ಹಾಸನ: ತಾಲೂಕಿನ ತಿಮ್ಲಾಪುರ ಗ್ರಾಮದ ಕೆರೆಯಲ್ಲಿ ತೆಪ್ಪ ಮಗುಚಿ ಮೀನು ಹಿಡಿಯಲು ಹೋಗಿದ್ದ ಮೂವರ ಪೈಕಿ ಇಬ್ಬರು ಜಲ ಸಮಾಧಿಯಾಗಿದ್ದಾರೆ. ಕಿಶೋರ್(38) ಮತ್ತು ರಾಜಣ್ಣ(50) ಮೃತರು. ಗ್ರಾಮದ ಕೆರೆಯಲ್ಲಿ ಕಿಶೋರ್ ಮೀನು ಸಾಕಿದ್ದರು. ಹೀಗಾಗಿ ಕಿಶೋರ್ ಮೀನು ಮಾರಾಟ ಮಾಡಲು ಸ್ನೇಹಿತರ ಜತೆ ತೆಪ್ಪದಲ್ಲಿ ತೆರಳಿ ವೀಕ್ಷಿಸುತ್ತಿದ್ದಾಗ ದುರಂತ ನಡೆದಿದೆ. ಭಾರಿ ಗಾಳಿ ಮಳೆ ಇದಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಶೋಧನಾ ಕಾರ್ಯಾಚರಣೆ ನಡೆಸಿ ಕಿಶೋರ್ ಅವರ ಮೃತದೇಹ ಹೊರತೆಗೆದಿದ್ದು, ರಾಜಣ್ಣ ಅವರ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.
ಹಿನ್ನೀರಿನಲ್ಲಿ ಮೀನು ಹಿಡಿಯುವಾಗ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗೂರು ಗ್ರಾಮದ ದೂಧ್ಗಂಗಾ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಶಿವಾಜಿ ಪೂರ್ವಿ(55) ಮೃತ ವ್ಯಕ್ತಿ. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ | Rain News | ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ಮೂವರಿಗೆ ಗಾಯ