Site icon Vistara News

Karnataka Cabinet: ಡಾ.ಜಿ. ಪರಮೇಶ್ವರ್‌ ಮನೆಗೆ ಪೇಜಾವರ ಶ್ರೀ ಭೇಟಿ: ಬಜರಂಗದಳ ನಿಷೇಧ ಇಲ್ಲ ಎಂದ ಸಚಿವ

Udupi Pejawar mutt seer vishwaprasanna tirtha swamiji visits minister Dr G Parameshwar house in bengaluru

#image_title

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವರಾಗಿ ಆಯ್ಕೆಯಾಗಿರುವ ಡಾ. ಜಿ. ಪರಮೇಶ್ವರ್‌ ಅವರ ನಿವಾಸಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿದರು. ಸದಾಶಿವನಗರದಲ್ಲಿರುವ ಡಾ. ಜಿ. ಪರಮೇಶ್ವರ್‌ ಮನೆಗೆ ಭೇಟಿ ನೀಡಿದ ಶ್ರೀಗಳು ಆಶೀರ್ವದಿಸಿದರು. ಪರಮೇಶ್ವರ್‌ ದಂಪತಿ, ಶ್ರೀಗಳಿಗೆ ಫಲತಾಂಬೂಲ ನೀಡಿ ನಮಸ್ಕರಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್‌, ಆದರೆ ಸರ್ಕಾರ ಸುಸೂತ್ರವಾಗಿ ನಡೆದುಕೊಂಡು ಹೋಗಲು ಎಲ್ಲರ ಸಹಕಾರ ಅಗತ್ಯ. ಈಗ ಬ್ಯಾನ್ ಬ್ಯಾನ್ ಬ್ಯಾನ್ ಅಂತಿದ್ದಾರೆ. ತಕ್ಷಣ ಯಾವುದೇ ಸಂಸ್ಥೆಯನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಏನಾದರೂ ಸಂವಿಧಾನ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರ ಅಂತಹ ಕ್ರಮ ಆಗುತ್ತದೆ. ಕಾನೂನು ಉಲ್ಲಂಘನೆ ಮಾಡದೇ ಇದ್ದರೆ ಅಂತಹ ಪ್ರಶ್ನೆಯೇ ಬರುವುದಿಲ್ಲ ಎಂದರು.

ಇನ್ನೂ ಖಾತೆಗಳ ಕುರಿತು ಅಧೀಕೃತ ಆದೇಶ ಆಗಿಲ್ಲವಾದರೂ ಪೊಲೀಸ್‌ ಅಧಿಕಾರಿಗಳು ಒಬ್ಬೊಬ್ಬರಾಗಿ ಡಾ. ಜಿ ಪರಮೇಶ್ವರ್‌ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಪೊಲೀಸ್ ನೇಮಕಾತಿಯ ಡಿಜಿ ಕಮಲ್ ಪಂಥ್ ಸೇರಿ ಅನೇಕರು ಆಗಮಿಸಿದರು. ಈ ಹಿನ್ನೆಯಲ್ಲಿ, ಡಾ. ಜಿ. ಪರಮೇಶ್ವರ್‌ ಅವರಿಗೆ ಗೃಹಖಾತೆ ನೀಡುವುದು ಖಚಿತ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನ ಗ್ಯಾರಂಟಿಗಳ ಕುರಿತು ಪ್ರತಿಪಕ್ಷಗಳ ಟೀಕಗೆ ಬಗ್ಗೆ ಮಾತನಾಡಿದ ಪರಮೇಶ್ವರ್‌, ಒಂದು ಸರ್ಕಾರ ಹೇಗೆ ನಡೆಯುತ್ತದೆ ಎಂಬುದೂ ಕೂಡ ಬಿಜೆಪಿಯವರಿಗೆ ಗೊತ್ತಿಲ್ಲವ? ಜನರೇ ಇವರಿಗೆ ಮನೆಯಲ್ಲಿ ಕೂರಿಸಿದರೂ ಬುದ್ದಿ ಬರ್ತಾ ಇಲ್ವಾ? ಅನಗತ್ಯ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ತಿದ್ದಾರೆ. ಜನರೇ ಬುದ್ದಿ ಕಲಿಸಿದರೂ ಬುದ್ದಿ ಬಂದಿಲ್ಲ ಇವರಿಗೆ?

ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿ ಕೊಡ್ತೇವೆ ಅಂತ ಹೇಳಿದ್ದೇವೆ. 10 ಕೆ.ಜಿ. ಹೊಂದಿಸಿಕೊಳ್ಳುವುದಕ್ಕಾದರೂ ಸಮಯ ಬೇಕಲ್ಲ? ಮಾನದಂಡಗಳು ವಿಪಕ್ಷಗಳು ಹೇಳಿದ ತರಹ ಏನೂ ಇರಲ್ಲ. ನಾವು ಇನ್ನೂ ಗ್ಯಾರಂಟಿಗಳ ಬಗ್ಗೆ ನಿಯಮಗಳ ಬಗ್ಗೆ ಹೇಳಿಯೇ ಇಲ್ಲ. ಆಗಲೇ ಅವರು ಯಾಕೆ ಜನರನ್ನು ರಾಜಕೀಯ ಮಾಡ್ತಿದ್ದಾರೆ? ಎಂದು ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರ ವಿರುದ್ದ ಪರಮೇಶ್ವರ್ ಕಿಡಿಕಾರಿದರು.

ಗ್ಯಾರಂಟಿಗಳ ಜಾರಿ ಬಗ್ಗೆ ಜನರಿಗೆ ಮಾತು ಕೊಟ್ಟಿದ್ದೇವೆ. ಮೊದಲ ಕ್ಯಾಬಿನೆಟ್ ನಲ್ಲಿ ಆದೇಶ ಆಗಿದೆ. ಇದಾದ ಮೇಲೆ ಇಂತಹ ಇಲಾಖೆಗೆ ಈ ಜವಾಬ್ದಾರಿ ಇದೆ‌‌. ಇವರು ಇದನ್ನು ವರ್ಕೌಟ್ ಮಾಡಿ ಮುಂದಿನ ಕ್ಯಾಬಿನೆಟ್‌ಗೆ ತನ್ನಿ ಎಂದು ಹೇಳಿದ್ದೇವೆ. ಮುಂದಿನ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿ ಯಾವ ಇಲಾಖೆ ಯಾವ ನಿರ್ದೇಶನ ಕೊಡಬೇಕೋ ಕೊಡ್ತೇವೆ. ನಿರ್ದೇಶನದ ಪ್ರಕಾರ ಗ್ಯಾರಂಟಿಗಳು ಅನುಷ್ಠಾನ ಮಾಡ್ತೇವೆ. ಅವರು ಹೆಸರಿಸಿದ್ರೆ ಹೆದುರಿ ಬೀಡುತ್ತೆವಾ..? ಎಂದರು.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮಮಂದಿರದ ಗರ್ಭಗುಡಿ ಹೇಗಿದೆ? ಇಲ್ಲಿದೆ ಫೋಟೊ

Exit mobile version