ್ಕೆ ಹೋಗಿದ್ದರು. ಆಗ ಅಚಾನಕ್ಕಾಗಿ ಈ ದುರ್ಘಟನೆ ಸಂಭವಿಸಿದೆ.

ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕಿದಾಗ ಅವರು ನದಿ ಬದಿಗೆ ಹೋದ ಕುರುಹುಗಳು ಕಂಡಿವೆ. ಬಳಿಕ ಹುಡುಕಾಡಿದಾಗ ಮಕ್ಕಳ ಮೃತದೇಹ ಸಿಕ್ಕಿದೆ.

ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ‌ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : Drowned in channel water : ಬಟ್ಟೆ ತೊಳೆಯಲು ಕಾಲುವೆಗೆ ಇಳಿದ ಯುವಕ, ಬಾಲಕ ನೀರುಪಾಲು

Exit mobile version