Site icon Vistara News

Road Accident: ಕಾರು-ಬೊಲೆರೊ ಮುಖಾಮುಖಿ ಡಿಕ್ಕಿ; ಇಬ್ಬರ ಸಾವು, 20 ಜನರಿಗೆ ಗಾಯ

#image_title

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಬಳಿ ಕಾರು ಮತ್ತು ಬೊಲೆರೊ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ (Road Accident) ಇಬ್ಬರು ಮೃತಪಟ್ಟು, 20 ಜನರಿಗೆ ಗಾಯಗಳಾಗಿವೆ. ಕೊಳ್ಳೆಗಾಲ ತಾಲೂಕಿನ ಮೊದಲಿಯಮ್ಮ (60), ಜಾಸ್ಮಿನ್ ಮೇರಿ (58) ಮೃತ ಮಹಿಳೆಯರು.

ಬೊಲೆರೋ ವಾಹನದಲ್ಲಿ ದೇವಸ್ಥಾನಕ್ಕೆ ಹೋಗಿ ವಾಪಸ್ಸಾಗುವ ವೇಳೆ ಎದುರಿಗೆ ಬಂದ ಕಾರಿನೊಂದಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೆ ಮೃತಪಟ್ಟಿದ್ದು, ಗಾಯಗೊಂಡ 20ಕ್ಕೂ ಹೆಚ್ಚು ಜನರನ್ನು ಮಳವಳ್ಳಿ ಆಸ್ಪತ್ರೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident: ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಬೈಕ್‌ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಕಾವೇರಿ ನದಿಯಲ್ಲಿ ಮುಳುಗಿ ತಂದೆ-ಮಗ ಸಾವು

ಕೊಡಗು: ಕಾವೇರಿ ನದಿಯಲ್ಲಿ ಮುಳುಗಿ ತಂದೆ-ಮಗ ಮೃತಪಟ್ಟಿರುವುದು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಚಿಕ್ಕ ಬೆಟ್ಟಗೇರಿಯಲ್ಲಿ ನಡೆದಿದೆ. ಮಣಿಕಂಠ (47), ಪುತ್ರ ಪ್ರೀತಂ (15) ಮೃತ ದುರ್ದೈವಿಗಳು.

ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿದ್ದ ತಂದೆ ಮಣಿಕಂಠ ಮಂಗಳವಾರ ರಾತ್ರಿ ಶಬರಿಮಲೆಗೆ ತೆರಳಬೇಕಿತ್ತು. ಆದರೆ, ಸಂಜೆ ಸ್ನಾನಕ್ಕೆಂದು ಮಗನ ಜತೆಗೆ ನದಿಗೆ ಇಳಿದ ಸಂದರ್ಭದಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಮಣಿಕಂಠ ಮೃತ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ. ಬಾಲಕ ಪ್ರೀತಂ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ. ಸ್ಥಳಕ್ಕೆ ಕುಶಾಲನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Murder Case: ಮಾರಕಾಸ್ತ್ರಗಳಿಂದ ಕೊಚ್ಚಿ, ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ; ಪ್ರೀತಿಸಿ ಮದುವೆಯಾಗಿದ್ದೇ ಕಾರಣವಾಯ್ತಾ?

ಚುನಾವಣಾ ತರಬೇತಿಯಲ್ಲಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

ದಾವಣಗೆರೆ: ಚುನಾವಣಾ ತರಬೇತಿಯಲ್ಲಿದ್ದ ಶಿಕ್ಷಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಶ್ರೀನಿವಾಸ್ (41) ಮೃತ ಶಿಕ್ಷಕರು. ಸಂತೆ ಬೆನ್ನೂರಿನ ವಿಜಯ್ ಪ್ರೌಢಶಾಲೆ ಇಂಗಿಷ್ ಶಿಕ್ಷಕರಾದ ಶ್ರೀನಿವಾಸ್ ಅವರಿಗೆ, ಮಂಗಳವಾರ ಚನ್ನಗಿರಿಯಲ್ಲಿ ಆಯೋಜಿಸಿದ್ದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿದ್ದಾಗ ಹೃದಯಾಘಾತವಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಹತ್ಯೆ

ಬೆಂಗಳೂರು: ಹಲಸೂರು ಸಮೀಪದ ಜೋಗುಪಾಳ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಒಬ್ಬರನ್ನು ಬರ್ಬರವಾಗಿ ಮಂಗಳವಾರ ಕೊಲೆ ಮಾಡಲಾಗಿದೆ. ಕಾರ್ತಿಕ್ ಕೊಲೆಯಾದ ರೌಡಿಶೀಟರ್. ಸ್ಥಳಕ್ಕೆ ಹಲಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣದ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಪ್ರತಿಕ್ರಿಯಿಸಿ, ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಒಬ್ಬ ರೌಡಿ ಶೀಟರ್ ಕೊಲೆಯಾಗಿದೆ. ಈತನ ಮೇಲೆ ಹಲವು ಠಾಣೆಗಳಲ್ಲಿ ರೇಪ್, ಕೊಲೆ ಯತ್ನ, ಡಕಾಯತಿ ಸಂಬಂಧಿತ 11ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.

2019ರಲ್ಲಿ 110 ಅಡಿ ರೌಡಿಶೀಟರ್‌ನನ್ನು ಜೈಲಿಗೆ ಕಳಿಸಿದ್ದೆವು. ಎಲೆಕ್ಷನ್ ಹಿನ್ನೆಲೆಯಲ್ಲಿ ಗಡಿಪಾರು ಮಾಡಲು ನೋಟಿಸ್ ನೀಡಿದ್ದೆವು. ಈ ನಡುವೆ ಇಂದು ಕೊಲೆಯಾಗಿದೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುತ್ತಿದೆ. ಮುಖ್ಯ ರಸ್ತೆಯಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಮನೆಯೊಂದರೊಳಗೆ ಹೋಗಲು ರೌಡಿಶೀಟರ್‌ ಯತ್ನಿಸಿದ್ದಾನೆ. ಆದರೂ ಬಿಡದೆ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Exit mobile version