Site icon Vistara News

Chikkaballapur News: ಲಾರಿ ಹರಿದು ಇಬ್ಬರು ಸ್ಕೂಟರ್ ಸವಾರರ ದುರ್ಮರಣ

Bike accident

ಚಿಕ್ಕಬಳ್ಳಾಪುರ: ಲಾರಿ ಹರಿದು ಇಬ್ಬರು ಬೈಕ್‌ ಸವಾರರು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ Chikkaballapur News) ಗುಡಿಬಂಡೆ-ಗೌರಿಬಿದನೂರು ಮಾರ್ಗದ ಕಣಿವೆಯಲ್ಲಿ ನಡೆದಿದೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದು ಲಾರಿ ಡಿಕ್ಕಿಹೊಡೆದಿದ್ದರಿಂದ ಸವಾರರು ಕೆಳಗೆ ಬಿದ್ದಿದ್ದು, ಈ ವೇಳೆ ಅವರ ಮೇಲೆ ಲಾರಿ ಹರಿದಿದೆ.

ಗೌರಿಬಿದನೂರು ತಾಲೂಕಿನ ಕೃಷ್ಣರಾಜಪುರ ತಾಂಡಾ ನಿವಾಸಿಗಳಾದ ತುಳಸಿಬಾಯಿ (35) ಮತ್ತು ನಂದೀಶ್ ನಾಯ್ಕ್ (25) ಮೃತ ದುರ್ದೈವಿಗಳು. ಅಪಘಾತ ನಡೆದ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಲಾರಿ ಹರಿದ ಹಿನ್ನೆಲೆಯಲ್ಲಿ ಸ್ಕೂಟರ್‌ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ತಿಥಿ ಕಾರ್ಯಕ್ಕೆ ಹೊರಟಿದ್ದ ದಂಪತಿ ಮಾರ್ಗ ಮಧ್ಯೆ ದುರ್ಮರಣ

ಚಿಕ್ಕಬಳ್ಳಾಪುರ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Road Accident) ಗಂಡ-ಹೆಂಡತಿ ದಾರುಣವಾಗಿ ಸಾವು (Couple dead in Accident) ಮೃತಪಟ್ಟಿದ್ದಾರೆ. ಚಿಂತಾಮಣಿ ತಾಲ್ಲೂಕಿನ ನಾಯಿಂದ್ರಹಳ್ಳಿ ಗ್ರಾಮದ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಮೃತರನ್ನು ಕೋಲಾರ ತಾಲ್ಲೂಕಿನ ಚನ್ನಸಂದ್ರ ಗ್ರಾಮದ ನಿವಾಸಿಗಳಾದ ಗಾಯಿತ್ರಮ್ಮ (40) ಮತ್ತು ಸುಬ್ಬರಾಮಪ್ಪ (60) ಎಂದು ಗುರುತಿಸಲಾಗಿದೆ.

ಚನ್ನಸಂದ್ರ ಗ್ರಾಮದವರಾದ ಸುಬ್ಬರಾಮಪ್ಪ ಮತ್ತು ಗಾಯಿತ್ರಮ್ಮ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೂವು ಹಿಡಿದುಕೊಂಡು ಒಂದು ತಿಥಿ ಕಾರ್ಯಕ್ಕೆ ಹೊರಟಿದ್ದರು. ಆಗ ಕಾರೊಂದು ಅವರ ಮೊಬೈಕ್‌ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ತಿಥಿ ಕಾರ್ಯಕ್ಕೆಂದು ಹಿಡಿದುಕೊಂಡಿದ್ದ ಹೂವು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಚಿಂತಾಮಣಿ ತಾಲ್ಲೂಕಿನ ನಾಯಿಂದ್ರಹಳ್ಳಿ ಗ್ರಾಮದ ಗೇಟ್ ಬಳಿ ಬರುತ್ತಿದ್ದಂತೆಯೇ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ನೆಲಕ್ಕೆ ಬಿದ್ದ ದಂಪತಿ ಪ್ರಾಣ ಕಳೆದುಕೊಂಡಿದ್ದಾರೆ. ಕಾರು ಕೂಡಾ ಸಾಕಷ್ಟು ಹಾನಿಗೆ ಒಳಗಾಗಿದೆ.

ಇದನ್ನೂ ಓದಿ | Murder Case : ಅನೈತಿಕ ಸಂಬಂಧಕ್ಕೆ ಅಡ್ಡಿ; ಪತ್ನಿಯನ್ನು ರಾಗಿಮುದ್ದೆಯಲ್ಲಿ ಸೈನೈಡ್‌ ಬೆರೆಸಿ ಕೊಂದ!

ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಬೈಕ್‌ಗೆ ಕಾರು ಡಿಕ್ಕಿ; ಇಬ್ಬರು ಸವಾರರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಬೈಕ್‌ಗೆ ಕಾರು ಡಿಕ್ಕಿ,ಯಾಗಿ (Road accident) ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ (Bike riders dead) ಮೃತಪಟ್ಟ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ (Chitradurga News) ಮೊಳಕಾಲ್ಮೂರು ತಾಲೂಕಿನ ಬೊಮ್ಮಕ್ಕನಹಳ್ಳಿ ಬಳಿ ಬುಧವಾರ ಮುಂಜಾನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಕೋನಾಪುರ ನಿವಾಸಿ ಮಾರಣ್ಣ(45), ಶಂಕರ್(44) ಎಂದು ಗುರುತಿಸಲಾಗಿದೆ. ಅವರಿಬ್ಬರೂ ಉದ್ಯೋಗ ನಿಮಿತ್ತ ಬೈಕ್‌ ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version