ತುಮಕೂರು: ಪೆಟ್ರೋಲ್ ಬಂಕ್‌ನಲ್ಲಿರುವ ಭೂಗತ ಟ್ಯಾಂಕ್ ಕ್ಲೀನ್ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ.
ತಿಪಟೂರು ಪಟ್ಟಣದ ಹಿಂಡಿಸ್ಕೆರೆ ಗೇಟ್‌ನಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಟ್ಯಾಂಕ್ ಕ್ಲೀನಿಂಗ್‌ಗೆ ಇಳಿದ ರವಿ(38) ನಾಗರಾಜು(48) ಮೃತಪಟ್ಟಿದ್ದಾರೆ. ಅವರು ಆಮ್ಲಜನಕ ಕೊರತೆ ಮತ್ತು ವಿಪರೀತ ರಾಸಾಯನಿಕಗಳ ವಾಸನೆಯನ್ನು ತಡೆಯಲಾಗದೆ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪೆಟ್ರೋಲ್ ಬಂಕ್‌ನ ಭೂಗತ ಟ್ಯಾಂಕ್ ಒಳಭಾಗದಲ್ಲಿ ಹೊಸ ಪಂಪ್ ಅಳವಡಿಸುವ ಮತ್ತು ಕ್ಲೀನಿಂಗ್ ಕೆಲಸ ಮಾಡಿಸಲಾಗುತ್ತಿತ್ತು. ಇಂಡಿಯನ್ ಆಯಿಲ್ ಕಂಪನಿಯರು ಈ ಕೆಲಸ ಮಾಡಿಸುತ್ತಿದ್ದರು. ಅವರು ತೋರಿದ ಅಜಾಗರೂಕತೆ ಮತ್ತು ಯಾವುದೇ ಸುರಕ್ಷತಾ ಸಲಕರಣೆಗಳನ್ನು ನೀಡದೆ ಇರುವುದು ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.
ರವಿ ಮತ್ತು ನಾಗರಾಜು ಅವರನ್ನು ಟ್ಯಾಂಕ್ ತೆರೆದ ತಕ್ಷಣವೇ ಒಳಗೆ ಇಳಿಸಲಾಗಿತ್ತು. ಅವರಿಗೆ ಯಾವುದೇ ಜೀವರಕ್ಷಕ ಉಪಕರಣ ನೀಡಲಾಗಿಲ್ಲ. ಈ ಟ್ಯಾಂಕ್‌ನ ಒಳಗಡೆ ಪೆಟ್ರೋಲ್‌ನಿಂದ ಉದ್ದೀಪನಗೊಂಡ ರಾಸಾಯನಿಕಗಳು ಇರುತ್ತವೆ. ಜತೆಗೆ ಒಳಗಡೆ ಆಮ್ಲಜನಕದ ಕೊರತೆ ಕಾಡುತ್ತದೆ. ಈ ಕಾರಣಕ್ಕಾಗಿಯೇ ಅವರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ | Road accident : ಕ್ಯಾಂಟರ್ ಡಿಕ್ಕಿಯಾಗಿ ಶಾಲಾ ಉದ್ಯೋಗಿ ಮಹಿಳೆ ದುರ್ಮರಣ, ರಸ್ತೆ ಕಾಮಗಾರಿ ಕಿರಿಕಿರಿ