Site icon Vistara News

Students drowned: ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು

Two students-drowned in tunga river near Sringeri

Two students-drowned in tunga river near Sringeri

ಚಿಕ್ಕಮಗಳೂರು: ಶೃಂಗೇರಿ ಬಳಿ ತುಂಗಾ ನದಿಯಲ್ಲಿ (Tunga river) ಮುಳುಗಿ ಇಬ್ಬರು ವಿದ್ಯಾರ್ಥಿಗಳು (Student drowned) ಮೃತಪಟ್ಟಿದ್ದಾರೆ. ಗೆಳೆಯರೊಂದಿಗೆ ತುಂಗಾ ನದಿಗೆ ಇಳಿದಿದ್ದ ಇವರು ನೀರುಪಾಲಾಗಿದ್ದಾರೆ.

ಹರಿಹರಪುರದ ರಕ್ಷಿತ್ ಹಾಗೂ ಶೃಂಗೇರಿಯ ಸುಂಕದ ಮಕ್ಕಿಯ ಪ್ರಜ್ವಲ್ ಮೃತಪಟ್ಟ ದುರ್ದೈವಿಗಳು. ಶೃಂಗೇರಿಯ ನೆಮ್ಮಾರು ಸಮೀಪದ ತುಂಗಾ ನದಿಯಲ್ಲಿ ದುರ್ಘಟನೆ ಸಂಭವಿಸಿದೆ.

ಇವರು ಶೃಂಗೇರಿಯ ಖಾಸಗಿ ಕಾಲೇಜಿನ ವಿಧ್ಯಾರ್ಥಿಗಳಾಗಿದ್ದಾರೆ. ಈ ಕಾಲೇಜಿನ ಸುಮಾರು 14 ವಿದ್ಯಾರ್ಥಿಗಳು ಜತೆಯಾಗಿ ಸ್ನಾನ ಮಾಡಲು, ಈಜಲೆಂಧೂ ತುಂಗಾ ನದಿಗೆ ತೆರಳಿದ್ದರು. ಈ ವೇಳೆ ರಕ್ಷಿತ್‌ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಆತನನ್ನು ರಕ್ಷಿಸಲು ಪ್ರಜ್ವಲ್‌ ತೆರಳಿದ್ದು, ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ನೆಮ್ಮಾರ್‌ನಲ್ಲಿ ನಡೆದಿರುವ ದುರ್ಘಟನೆಗೆ ಸಂಬಂಧಿಸಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ವಿದ್ಯಾರ್ಥಿಗಳ ಮನೆಯವರು, ಸಹಪಾಠಿಗಳ ರೋದನ ಮುಗಿಲು ಮುಟ್ಟಿದೆ.

ರೋಣ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬೈಕ್‌: ಇಬ್ಬರು ಸ್ಥಳದಲ್ಲೇ ಸಾವು

ಗದಗ: ಬೈಕ್‌ ಒಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಬಳಿ‌ ನಡೆದಿದೆ.

ಶ್ರೀಧರ ಗಡಗಿ (15) ಹಾಗೂ ಅನೂಪ್‌ ಕುಮಾರ ಇಟಗಿ (16) ಮೃತ ದುರ್ದೈವಿಗಳು. ಶ್ರೀಧರ ಗಡಗಿ ಮತ್ತು ಅನೂಪ್‌ ಮತ್ತು ಇನ್ನೊಬ್ಬ ಬಾಲಕ ಒಂದೇ ಬೈಕ್‌ನಲ್ಲಿ ಸಾಗುಸತ್ತಿದ್ದರು. ಅಬ್ಬಿಗೇರಿ ಗ್ರಾಮದಿಂದ ರೋಣ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಬೈಕ್‌ ನಿಯಂತ್ರಣ ತಪ್ಪಿ ನೇರವಾಗಿ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನೊಬ್ಬನಿಗೂ ತೀವ್ರ ಗಾಯಗಳಾಗಿವೆ. ಆತನನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಮೌನೇಶನ ಸ್ಥಿತಿಯೂ ಗಂಭೀರವಾಗಿದೆ.

ರೋಣದಲ್ಲಿ ಸಂಭವಿಸಿದ ಅಪಘಾತದ ದೃಶ್ಯ

ಇವರೆಲ್ಲರೂ 16 ವರ್ಷದ ಬಾಲಕರಾಗಿದ್ದು ಬೈಕ್‌ ಓಡಿಸುವ ಖಯಾಲಿ, ಖುಷಿಯಿಂದ ಈ ದುರಂತಕ್ಕೆ ಒಳಗಾಗಿದ್ದಾರೆ. ಬೈಕ್‌ ಸಿಕ್ಕ ಖುಷಿಯಲ್ಲಿ ಅದನ್ನು ಓಡಿಸಿದ ಬಾಲಕರಿಗೆ ಮಾರ್ಗ ಮಧ್ಯೆ ಬೈಕ್‌ ಮೇಲೆ ನಿಯಂತ್ರಣ ಕಳೆದುಹೋಗಿದೆ. ಹೀಗಾಗಿ ಬೈಕ್‌ ನೇರವಾಗಿ ಮರಕ್ಕೆ ಬಡಿದಿದೆ.

ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕರ ಶವಗಳು ರಸ್ತೆಯಲ್ಲಿ ಬಿದ್ದಿರುವ ದೃಶ್ಯ ಎಲ್ಲರನ್ನೂ ಕಾಡುತ್ತಿತ್ತು. ಮನೆಯವರ ರೋದನವಂತೂ ಮುಗಿಲುಮಟ್ಟಿತ್ತು.

ಇದನ್ನೂ ಓದಿ: Murder Case: ಪ್ರೇಯಸಿಯ ಪತಿಯನ್ನು ಇರಿದು ಕೊಂದ ಪ್ರೇಮಿ; ಈಗ ಜೈಲಿನಲ್ಲಿ ಬಂದಿ

Exit mobile version