Site icon Vistara News

Tiger Claw Pendant: ಹುಲಿ ಉಗುರು ಪೆಂಡೆಂಟ್‌ ಧರಿಸಿದ ಮತ್ತಿಬ್ಬರ ಬಂಧನ

Tiger Claw pendant

ಬೆಂಗಳೂರು: ಹುಲಿ ಉಗುರು ಪೆಂಡೆಂಟ್‌ ಧರಿಸಿದ ಹಿನ್ನೆಲೆಯಲ್ಲಿ ಬಿಗ್‌ ಬಾಸ್‌ ಸ್ಪರ್ಧಿ ವರ್ತೂರ್‌ ಸಂತೋಷ್‌ ಬಂಧನವಾಗಿದೆ. ಮತ್ತೊಂದೆಡೆ ಅಂತಹ ಪೆಂಡೆಂಟ್‌ (Tiger Claw Pendant) ಧರಿಸಿದ ಕೆಲವು ಪ್ರಮುಖ ವ್ಯಕ್ತಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿರುವುದು ಕಂಡುಬಂದಿದೆ.

ಹಲ್ಲೆಮನೆ ಮತ್ತು ಭಾರತಿ ಬೈಲು ನಿವಾಸಿಗಳಾದ ಸತೀಶ್‌ ಹಾಗೂ ರಂಜಿತ್‌ ಬಂಧಿತರು. ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 1972ರ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ (Wild life -Protection- Act 1972) ಅಡಿ ವನ್ಯ ಜೀವಿಗಳ ಮೂಳೆಯನ್ನು ಧರಿಸುವುದು ಅಥವಾ ಚರ್ಮವನ್ನು ಬಳಸುವುದು ಅಪರಾಧ. ಹೀಗಾಗಿ ಈ ಇಬ್ಬರನ್ನು ಬಂಧಿಸಲಾಗಿದೆ.

ಹುಲಿಯ ಉಗುರು, ಚರ್ಮ ಅಥವಾ ಮೂಳೆ ಧರಿಸುವುದು ಅಪರಾಧ. ಪ್ರಕರಣದಲ್ಲಿ ಹುಲಿ ಉಗುರು ಧರಿಸಿರುವುದು ಸಾಬೀತಾದರೆ 3 ವರ್ಷದಿಂದ 7 ವರ್ಷದವರಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಹುಲಿಯ ಉಗುರನ್ನು ಧರಿಸಿದ ವ್ಯಕ್ತಿಗೆ ಅದು ಎಲ್ಲಿಂದ ಸಿಕ್ಕಿದೆ? ಅದು ಯಾವುದಾದರೂ ಹುಲಿಯನ್ನು ತಾವೇ ಕೊಂದು ಸಂಗ್ರಹಿಸಿದರಾ ? ಅಥವಾ ಕೊಲೆ ಮಾಡಿದವರು ಯಾರು ಎನ್ನುವುದನ್ನು ಗಮನಿಸಲಾಗುತ್ತದೆ.

ಇದನ್ನೂ ಓದಿ | Tiger pawl : ನಟ ದರ್ಶನ್‌, ರಾಕ್‌ಲೈನ್‌, ವಿನಯ್‌ ಗುರೂಜಿಗೂ ಕಂಟಕವಾಗುತ್ತಾ ಹುಲಿ ಉಗುರು!

ಆರೋಪ ಹೊಂದಿರುವ ವ್ಯಕ್ತಿಗೆ ಬೇಟೆಯ ಹಿನ್ನೆಲೆ ಇದೆಯಾ? ಬೇಟೆಗಾರರ ಜತೆ ಸಂಬಂಧವಿದೆಯೇ ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ. ಹಿಂದೆ ಸತ್ತು ಸಿಕ್ಕಿದ ಹುಲಿಗಳಲ್ಲಿ ಚರ್ಮ ಅಥವಾ ಹಲ್ಲು, ಉಗುರುಗಳು ನಾಪತ್ತೆಯಾದ ಬಗ್ಗೆ ಹಿನ್ನೆಲೆ ಇದ್ದರೆ ಅದಕ್ಕೂ ಇದಕ್ಕೂ ಸಂಬಂಧವಿದೆಯಾ ಎಂದು ಪೊಲೀಸರು ಪರಿಶೀಲಿಸುತ್ತಾರೆ. ನಂತರ ಆರೋಪ ಸಾಬೀತಾದರೆ ಕೋರ್ಟ್‌ ಶಿಕ್ಷೆ ವಿಧಿಸಲಿದೆ.

Exit mobile version