Site icon Vistara News

ಮಕ್ಕಳ ಅಶ್ಲೀಲ ವಿಡಿಯೊ ಫೇಸ್‌ ಬುಕ್‌ಗೆ ಅಪ್ಲೋಡ್:‌ ಶಿವಮೊಗ್ಗ ಜಿಲ್ಲೆಯ ಇಬ್ಬರ ಮೇಲೆ ಕೇಸ್‌, ಅಮೆರಿಕದಿಂದ ಬಂದ ಮಾಹಿತಿ!

sex

ಶಿವಮೊಗ್ಗ: ಮಕ್ಕಳ ಅಶ್ಲೀಲ ವಿಡಿಯೊ ಮತ್ತು ಚಿತ್ರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವುದು ತೀವ್ರ ಶಿಕ್ಷಾರ್ಹ ಅಪರಾಧವಾಗಿದೆ. ಅದರ ಜತೆಗೆ ಇಂಟರ್ನೆಟ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕುವುದು ಕೂಡಾ ದಂಡನಾರ್ಹ. ಈ ರೀತಿ ಅಪರಾಧ ಮಾಡಿದವರ ವಿವರಗಳನ್ನು ಸೈಬರ್‌ ಪೊಲೀಸರಿಗೆ ನೀಡುವ ವ್ಯವಸ್ಥೆ ಇಂಟರ್ನೆಟ್‌ನಲ್ಲೇ ಇದೆ. ಇಷ್ಟಾದರೂ ಕೆಲವರು ಮಕ್ಕಳ ಚಿತ್ರಗಳನ್ನು ಅಪ್‌ಲೋಡ್‌ ಮಾಡುವುದು, ಮಕ್ಕಳ ಅಶ್ಲೀಲ ವಿಡಿಯೊಗಳನ್ನು ಹುಡುಕುವ ಚಟವನ್ನು ಮುಂದುವರಿಸಿದ್ದಾರೆ. ಅಂಥವರಿಗೆ ಬಿಸಿ ಮುಟ್ಟಿಸಬಹುದಾದ ಘಟನೆಯೊಂದು ಶಿವಮೊಗ್ಗದಿಂದ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮತ್ತು ಶಿಕಾರಿಪುರಕ್ಕೆ ಸೇರಿದ ಇಬ್ಬರು ಫೇಸ್‌ ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊ ಅಪ್‌ ಲೋಡ್‌ ಮಾಡಿದ ಕಾರಣಕ್ಕಾಗಿ ಅವರ ಶಿವಮೊಗ್ಗದ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇದು ನೇರವಾಗಿ ಇಲ್ಲಿನ ಪೊಲೀಸರೇ ಕಂಡುಕೊಂಡ ವಿಚಾರವೇನಲ್ಲ.

ಇವರ ಕುಕೃತ್ಯದ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ಮೊದಲ ಮಾಹಿತಿ ಲಭ್ಯವಾಗಿರುವುದು ಅಮೆರಿಕದಿಂದ. ಹೌದು ಅಲ್ಲಿ ಈ ವಿಚಾರವನ್ನು ಪತ್ತೆ ಹಚ್ಚಿದ ಸೈಬರ್‌ ಪೊಲೀಸರು ಸೈಬರ್‌ ಟಿಪ್‌ ಲೈನ್‌ ಮೂಲಕ ಬೆಂಗಳೂರಿಗೆ ಮಾಹಿತಿ ರವಾನಿಸಿದ್ದಾರೆ. ಇದೀಗ ಬೆಂಗಳೂರಿನ ಸಿಐಡಿ ನಿರ್ದೇಶನದ ಮೇರೆಗೆ ಶಿವಮೊಗ್ಗ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆಯೂ ಇಂಟರ್ನೆಟ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊವನ್ನು ಹುಡುಕಾಡಿದ್ದಾರೆಂಬ ಕಾರಣಕ್ಕಾಗಿ ಕೋಲಾರದ ಇಬ್ಬರು ಯುವಕರನ್ನು ಸೆನ್‌ ಪೊಲೀಸರು ಬಂಧಿಸಿದ್ದರು. ಜತೆಗೆ ರಾಜ್ಯದಲ್ಲಿ ಇಂಥ ನೂರಾರು ಪ್ರಕರಣಗಳಿವೆ ಎಂದು ಆಗ ಹೇಳಲಾಗಿತ್ತು. ಈಗ ಇಂಟರ್ನೆಟ್‌ನಲ್ಲಿ ಏನು ಸರ್ಚ್‌ ಮಾಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳು ಸಿಗುತ್ತವೆ. ಹೀಗಾಗಿ ಅಪರಾಧಿಗಳು ಸೈಬರ್‌ ನೆಟ್‌ ನೊಳಗೇ ಸಿಕ್ಕಿಬೀಳುತ್ತಾರೆ.

ಇದನ್ನೂ ಓದಿ | murugha seer | ಮತ್ತಿನ ಔಷಧ ಬೆರೆಸಿದ ಸೇಬು ತಿನ್ನಿಸಿ ಮಕ್ಕಳ ದುರ್ಬಳಕೆ, ಒಬ್ಬ ಹುಡುಗಿಯ Rape and Murder!

Exit mobile version