ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ (Udupi Nethrajyothi College) ನಡೆದ ವಿಡಿಯೋ ಚಿತ್ರೀಕರಣಕ್ಕೆ (Udupi Toilet Case) ಈಗ ಭಯೋತ್ಪಾದನೆ (Terrorism) ಮತ್ತು ಲವ್ ಜಿಹಾದ್ (Love Jihad) ಟ್ವಿಸ್ಟ್ ಸಿಕ್ಕಿದೆ. ಈ ಕೃತ್ಯದ ಹಿಂದೆ ಭಯೋತ್ಪಾದಕರ ಸಂಚು ಇರಬಹುದು ಮತ್ತು ಇದೊಂದು ಲವ್ ಜಿಹಾದ್ ಕೈವಾಡವಿರಬಹುದು ಎಂದು ಬಿಜೆಪಿ ಹೇಳಿದ್ದು, ಇದರ ಬಗ್ಗೆ ಎನ್‌ಐಎ ತನಿಖೆಗೆ ಆಗ್ರಹಿಸಿದೆ. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojari) ಮತ್ತು ಸುನಿಲ್ ಕುಮಾರ್ (Sunil Kumar) ಅವರು ಈ ಗಂಭೀರ ಆರೋಪ ಮಾಡಿದ್ದಾರೆ.
ಉಡುಪಿ ವಿಡಿಯೊ ಪ್ರಕರಣದ ಬಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು, ಇಡೀ ದೇಶದ ನಾಗರಿಕರು ತಲೆ ತಗ್ಗಿಸುವಂತಹ ಪ್ರಕರಣ ಇದು. ಕಳೆದ ಆರೇಳು ತಿಂಗಳುಗಳಿಂದ ಈ ರೀತಿ ವಿಡಿಯೊ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಕೈಯನ್ನು ಸರ್ಕಾರ ಕಟ್ಟಿ ಹಾಕಿದೆ. ತನಿಖೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.
ʻʻಇಂಥ ಘಟನೆ ನಡೆದಾಗ, ಆರೋಪಗಳು ಕೇಳಿಬಂದಾಗ ಸಮಗ್ರ ತನಿಖೆ ನಡೆಸಬೇಕು. ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕು. ಆದರೆ, ಇಲ್ಲಿ ಮುಚ್ಚಿ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಇದು ಲವ್ ಜಿಹಾದ್ ಪ್ರಕರಣ ಇರಬಹುದು, ಇದರ ಹಿಂದೆ ಭಯೋತ್ಪಾದಕರ ಕೈವಾಡ ಇರಬಹುದುʼʼ ಎಂದು ಹೇಳಿದ ಅವರು, ಈ ಪ್ರಕರಣವನ್ನು ರಾಷ್ಟೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ನಾನು ಗೃಹ ಸಚಿವರಾದ ಜಿ. ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸುತ್ತೇನೆ ಎಂದರು.
ಮುಚ್ಚಿ ಹಾಕುವ ಹುನ್ನಾರ ಎಂದ ಸುನಿಲ್ ಕುಮಾರ್
ಉಡುಪಿಯ ಇಡೀ ಘಟನೆಯನ್ನು ಪೊಲೀಸ್ ಇಲಾಖೆ ಹಾಗೂ ಸರ್ಕಾರ ಮುಚ್ಚಿ ಹಾಕುವ ಹುನ್ನಾರ ನಡೆಸುತ್ತಿವೆ. ಘಟನೆ ನಡೆದು ಎಂಟು ದಿನಗಳ ಕಾಲ ಎಫ್ಐಆರ್ ದಾಖಲು ಮಾಡಿಲ್ಲ ಅಂದರೆ ಸಹಜವಾಗಿ ದೊಡ್ಡ ಅನುಮಾನವೇ ಹುಟ್ಟಿಕೊಳ್ಳುತ್ತದೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಬೆಂಗಳೂರಿನಲ್ಲಿ ಹೇಳಿದರು.
ʻಮುಸಲ್ಮಾನ ಹೆಣ್ಣು ಮಕ್ಕಳು ಅಂತಾ ಸರ್ಕಾರ ಕೇಸ್ ಮುಚ್ಚಿ ಹಾಕುವ ಕೆಲಸ ಮಾಡ್ತಿದೆಯಾ..? ಎಂಬ ಪ್ರಶ್ನೆ ಉಡುಪಿ ಭಾಗ ಹಾಗೂ ರಾಜ್ಯದ ಜನರಲ್ಲಿ ಪ್ರಶ್ನೆ ಮೂಡುತ್ತಿದೆ. ಹಿಜಾಬ್ ಘಟನೆ ಆದಾಗ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ ಎಂದರೆ ಇದರ ಹಿಂದೆ ಎಷ್ಟು ದೊಡ್ಡ ಶಕ್ತಿ ಗಳು ಕೆಲಸ ಮಾಡಿದ್ದವು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಹಾಗೇಯೆ ವಿಡಿಯೋ ಪ್ರಕರಣದ ಹಿಂದೆ ಕೂಡಾ ದೊಡ್ಡ ಶಕ್ತಿಗಳು ಕೆಲಸ ಮಾಡುತ್ತಿವೆʼʼ ಎಂದು ಸುನಿಲ್ ಕುಮಾರ್ ಹೇಳಿದರು.
ಪದೇಪದೆ ಮೊಬೈಲ್ ಬದಲಾಯಿಸುತ್ತಿದ್ದರಾ ವಿದ್ಯಾರ್ಥಿನಿಯರು?
ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿನಿಯ ಟಾಯ್ಲೆಟ್ ಬಳಕೆಯನ್ನು ಚಿತ್ರೀಕರಿಸಿಕೊಂಡ ಆರೋಪ ಎದುರಿಸುತ್ತಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಆಗಾದ ಮೊಬೈಲ್ ಬದಲಾಯಿಸುತ್ತಿದ್ದರು ಎಂದು ಅಲ್ಲಿನ ಕಾಲೇಜು ವಿದ್ಯಾರ್ಥಿಗಳೇ ಆರೋಪ ಮಾಡಿದ್ದಾರೆ. ಹೀಗಾಗಿ ಆ ಮೂವರು ವಿದ್ಯಾರ್ಥಿನಿಯರ ಪೋಷಕರ ವಿಚಾರಣೆ ಮಾಡಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.
ʻಬಿಜೆಪಿ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದ ಸುನಿಲ್ ಕುಮಾರ್ ಅವರು, ಯಾವುದೇ ಒತ್ತಡಕ್ಕೆ ಮಣಿಯದೆ, ಹಿಂಜರಿಯದೆ ಎಲ್ಲ ಆಯಾಮದಲ್ಲೂ ತನಿಖೆ ಮಾಡಬೇಕುʼʼ ಎಂದು ಒತ್ತಾಯಿಸಿದರು.
ಸರ್ಕಾರದ ನಡವಳಿಕೆ ಅಚ್ಚರಿ ಎಂದ ಸುನಿಲ್ ಕುಮಾರ್
ʻʻಬಹಳ ಆಶ್ಚರ್ಯ ಮತ್ತು ದುರ್ದೈವದ ಸಂಗತಿ ಅಂದರೆ ಸಿದ್ದರಾಮಯ್ಯ ಸರ್ಕಾರಕ್ಕೆ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಾಕಿದವರು ಅಮಾಯಕರಂತೆ ಕಾಣುತ್ತಾರೆ. ಅದೇ ಹೊತ್ತಿಗೆ ಬಜರಂಗ ದಳದ ಕಾರ್ಯಕರ್ತರನ್ನು ಗಡಿಪಾರು ಮಾಡುತ್ತದೆ. ಉಡುಪಿಯ ಪ್ರಕರಣ ತನಿಖೆ ಆಗಬೇಕು ಎಂದು ಆಗ್ರಹಿಸಿದ ರಶ್ಮಿ ಸಾಮಂತ್ ಅವರ ಮನೆಗೆ ಪೊಲೀಸರು ರಾತ್ರೋ ರಾತ್ರಿ ಹೋಗ್ತಾರೆʼʼ ಎಂದು ಹೇಳಿದ ಸುನಿಲ್ ಕುಮಾರ್. ವೀರಾವೇಶದ ಭಾಷಣ ಮಾಡುವ ಸಿದ್ದರಾಮಯ್ಯವರಿಗೆ ವಿದ್ಯಾರ್ಥಿನಿ ಮನೆಗೆ ಹೋಗೋ ತಾಕತ್ತಿಲ್ವ?ʼʼ ಎಂದು ಪ್ರಶ್ನಿಸಿದರು.
ʻʻಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು, ಸುಮ್ಮನೆ ಆದರೆ, ಮುಂದಿನ ದಿನಗಳಲ್ಲಿ ನಮ್ಮ ಎರಡು ಜಿಲ್ಲೆಗಳು ಅಪಾಯಕ್ಕೆ ಸಿಲುಕಬಹುದುʼʼ ಎಂದು ಸುನಿಲ್ ಕುಮಾರ್ ಎಚ್ಚರಿಸಿದರು.
ಇದನ್ನೂ ಓದಿ: Udupi Toilet Case : ಹಿಂದು ವಿದ್ಯಾರ್ಥಿನಿಯರಿಗೆ ಖುಷ್ಬೂ ಅನ್ಯಾಯ ಮಾಡಿದ್ದಾರೆ ಎಂದ ಮುತಾಲಿಕ್
ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ (Udupi Nethrajyothi College) ನಡೆದ ವಿಡಿಯೋ ಚಿತ್ರೀಕರಣಕ್ಕೆ (Udupi Toilet Case) ಈಗ ಭಯೋತ್ಪಾದನೆ (Terrorism) ಮತ್ತು ಲವ್ ಜಿಹಾದ್ (Love Jihad) ಟ್ವಿಸ್ಟ್ ಸಿಕ್ಕಿದೆ. ಈ ಕೃತ್ಯದ ಹಿಂದೆ ಭಯೋತ್ಪಾದಕರ ಸಂಚು ಇರಬಹುದು ಮತ್ತು ಇದೊಂದು ಲವ್ ಜಿಹಾದ್ ಕೈವಾಡವಿರಬಹುದು ಎಂದು ಬಿಜೆಪಿ ಹೇಳಿದ್ದು, ಇದರ ಬಗ್ಗೆ ಎನ್‌ಐಎ ತನಿಖೆಗೆ ಆಗ್ರಹಿಸಿದೆ. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojari) ಮತ್ತು ಸುನಿಲ್ ಕುಮಾರ್ (Sunil Kumar) ಅವರು ಈ ಗಂಭೀರ ಆರೋಪ ಮಾಡಿದ್ದಾರೆ.