Site icon Vistara News

Karnataka Election: ರಾಜ್ಯದಲ್ಲಿ ಮೋದಿ ಅಬ್ಬರ ಮಾತ್ರವಲ್ಲ, ಇಬ್ಬರು ಜ್ಯೂನಿಯರ್‌ ಮೋದಿಗಳಿಂದಲೂ ಪ್ರಚಾರ

Two Junior Modi's Are Taking Part In Campaign For BJP In Karnataka

Two Junior Modi's Are Taking Part In Campaign For BJP In Karnataka

ದಾವಣಗೆರೆ/ಬೆಂಗಳೂರು: ದೇಶದ ಯಾವುದೇ ಮೂಲೆಯಲ್ಲಿ ಚುನಾವಣೆ (Karnataka Election) ನಡೆಯಲಿ. ಅಲ್ಲೆಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇರುತ್ತದೆ. ಮೋದಿ ಪ್ರಚಾರಕ್ಕೆ ಹೋದರೆ ಬಿಜೆಪಿ ಮತಗಳಿಕೆಯಲ್ಲಿ ಭಾರಿ ಬದಲಾವಣೆಯಾಗುತ್ತದೆ. ಹಾಗೆಯೇ, ಕರ್ನಾಟಕದಲ್ಲಿಯೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಸಾಲು ಸಾಲು ಸಮಾವೇಶ, ರೋಡ್‌ ಶೋ ಮೂಲಕ ಮತ ಸೆಳೆಯುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ನರೇಂದ್ರ ಮೋದಿ ಅವರು ಮಾತ್ರವಲ್ಲ, ಮೋದಿ ಅವರನ್ನೇ ಹೋಲುವ ಇಬ್ಬರು ಜ್ಯೂನಿಯರ್‌ ಮೋದಿಗಳು ಕೂಡ ಅಲೆ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಹಾಗೆಯೇ, ಇವರು ಯಾರು, ಇವರ ಹಿನ್ನೆಲೆ ಎಂಬುದರ ಬಗ್ಗೆ ಜನರಿಗೆ ಕುತೂಹಲವೂ ಮೂಡಿದೆ. ಇವರ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸದಾನಂದ ನಾಯ್ಕ್‌ AKA ಜ್ಯೂನಿಯರ್‌ ಮೋದಿ

ನರೇಂದ್ರ ಮೋದಿ ಅವರನ್ನೇ ಹೋಲುವ ಸದಾನಂದ ನಾಯ್ಕ್‌ ಅವರು ದಾವಣಗೆರೆಯ ಮಾಯಕೊಂಡ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪರ ಚುನಾವಣೆ ಪ್ರಚಾರ ಕೈಗೊಂಡರು. ಮಾಯಕೊಂಡ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಮೊದಲೇ ಜ್ಯೂನಿಯರ್‌ ಮೋದಿ ರೋಡ್‌ ಶೋ ನಡೆಸಿದರು. ಇವರ ರೋಡ್‌ ಶೋ ವೇಳೆಯೂ ನೂರಾರು ಜನ ಜಮಾಯಿಸಿದ್ದರು.

ಜ್ಯೂನಿಯರ್‌ ಮೋದಿ ರೋಡ್‌ ಶೋ

ಸದಾನಂದ ನಾಯ್ಕ್‌ ಅವರು ಉಡುಪಿ ಸಮೀಪದ ಹಿರಿಯಡ್ಕ ನಿವಾಸಿಯಾಗಿದ್ದು, ಜ್ಯೂನಿಯರ್‌ ಮೋದಿ ಅಂತಲೇ ಗುರುತಿಸಿಕೊಂಡಿದ್ದಾರೆ. ಜನ ಕೂಡ ಮೋದಿಜಿ ಎಂದು ಕೈ ಕುಲುಕುತ್ತಾರೆ. ಇವರ ವೇಷ, ಧರಿಸುವ ಉಡುಪು ಹಾಗೂ ಗಡ್ಡವು ಥೇಟ್‌ ಮೋದಿ ಅವರ ಶೈಲಿಯನ್ನೇ ಹೋಲುತ್ತದೆ. ಹಾಗಾಗಿ, ಇವರು ಖ್ಯಾತಿ ಗಳಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಸದಾನಂದ ನಾಯ್ಕ್‌ ಅವರನ್ನು ಪ್ರಚಾರಕ್ಕೆ ಆಮಂತ್ರಿಸುತ್ತಾರೆ. ನಾಯ್ಕ್‌ ಅವರೂ ಪ್ರಚಾರ ನಡೆಸುತ್ತಾರೆ.

ಬೆಂಗಳೂರಿನ ವಸಂತ ಕುಮಾರ್‌

ಬೆಂಗಳೂರಿನ ದಾಸರಹಳ್ಳಿಯ ಡಿಫೆನ್ಸ್‌ ಕಾಲೋನಿ ನಿವಾಸಿಯಾಗಿರುವ ವಸಂತ ಕುಮಾರ್‌ ಅವರು ಕೂಡ ನರೇಂದ್ರ ಮೋದಿ ಅವರನ್ನೇ ಹೋಲುತ್ತಾರೆ. ಇವರು ಕೂಡ ಜ್ಯೂನಿಯರ್‌ ಮೋದಿ ಎಂದೇ ಖ್ಯಾತಿಯಾಗಿದ್ದು, ಶನಿವಾರ ಸಂಜೆ ಮೋದಿ ಅವರು ಬೆಂಗಳೂರಿನಲ್ಲಿ ರೋಡ್‌ ಆರಂಭಿಸುವ ಮೊದಲು ಇವರು ಆಗಮಿಸಿ ಜನರ ಗಮನ ಸೆಳೆದರು.

ವಿಸ್ತಾರ ಜತೆ ಜ್ಯೂನಿಯರ್‌ ಮೋದಿ ಮಾತುಕತೆ

ಇದನ್ನೂ ಓದಿ: Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಅಬ್ಬರ; ಇಲ್ಲಿವೆ ಫೋಟೊಗಳು

“ನಾನು ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ. ನಾನು ಸ್ವಂತ ಖರ್ಚಿನಲ್ಲಿ ಅವರಂತೆಯೇ ಉಡುಪು ಧರಿಸುತ್ತೇನೆ. ಮೋದಿ ಅವರು ಪ್ರಧಾನಿಯಾದ ಬಳಿಕ ದೇಶವು ಜಗತ್ತಿನಲ್ಲಿ ಐದನೇ ಬೃಹತ್‌ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಅವರು ದೇಶದ ಅಭಿವೃದ್ಧಿಗೆ ಕಾರಣಾಗಿದ್ದಾರೆ. ಹಾಗಾಗಿ, ನಾನು ಅವರ ಅಭಿಮಾನಿಯಾಗಿದ್ದೇನೆ” ಎಂದು ವಿಸ್ತಾರ ನ್ಯೂಸ್‌ಗೆ ವಸಂತ ಕುಮಾರ್‌ ತಿಳಿಸಿದ್ದಾರೆ.

Exit mobile version