ವಿಜಯಪುರ: ಶಾಲೆಯ ಗೋಡೆ ಕಲ್ಲುಗಳು ಕುಸಿದು ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ನಗರದ (Vijayapura News) ಗೋಲಗುಂಬಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿಥಿಲ ಕಟ್ಟಡದಲ್ಲಿದ್ದ ನೀರಿನ ತೊಟ್ಟಿಯ ಬಳಿ ಕೈತೊಳೆಯುತ್ತಿದ್ದ ವೇಳೆ ಗೋಡೆ ಕಲ್ಲು ಕುಸಿದು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.
ಜುನೇರಾ ಚೋಕದಾರ್ ಹಾಗೂ ಹುಷ್ದಾ ಫತೇಪೂರ ಗಾಯಾಳುಗಳು. ನಗರದ ಗೋಲಗುಂಬಜ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂಬರ್ 1 ರಲ್ಲಿ ಅವಘಡ ನಡೆದಿದೆ. ಎಂಟನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ತಲೆ ಮೇಲೆ ಗೋಡೆ ಕಲ್ಲುಗಳು ಬಿದ್ದ ಹಿನ್ನೆಲೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜುನೇರಾ ವೈದ್ಯರು ಎಂಟು ಹೊಲಿಗೆ ಹಾಕಲಾಗಿದೆ.
ಇದನ್ನೂ ಓದಿ | ಬೀದಿ ದೀಪ ಸರಿಪಡಿಸುವಾಗ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು; ಕಂಬದಲ್ಲೇ ನೇತಾಡಿದ ಶವ
ಪೆಟ್ರೋಲ್ ಟ್ಯಾಂಕರ್ ಡಿಕ್ಕಿಯಾಗಿ ವೃದ್ಧನಿಗೆ ಗಾಯ
ದೊಡ್ಡಬಳ್ಳಾಪುರ: ಬೈಕ್ ಮತ್ತು ಪೆಟ್ರೋಲ್ ಟ್ಯಾಂಕರ್ ನಡುವೆ ಅಪಘಾತವಾಗಿ, ವೃದ್ಧರೊಬ್ಬರು ಗಾಯಗೊಂಡಿರುವ ಘಟನೆ ನಗರದ ಟಿ.ಬಿ. ಸರ್ಕಲ್ ಬಳಿ ನಡೆದಿದೆ.
ಹನುಮಂತರಾಯಪ್ಪ (60) ಅಪಘಾತಕ್ಕೆ ಒಳಗಾದ ವ್ಯಕ್ತಿ. ದೊಡ್ಡಬಳ್ಳಾಪುರದ ಕೆಳಗಿನಜೂಗಾನಹಳ್ಳಿಯ ನಿವಾಸಿಯಾದ ಇವರು, ದೊಡ್ಡಬಳ್ಳಾಪುರದಿಂದ ದಾಬಸ್‌ಪೇಟೆ ಕಡೆ ಪ್ರಯಾಣಿಸುವ ವೇಳೆ ಘಟನೆ ನಡೆದಿದೆ. ವೃದ್ಧನ ಕೈ ಕಾಲುಗಳಿಗೆ ಗಾಯಗಳಾಗಿವೆ.
ಬೈಕ್ ಮೇಲೆ ಟ್ಯಾಂಕರ್ ಹಿಂಬದಿ ಚಕ್ರ ಹರಿದ ಕಾರಣ ಬೈಕ್ ನಜ್ಜುಗುಜ್ಜಾಗಿದ್ದು, ಗಾಯಾಳುವನ್ನು ದೊಡ್ಡಬಳ್ಳಾಪುರದ ಸರಕಾರಿ ಆಸ್ಪತ್ರೆಗೆ ರವಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆಯ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.