ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣ ಕಡಲತೀರದಲ್ಲಿ (Drown in Sea) ನಡೆದಿದೆ. ಇದೇ ವೇಳೆ ಗಂಭೀರಗೊಂಡ ಮತ್ತೊಬ್ಬ ಪ್ರವಾಸಿಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ಮೂಲದ ಅಭಿಷೇಕ್, ಆಕಾಶ್ ಮೃತ ಪ್ರವಾಸಿಗರು. ಕಲಬುರಗಿಯಿಂದ ಐವರು ಸ್ನೇಹಿತರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ಸಮುದ್ರದಲ್ಲಿ ಮೂವರು ಈಜಲು ತೆರಳಿದ್ದಾಗ ಅಲೆಗಳಿಗೆ ಸಿಲುಕಿ ಮುಳುಗಿದ್ದರು. ಈ ವೇಳೆ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಒಬ್ಬನನ್ನು ರಕ್ಷಣೆ ಮಾಡಲಾಗಿದೆ. ಗಂಭೀರಗೊಂಡ ಪ್ರವಾಸಿಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಮಹಿಳಾ ಸಬ್ ಇನ್‌ಸ್ಪೆಕ್ಟರ್ ಜತೆ ಅನುಚಿತವಾಗಿ ವರ್ತಿಸಿ ಹೋಟೆಲ್ ಮಾಲೀಕ ಬಂಧನ
ಬೆಂಗಳೂರು: ಮಹಿಳಾ ಸಬ್ ಇನ್‌ಸ್ಪೆಕ್ಟರ್ ಜತೆ ಅನುಚಿತ ವರ್ತನೆ ತೋರಿದ ಹೊಟೇಲ್ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ತಡರಾತ್ರಿವರೆಗೂ ಹೋಟೆಲ್ ತೆಗೆದಿದ್ದ ಹಿನ್ನೆಲೆಯಲ್ಲಿ ಪ್ರಶ್ನಿಸಿದ ಕಾರಣ ಹೊಟೇಲ್ ಮಾಲೀಕ ಸಂಜೀವ್ ಗೌಡ ಎಂಬಾತ ಪಿಎಸ್‌ವೈ ಪ್ರತಿಮಾ ಜತೆ ಅನುಚಿತವಾಗಿ ವರ್ತಿಸಿದ್ದರು.
ಸುಳ್ಳು ಪ್ರಕರಣ ದಾಖಲಿಸಿ 50 ಸಾವಿರ ಲಂಚ ಕೇಳಿದ್ದಾರೆಂದು ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಹೊಟೇಲ್ ಅಶ್ವ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. 24 ಗಂಟೆ ಹೊಟೇಲ್ ನಡೆಸಲು ಅನುಮತಿ ಇದೆ ಎಂದು ಮಾಲೀಕ ಹೇಳಿದ್ದ. ಅನುಮತಿ ಪತ್ರ ತೋರಿಸುವಂತೆ ಕೇಳಿದಾಗ, ಆರ್‌ಟಿಐ ಹಾಕಿಕೊಂಡು ನೋಡು ಎಂದು ಮಾಲೀಕ ದರ್ಪ ತೋರಿದ್ದಾರೆ. ಈ ಸಂಬಂಧ ಪಿಎಸ್‌ಐ ಪ್ರತಿಮಾ ದೂರು ದಾಖಲಿಸಿದ್ದರು. ದೂರಿನ ಅನ್ವಯ ಮಾಲೀಕ ಸಂಜೀವ್ ಗೌಡ ಸೇರಿ ಐವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: