ಬಾಗಲಕೋಟೆ: ಆಕಸ್ಮಿಕವಾಗಿ ರೈಫಲ್‌ನಿಂದ ಗುಂಡು ಹಾರಿ ಇಬ್ಬರು ಯೋಧರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಮುಧೋಳದ ರನ್ನ ವಸತಿ ಶಾಲೆಯಲ್ಲಿ ನಡೆದಿದೆ. ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ್ದ ಯೋಧರು, ಕರ್ತವ್ಯ ಮುಗಿಸಿ ರೈಫಲ್‌ಗಳನ್ನು (Rifle Misfires) ಹಿಂದಿರುಗಿಸುವ ವೇಳೆ ಅವಘಡ ನಡೆದಿದೆ.
ಬಿಹಾರ ಮೂಲದ ದಿನೇಶ್ ಕುಮಾರ್ ಝಾ (38), ಅರುಣಾಚಲ ಪ್ರದೇಶದ ಲಕ್ಷ್ಮಣ ನಿತ್ಯಂಗ್ (44) ಗಾಯಾಳುಗಳು. ಭಾನುವಾರ ರಾತ್ರಿ ಚುನಾವಣಾ ಕರ್ತವ್ಯ ಮುಗಿಸಿ ಸೋಮವಾರ ಬೆಳಗ್ಗೆ ರೈಫಲ್‌ಗಳನ್ನು ಹಿಂದಿರುಗಿಸುವಾಗ ಆಕಸ್ಮಿಕವಾಗಿ ರೈಫಲ್‌ನಿಂದ ಗುಂಡು ಸಿಡಿದಿದೆ. ಈ ವೇಳೆ ದಿನೇಶಕುಮಾರ್ ಝಾ ಎಡ ಮೊಳಕಾಲಿಗೆ ಹಾಗೂ ಲಕ್ಷ್ಮಣ ನಿತ್ಯಂಗ್ ಬಲಪಾದಕ್ಕೆ ಗಾಯವಾಗಿದೆ. ತಕ್ಷಣ ಇಬ್ಬರನ್ನೂ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ | Murder Case: ಮದ್ಯ ವ್ಯಸನಿ ಮಹಿಳೆಯಿಂದ ಯುವಕನ ಕೊಲೆ; ಮೊಬೈಲ್ ಕೇಳಿದಳು, ಕೊಡದೆ ಇದ್ದಾಗ ಇರಿದೇ ಬಿಟ್ಟಳು!
Murder Case: ಆಸ್ತಿಗಾಗಿ ತಮ್ಮನ ಮೇಲೆ ಕಾರು ಹರಿಸಿದ ಅಣ್ಣ; ಹತ್ಯೆಕೋರನಿಗಾಗಿ ಪೊಲೀಸರ ಹುಡುಕಾಟ
ಚಿತ್ರದುರ್ಗ: ಅಣ್ಣನೊಬ್ಬ ಆಸ್ತಿಗಾಗಿ ತಮ್ಮನ ಮೇಲೆ ಕಾರು ಹರಿಸಿ ಕೊಲೆ (Murder Case) ಮಾಡಿರುವ ಘಟನೆ ಹೊಸದುರ್ಗ ತಾಲೂಕಿನ ಚಿಕ್ಕ ಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ. ರಮೇಶ್ ಮೃತ ದುರ್ದೈವಿ. ಲಿಂಗದೇವರು ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.
ಸೋಮವಾರ (ಮೇ.1) ಮಧ್ಯಾಹ್ನದ ಹೊತ್ತು ರಮೇಶ್ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಲಿಂಗದೇವರು ರಮೇಶ್ ಮೇಲೆ ಹರಿಸಿದ್ದಾನೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ರಮೇಶ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಆಸ್ತಿ ವಿಚಾರಕ್ಕಾಗಿ ಇವರಿಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಆರೋಪಿ ಲಿಂಗದೇವರು ಚಿಕ್ಕ ಬ್ಯಾಲದಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನಾಗಿದ್ದ ಎಂದು ತಿಳಿದು ಬಂದಿದೆ. ಸೋಮವಾರವೂ ಆಸ್ತಿಗಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆದಿದ್ದು, ಸಿಟ್ಟಿಗೆದ್ದ ಲಿಂಗದೇವರು, ರಮೇಶ್ ನಡೆದುಕೊಂಡು ಹೋಗುವಾಗ ಕಾರು ಹರಿಸಿ ಹತ್ಯೆ ಮಾಡಿ ಪರಾರಿ ಆಗಿದ್ದಾನೆ.
ಇದನ್ನೂ ಓದಿ: Elephant Attack: ಹಸು ಮೇಯಿಸಲು ಹೋದ ವ್ಯಕ್ತಿ ಮೇಲೆ ಕಾಡಾನೆ ದಾಳಿ; ಸ್ಥಳದಲ್ಲೇ ಮೃತ್ಯು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊಸದುರ್ಗ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.