Site icon Vistara News

Malleswaram Blast: ಮಲ್ಲೇಶ್ವರ ಬಾಂಬ್‌ ಸ್ಫೋಟ ಪ್ರಕರಣ; ಇಬ್ಬರಿಗೆ 7 ವರ್ಷ ಜೈಲು

Malleswaram Blast

Malleswaram Blast

ಬೆಂಗಳೂರು: ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ 2013ರಲ್ಲಿ ನಡೆದ ಬಾಂಬ್‌ ಸ್ಫೋಟಕ್ಕೆ (Malleswaram Blast) ಸಂಬಂಧಿಸಿದಂತೆ ಇಬ್ಬರಿಗೆ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್‌-ಉಮಾ ಸಂಘಟನೆ ಸದಸ್ಯರಾದ ಜಾನ್‌ ನಾಸಿರ್‌ ಹಾಗೂ ಡ್ಯಾನಿಯಲ್‌ ಪ್ರಕಾಶ್‌ಗೆ ಸಿಸಿಎಚ್‌ 50ನೇ ನ್ಯಾಯಾಲಯವು ಜೈಲು ಶಿಕ್ಷೆಯ ಜತೆಗೆ 50 ಸಾವಿರ ರೂ. ದಂಡ ವಿಧಿಸಿದೆ.

ಕೋರ್ಟ್‌ನಲ್ಲಿ ಇಬ್ಬರೂ ಅಪರಾಧ ಒಪ್ಪಿಕೊಂಡ ಬಳಿಕ ನ್ಯಾಯಾಲಯವು ಶಿಕ್ಷೆ ವಿಧಿಸಿದೆ. ಇನ್ನು ಪ್ರಕರಣದಲ್ಲಿ ಬಂಧಿತರಾಗಿರುವ 14 ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರಿದಿದೆ. ಇಬ್ಬರಿಗೆ ಎನ್‌ಐಎ ವಿಶೇಷ ನ್ಯಾಯಾಧೀಶ ಗಂಗಾಧರ್‌ ಅವರು ಶಿಕ್ಷೆ ಪ್ರಕಟಿಸಿದರು. ಇನ್ನು ಸರ್ಕಾರದ ಪರ ವಿಶೇಷ ಅಭಿಯೋಜಕರಾಗಿ ರವೀಂದ್ರ ವಾದ ಮಂಡಿಸಿದರು.

2013ರ ಏಪ್ರಿಲ್‌ 17ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ನಡೆದಿತ್ತು. ಹಲವರು ಗಂಭೀರ ಗಾಯಗೊಂಡು ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿತ್ತು. ಪೊಲೀಸರು ಬಾಂಬ್ ಸ್ಫೋಟ ನಡೆಸಿದ ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಎಲ್ಲ ಆರೋಪಿಗಳು ರಾಜ್ಯದ ನಾನಾ ಜೈಲುಗಳಲ್ಲಿ ವಿಚಾರಣಾಧೀನ ಬಂಧಿಗಳಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿಯೂ ಕೈದಿಗಳಿದ್ದಾರೆ.

ಇದನ್ನೂ ಓದಿ: ಹತ್ಯೆಯಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ನ ಲಾಯರ್ ಮನೆ ಪಕ್ಕದಲ್ಲೇ ಕಚ್ಚಾ ಬಾಂಬ್ ಸ್ಫೋಟ!

2008ರಲ್ಲಿ ಬೆಂಗಳೂರಿನ ಸರಣಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬ್ದುಲ್‌ ನಾಸೀರ್‌ ಮದನಿಯನ್ನು ಬಂಧಿಸಿದ ಕಾರಣ ಬಿಜೆಪಿ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಅಲ್-ಉಮಾ ಸಂಘಟನೆ ಸದಸ್ಯರು ಬಿಜೆಪಿ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಬೈಕ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಇರಿಸಿ ಸ್ಫೋಟಿಸಿದ್ದರು. ಘಟನೆಯಲ್ಲಿ 12 ಪೊಲೀಸರು ಹಾಗೂ 6 ನಾಗರಿಕರು ಗಾಯಗೊಂಡಿದ್ದರು.

Exit mobile version