Site icon Vistara News

Road Accident: ಬೈಕ್‌-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ಸಾವು, ಮತ್ತೊಬ್ಬರಿಗೆ ಗಾಯ

Car Accident

ತುಮಕೂರು: ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸವಾರರು ಮೃತಪಟ್ಟು, ಮತ್ತೊಬ್ಬರಿಗೆ ಗಾಯಗಳಾಗಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಶನಿವಾರ ರಾತ್ರಿ ನಡೆದಿದೆ.

ಮಧುಗಿರಿ ತಾಲೂಕಿನ ನಲ್ಲೆಕಾಮನಹಳ್ಳಿ ಗ್ರಾಮದ ನಿವಾಸಿಗಳಾದ ಭರತ್ ಕುಮಾರ್ (25), ಅಭಿಲಾಷ್ (26) ಮೃತ ದುರ್ದೈವಿಗಳು. ಒಟ್ಟು ಮೂವರು ಯುವಕರು ಬೈಕ್‌ನಲ್ಲಿ ಮಧುಗಿರಿ ಕಡೆ ಬರುತ್ತಿದ್ದರು. ಈ ವೇಳೆ ಮಧುಗಿರಿ ಕಡೆಯಿಂದ ಪಾವಗಡ ಕಡೆ ಹೋಗುತ್ತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿ ದುರಂತ ಸಂಭವಿಸಿದೆ.

ಕಿಲ್ಲರ್ ಬಿಎಂಟಿಸಿಗೆ ವ್ಯಕ್ತಿ ಬಲಿ

ನೆಲಮಂಗಲ: ಬಿಎಂಟಿಸಿ ಬಸ್‌ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ನೆಲಮಂಗಲ ಸಮೀಪದ ಬಿನ್ನಮಂಗಲ ಬಳಿ ನಡೆದಿದೆ. ಬಸ್‌ ಗುದ್ದಿದ ರಭಸಕ್ಕೆ ನೆಲಕ್ಕೆ ಬಿದ್ದ ವ್ಯಕ್ತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ಲೌಸ್, ಗುಪ್ತಾಂಗ, ಡ್ರೈಫ್ರೂಟ್ಸ್‌ನಲ್ಲಿ ಚಿನ್ನ ಸಾಗಣೆ; ಮೂವರು ಮಹಿಳೆಯರ ಬಂಧನ

ದೇವನಹಳ್ಳಿ: ವಿದೇಶದಿಂದ ಚಿನ್ನದ ಕಳ್ಳ ಸಾಗಣೆ ಮಾಡುತ್ತಿದ್ದ‌ ಮೂವರು ಖತರ್ನಾಕ್ ಮಹಿಳೆಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಬ್ಲೌಸ್, ಗುಪ್ತಾಂಗ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಚಿನ್ನ ಸಾಗಿಸುತ್ತಿದ್ದಾಗ (Gold Smuggling) ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 67. 57 ಲಕ್ಷ ರೂ. ಮೌಲ್ಯದ 1. 13 ಕೆ.ಜಿ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಕೌಲಾಲಂಪುರ ಮತ್ತು ಕುವೈತ್‌ನಿಂದ ಬಂದ ಮೂವರು ಮಹಿಳೆಯರು, ಅಧಿಕಾರಿಗಳ ಕಣ್ತಪ್ಪಿಸಿ ಚಿನ್ನ ಕಳ್ಳ ಸಾಗಣೆ ಮಾಡಲು ಬ್ಲೌಸ್, ಗುಪ್ತಾಂಗ ಮತ್ತು ಡ್ರೈಫ್ರೂಟ್ಸ್‌ನಲ್ಲಿ ಸಾಗಿಸುತ್ತಿದ್ದರು.

ಇದನ್ನೂ ಓದಿ | Murder Case: ಮಾಲೂರಿನಲ್ಲಿ ಗ್ರಾಪಂ ಸದಸ್ಯನ ಬರ್ಬರ ಕೊಲೆ

ಒಬ್ಬ ಮಹಿಳೆ ಬ್ಲೌಸ್ ಒಳಗಡೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದಳು, ಮತ್ತೊಬ್ಬ ಮಹಿಳೆ ಕ್ಯಾಪ್ಸೂಲ್‌ಗಳಲ್ಲಿ ಚಿನ್ನವನ್ನಿಟ್ಟು ಗುಪ್ತಾಂಗದಲ್ಲಿ ಅಡಗಿಸಿಕೊಂಡಿದ್ದಳು. ಅದೇ ರೀತಿ ಇನ್ನೊಬ್ಬ ಮಹಿಳೆ ಚಿಕ್ಕ‌‌ ಚಿಕ್ಕ ತುಂಡುಗಳಾಗಿ ಗೋಲ್ಡ್ ಬಿಸ್ಕೆಟ್ ಕಟ್ ಮಾಡಿ‌ ಡ್ರೈಫ್ರೂಟ್ಸ್‌ನಲ್ಲಿ ಬೆರೆಸಿಕೊಂಡು ಸಾಗಿಸುತ್ತಿದ್ದಳು. ಇದನ್ನು ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ನಂತರ ಎಲ್ಲವನ್ನೂ ಇಂಚಿಂಚೂ ಚೆಕ್ ಮಾಡಿ ವಶಕ್ಕೆ ಪಡೆದಿದ್ದಾರೆ.

Exit mobile version