Site icon Vistara News

Udupi Toilet Case : ಉಡುಪಿ ಟಾಯ್ಲೆಟ್‌ ಪ್ರಕರಣ ಸಿಬಿಐ, NIAಗೆ ಒಪ್ಪಿಸಿ; ಮಹಿಳಾ ಮೋರ್ಚಾ ರಾಜ್ಯಾದ್ಯಂತ ಹೋರಾಟ

BJP protest at Freedom Park

ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ (Nethrajyothi College Udupi) ನಡೆದ ಹಿಂದೂ ವಿದ್ಯಾರ್ಥಿನಿಯ (Hindu student) ನಗ್ನ ವಿಡಿಯೋ ಚಿತ್ರೀಕರಣವನ್ನು (Udupi Toilet Case) ಖಂಡಿಸಿ ಮತ್ತು ಇದರ ಸಮಗ್ರ ತನಿಖೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ (State Mahila Morcha) ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರಕರಣ ತನಿಖೆಯನ್ನು ಸಿಬಿಐ ಇಲ್ಲವೇ ಎನ್‌ಐಎಗೆ (Demand for NIA or CBI enquiry) ಒಪ್ಪಿಸಬೇಕು ಎಂದು ಆಗ್ರಹಿಸಲಾಯಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಪ್ರಧಾನ ಪ್ರತಿಭಟನೆ ನಡೆದರೆ ರಾಜ್ಯದ ಎಲ್ಲೆಡೆ ಹೋರಾಟ ಸಂಘಟಿಸಲಾಗಿತ್ತು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ಮಾಜಿ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ, ಹಿರಿಯ ನಾಯಕಿ ತೇಜಸ್ವಿನಿ ಗೌಡ, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾರಾವ್, ಬೆಂಗಳೂರು ಕೇಂದ್ರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ಬೆಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಆನಂದ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬಂದ ಹಿರಿಯ ನಾಯಕಿ ತೇಜಸ್ವಿನಿ ಅನಂತ ಕುಮಾರ್‌ ಅವರು ಈ ಪ್ರತಿಭಟನೆಗೆ ಆಗಮಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆಗಮಿಸಿಲ್ಲ.

ಪ್ರತಿಭಟನಾಕಾರರ ಅಭಿಪ್ರಾಯ, ಆಗ್ರಹಗಳೇನು?

  1. ಇಡೀ ಸಮಾಜ ತಲೆತಗ್ಗಿಸುವ ಅತ್ಯಂತ ಖೇದಕರ ಘಟನೆ ಇದಾಗಿದೆ. ಶೌಚಾಲಯದಲ್ಲಿ, ಬಾತ್‍ರೂಂನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾಡಿ ಅದನ್ನು ತಮ್ಮ ತಮ್ಮ ನೆಟ್‍ವರ್ಕ್‍ಗಳಿಗೆ ಕಳುಹಿಸುವ ದೊಡ್ಡ ನಾಚಿಕೆಗೇಡಿನ ಸಂಗತಿ ಬಗ್ಗೆ ವಿಳಂಬವಾಗಿ ಎಫ್‍ಐಆರ್ ಮಾಡಿದ್ದು, ಇದು ಪ್ರಕರಣವನ್ನು ಮುಚ್ಚಿಹಾಕುವ ತಂತ್ರ.
  2. ವಿಡಿಯೋಗ್ರಫಿ ಮಾಡಿದ 3 ವಿದ್ಯಾರ್ಥಿನಿಯರನ್ನು ಇನ್ನೂ ಬಂಧಿಸಿಲ್ಲ. ಸರಕಾರ ಅವರ ಮೇಲೆ ಎಫ್‍ಐಆರ್ ಮಾಡಲು ಆರಂಭದಲ್ಲಿ ಮೀನಾಮೇಷ ಎಣಿಸುತ್ತಿತ್ತು.
  3. ಪ್ರಕರಣದ ಸಿಐಡಿ ತನಿಖೆ ನಡೆಸಬೇಕು ಇಲ್ಲವೇ ಎನ್‌ಐಗೆ ಒಪ್ಪಿಸಬೇಕು.
  4. ತಮಾಷೆಗೆ ಮಾಡಿದ್ದೆವು ಎಂದು ಹುಡುಗಿಯರು ಒಪ್ಪಿಕೊಂಡಿದ್ದಾರೆ. ಆದರೆ ಪೊಲೀಸರು, ವಿಡಿಯೊ ಮಾಡಿಯೇ ಇಲ್ಲ ಎನ್ನುತ್ತಿದ್ದಾರೆ. ಪೊಲೀಸರೇಕೆ ಮುಚ್ಚಿ ಹಾಕುವ ಸಂಚು ನಡೆಸುತ್ತಿದ್ದಾರೆ?
  5. ಮೊಬೈಲ್‌ಗಳನ್ನು ಸಿಐಡಿಗೆ ಕೊಡಿ, ಡಿಲೀಟ್‌ ಮಾಡಿದ್ದರೂ ಏನು ಚಿತ್ರೀಕರಣ ಮಾಡಲಾಗಿತ್ತು ಎನ್ನುವ ವಿವರ ತೆಗೆಯುವ ಅವಕಾಶವಿದೆ. ವಿಡಿಯೊವನ್ನು ಯಾರಿಗೂ ಕಳಿಸಿಲ್ಲ ಎಂದರೆ ಯಾಕೆ ಹೆದರಬೇಕು?
  6. ಒಂದು ವೇಳೆ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಬಾತ್‌ರೂಮ್‌ಗೆ ಹೋದಾಗ ವಿಡಿಯೊ ಮಾಡಿದ್ದಾರೆ ಏನಾಗುತ್ತಿತ್ತು? ಆಗ ಈ ಶಾಸಕರುಗಳು ಸುಮ್ಮನೆ ಕೂರುತ್ತಿದ್ದಾ?
  7. ಹೆಣ್ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡಬಾರದು.ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ಗೆ ನಾಚಿಕೆ ಆಗಬೇಕು. ಹೀಗೇ ಮುಂದುವರಿದರೆ ಈ ಸರ್ಕಾರವನ್ನು ಕಿತ್ತು ಹಾಕಲು ಅಡುಗೆ ಮನೆಯ ಸೌಟುಗಳು ಹೊರಬರುತ್ತವೆ. ನಿಮ್ಮ ಸರ್ಕಾರ ಕಿತ್ತುಹಾಕಲು ಸೌಟುಗಳೇ ಅಸ್ತ್ರವಾಗುತ್ತವೆ.
  8. ಎಲ್ಲರೂ ಸೇರಿ ಪ್ರಕರಣ ಮುಚ್ಚಲು ಮುಂದಾಗಿದ್ದಾರೆ. ಹೀಗಾಗಿ ಪ್ರಕರಣವನ್ನು ಹೊರತಂದ ರಶ್ಮಿ ಅವರನ್ನು‌ ಬೆದರಿಸುತ್ತಿದ್ದಾರೆ. ಇದು ಚುನಾಯಿತ ಸರ್ಕಾರ ಅಲ್ಲ, ಹಿಟ್ಲರ್ ಸರ್ಕಾರ.
  9. ಕಾಂಗ್ರೆಸ್ ಮಾಡುತ್ತಿರುವುದು ದೇಶದ್ರೋಹದ ಕೆಲಸ. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ತೆವಲಿಗೆ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದೆ.
  10. ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಮಹಿಳಾ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಫಲವಾಗಿದ್ದಾರೆ.

ಇದನ್ನೂ ಓದಿ : Udupi Toilet Case : ವಿಡಿಯೊ ಚಿತ್ರೀಕರಣ ಪ್ರಕರಣ; ಉಡುಪಿ ಕಾಲೇಜಿನೊಳಗೆ ಖುಷ್ಬೂ ವಿಚಾರಣೆ, ಹೊರಗಡೆ ABVP ಪ್ರತಿಭಟನೆ

Exit mobile version