ಹೊಸಪೇಟೆ: ವಿಜಯ ನಗರ ಜಿಲ್ಲಾ ವ್ಯಾಪ್ತಿಗೆ ಬರುವ ಹಂಪಿಯ ಪುರಂದರ ಮಂಟಪ ಬಳಿ ಈಜಲು ನೀರಿಗೆ ಇಳಿದಿದ್ದ ಇಬ್ಬರು ಯುವಕರು ತುಂಗಭದ್ರೆ ಪಾಲಾಗಿದ್ದಾರೆ.
ಸ್ನೇಹಿತರೊಂದಿಗೆ ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ಯುವಕರು ಈ ವೇಳೆ ತುಂಗಭದ್ರಾ ನದಿಗೆ ಇಳಿದು ನೀರು ಸ್ನಾನ ಮಾಡುತ್ತಿದ್ದರು. ಈ ವೇಳೆ ಸೆಳೆತಕ್ಕೆ ಸಿಲುಕಿ ಇಬ್ಬರು ಯುವಕರು ಕಣ್ಮರೆಯಾಗಿದ್ದಾರೆ. ನಾಪತ್ತೆ ಆಗಿರುವ ವಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನೀರಲ್ಲಿ ಕೊಚ್ಚಿ ಹೋದವರನ್ನು ಬೆಂಗಳೂರು ಮೂಲದ ಜೀವನ್(18), ಹರಿಶ್(18) ಎಂದು ಗುರುತಿಸಲಾಗಿದೆ. ಜೀವನ್, ಹರೀಶ್ ಸೇರಿ ಸ್ನೇಹಿತರು ಗೆಳೆಯನ ಹುಟ್ಟುಹಬ್ಬ ಆಚರಣೆಗಾಗಿ ಬಳ್ಳಾರಿಗೆ ಆಗಮಿಸಿದ್ದರು. ಒಟ್ಟು ಜನರು ಹಂಪಿ ಪ್ರವಾಸ ಕೈಗೊಂಡಿದ್ದರು.
ಬುಧವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಪುರಂದರ ಮಂಟಪ ಬಳಿ ನದಿಯಲ್ಲಿ ಈಜಲು ತೆರಳಿದ ಯುವಕರಲ್ಲಿ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದರು. ಅಗ್ನಿ ಶಾಮಕ ದಳ, ಮುಳುಗು ತಜ್ಞರು ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಹಂಪಿ ಪೊಲೀಸರು ಮೊಕ್ಕಾಂ, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Student drowned in sea | ಮುರ್ಡೇಶ್ವರದಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಮುದ್ರಪಾಲು