Site icon Vistara News

Udupi Toilet Case : ಜಿಹಾದಿಗಳ ಜತೆ ಕೈ ಜೋಡಿಸಿದ ಸಿದ್ದರಾಮಯ್ಯ ; ನಳಿನ್‌ ಕುಮಾರ್‌ ಕಟೀಲ್‌ ಗಂಭೀರ ಆರೋಪ

Nalin Kumar Kateel

ಮಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸರ್ಕಾರ (Siddaramaiah Government) ಜಿಹಾದಿಗಳ (Joined hands with Jihadis) ಜತೆ ಕೈಜೋಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಜಿಹಾದಿಗಳು ತಲೆ ಎತ್ತಿದ್ದಾರೆ. ರಾಜ್ಯದಲ್ಲಿರುವುದು ಕಾಂಗ್ರೆಸ್‌ ಸರ್ಕಾರವೋ, ಜಿಹಾದಿ ಸರ್ಕಾರವೋ (Jihadi Government) ಎಂಬ ಸಂಶಯ ಮೂಡಿದೆ ಎಂದು ಅವರು ಹೇಳಿದ್ದಾರೆ.

ಉಡುಪಿಯ ನೇತ್ರಜ್ಯೋತಿ ಕಾಲೇಜಿನ (Udupi Nethrajyothi Paramedical College) ಟಾಯ್ಲೆಟ್‌ನಲ್ಲಿ ನಡೆದ ಹಿಂದು ಹುಡುಗಿಯೊಬ್ಬಳ ಟಾಯ್ಲೆಟ್‌ ಬಳಕೆಯ (Udupi Toilet Case) ಚಿತ್ರೀಕರಣ ಪ್ರಕರಣವನ್ನು ಖಂಡಿಸಿ ಮತ್ತು ಅದನ್ನು ರಾಜ್ಯ ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಬಿಜೆಪಿಯಿಂದ ವತಿಯಿಂದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಮಂಗಳೂರಿನ ಪುರಭವನ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಭಾಗೀರಥಿ ಮುರುಳ್ಯ, ಎಂಎಲ್ ಸಿ ಪ್ರತಾಪ ಸಿಂಹ ನಾಯಕ್ ಭಾಗಿಯಾಗಿದ್ದರು. ಜತೆಗೆ ಎಂಟು ಅಸೆಂಬ್ಲಿ ಕ್ಷೇತ್ರಗಳ ಕಾರ್ಯಕರ್ತರೂ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌ ಅವರು, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಹಿಂದೂ ವಿರೋಧಿ ನೀತಿ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು ಭಯೋತ್ಪಾದಕರ ಪರ ಮತ್ತು ರಾಷ್ಟ್ರ ವಿರೋಧಿ ಮುಖ್ಯಮಂತ್ರಿ ಎಂದು ಆರೋಪಿಸಿದರು.

ಉಡುಪಿಯಲ್ಲಿ ನಡೆದಿದ್ದು ಕೇರಳ ಫೈಲ್ಸ್‌ ಸಿನಿಮಾ

ʻʻಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಜೈನ ಮುನಿಗಳ ಹತ್ಯೆಯಾಗುತ್ತದೆ. ಕೂಲಿ ಕಾರ್ಮಿಕರ ಹತ್ಯೆಯಾಗುತ್ತದೆ. ಇಷ್ಟೆಲ್ಲ ಆದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ವಿಫಲರಾಗಿದ್ದಾರೆʼʼ ಎಂದು ಹೇಳಿದ ಅವರು, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ಒಮ್ಮೆ ಕೇರಳ ಫೈಲ್ಸ್ ಸಿನಿಮಾ ನೋಡಲಿ. ಉಡುಪಿಯಲ್ಲಿ ನಡೆದಿರೋದು ಕೇರಳ ಫೈಲ್ಸ್ ಸಿನಿಮಾʼʼ ಎಂದರು.

ʻʻಉಡುಪಿಯ ಘಟನೆಯನ್ನು ಕಾಂಗ್ರೆಸ್ ಮಕ್ಕಳಾಟ ಅಂತ ಹೇಳುತ್ತದೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಇದು ಷಂಡ ಸರ್ಕಾರ ಮತ್ತು ನಿರ್ವೀರ್ಯ ಸರ್ಕಾರ. ಇವತ್ತು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಜಿಹಾದಿಗಳ ಜೊತೆ ಕೈ ಜೋಡಿಸಿದ್ದಾರೆ. ಉಡುಪಿ ಘಟನೆ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆʼʼ ಎಂದು ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು.

ಇದು ಕೇವಲ ಮೂವರು ವಿದ್ಯಾರ್ಥಿನಿಯರ ವಿಚಾರ ಅಲ್ಲ. ಆರೇಳು ಬಾರಿ ಈ ರೀತಿಯ ಘಟನೆ ಅಲ್ಲಿ ನಡೆದಿದೆ. ಹೀಗಾಗಿ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ಒತ್ತಾಯಿಸಿದರು.

ಭೇಟಿ ನೀಡಿದರೆ ಸಾಲದು, ನ್ಯಾಯಾಂಗ ತನಿಖೆ ನಡೆಸಬೇಕು

ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಉಡುಪಿಗೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ನಾಳೆ ಬಂದು ಮಂಗಳೂರು, ಉಡುಪಿ ವೀಕ್ಷಣೆ ಮಾಡಿದರೆ ಸಾಲದು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕುʼʼ ಎಂದು ಒತ್ತಾಯಿಸಿದರು. ಜತೆಗೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರ ವಿರುದ್ಧ ಧಿಕ್ಕಾರ ಕೂಗಿಸಿದರು.

ಉಡುಪಿ ವಿಡಿಯೋ ಪ್ರಕರಣದ ಹಿಂದೆ ಪಿಎಫ್ಐ ಕೈವಾಡದ ಶಂಕೆ ಇದೆ. ಇದು ಕೇರಳದ ಕೆಲವು ಜಿಹಾದಿ ಶಕ್ತಿಗಳ ಕೈವಾಡ ಎಂದು ಆರೋಪಿಸಿದ ಅವರು, ನ್ಯಾಯಾಂಗ ತನಿಖೆ ನಡೆಸಲು ಆಗ್ರಹಿಸಿದರು.

ಇದನ್ನೂ ಓದಿ: Udupi Toilet Case : ಖುಷ್ಬೂ ದಾರಿ ತಪ್ಪಿಸಿದ್ರಾ ಆಸ್ಕರ್‌ ಸಂಬಂಧಿ? ; ಬಿಜೆಪಿ ಗಂಭೀರ ಆರೋಪ

Exit mobile version