Site icon Vistara News

Bike Accident: ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರ ದುರ್ಮರಣ

Lorry

ಯಾದಗಿರಿ: ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಯುವಕರು ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ. ಕೆಂಭಾವಿಯಿಂದ ಬೊಮ್ಮನಹಳ್ಳಿ ಗ್ರಾಮಕ್ಕೆ ಯುವಕರು ಬೈಕ್ ಮೇಲೆ ತೆರಳುವಾಗ ದುರ್ಘಟನೆ ನಡೆದಿದೆ.

ಬೊಮ್ಮನಹಳ್ಳಿ ಗ್ರಾಮದ ಶಿವನಗೌಡ ಹೊಸಮನಿ (25) ಹಾಗೂ ಲಕ್ಷ್ಮಣ (24) ಮೃತರು. ಹತ್ತಿ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿದ್ದರಿಂದ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾರು-ಬೈಕ್ ನಡುವೆ ಅಪಘಾತ; ಸವಾರ ಸಾವು

In Vijayapura Husband killed wife

ಗದಗ: ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದ ಬಳಿ ನಡೆದಿದೆ.

ಇದನ್ನೂ ಓದಿ | Bomb Threat : ಶಾಲೆಗಳಿಗೆ ಬಾಂಬ್‌ ಬೆದರಿಕೆ‌ ಇ-ಮೇಲ್‌; ಮಾಹಿತಿ ಕೊಡಲ್ಲ ಎಂದ ಕಂಪನಿ

ದೇವಿಹಾಳ ಗ್ರಾಮ ಪಂಚಾಯತಿ ಸದಸ್ಯ ಯಲ್ಲಪ್ಪ (48) ಮೃತರು. ಬಸವೆಣ್ಣೆಪ್ಪ (50) ಗಾಯಾಳು. ಇವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಶಿರಹಟ್ಟಿಯಿಂದ ಬೆಳ್ಳಟ್ಟಿ ಗ್ರಾಮದ ಕಡೆ ಹೊರಟ್ಟಿದ್ದ ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿದ್ದು, ಅಪಘಾತದ ಬಳಿಕ ಸ್ಥಳದಲ್ಲೇ ಕಾರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಪತ್ನಿಗೆ ಗುದ್ದಲಿಯಿಂದ ಹೊಡೆದು ಕೊಂದ ಸಂಶಯ ಪಿಶಾಚಿ!

In Vijayapura Husband killed wife

ವಿಜಯಪುರ: ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ತಿಕೋಟ ತಾ. ಹುಬನೂರು ತಾಂಡಾ -2ರಲ್ಲಿ ಘಟನೆ ನಡೆದಿದೆ. ರೇಶ್ಮಾ ರಾಠೋಡ (25) ಎಂಬಾಕೆಯನ್ನು ಗುದ್ದಲಿಯಿಂದ ಹೊಡೆದು ಅಶೋಕ ರಾಠೋಡ (33) ಕೊಲೆ ಮಾಡಿದ್ದಾನೆ.

ರೇಶ್ಮಾ ಹಾಗೂ ಅಶೋಕ್‌ ಮದುವೆಯಾಗಿ 11 ವರ್ಷಗಳೇ ಕಳೆದಿತ್ತು. ದಂಪತಿಗೆ ಮೂವರು ಮಕ್ಕಳು ಸಹ ಇದ್ದರು. ಆದರೆ ಕೆಲ ತಿಂಗಳಿನಿಂದ ಅಶೋಕ್‌, ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯವನ್ನು ಹೊಂದಿದ್ದ. ಆಗಾಗ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು.

ಪತ್ನಿ ರೇಶ್ಮಾಳ ಶೀಲ ಶಂಕಿಸುತ್ತಿದ್ದ ಅಶೋಕ, ಕುಡಿದು ಬಂದು ನಿತ್ಯ ಕಿರುಕುಳ ಕೊಡುತ್ತಿದ್ದ. ಈತನ ಕಾಟ ತಾಳಲಾರದೆ ಹುಬನೂರಿನಲ್ಲಿದ್ದ ತನ್ನ ತವರು ಮನೆಗೆ ರೇಶ್ಮಾ ಹೋಗಿದ್ದಳು. ಅಲ್ಲಿಗೆ ಹೋದ ಅಶೋಕ ಮತ್ತೆ ಕ್ಯಾತೆ ತೆಗೆದಿದ್ದಾನೆ. ಮಲಗಿದ್ದವಳ ಮೇಲೆ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ | Road Accident : ಕೆಟ್ಟು ನಿಂತಿದ್ದ ಲಾರಿಗೆ ಬೈಕ್‌ ಡಿಕ್ಕಿ; ಬಿಜೆಪಿ ಮುಖಂಡ ಸ್ಥಳದಲ್ಲೇ ಸಾವು

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಶೋಕನ ಸಂಶಯಾ ಸ್ವಭಾವಕ್ಕೆ ಪತ್ನಿ ಮೃತಪಟ್ಟರೆ, ಮಕ್ಕಳು ತಂದೆ-ತಾಯಿ ಇಬ್ಬರ ಆಸರೆ ಇಲ್ಲದೇ ಅನಾಥರಾಗಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Exit mobile version