ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ (Udupi Nethrajyoti Paramedical college) ನಡೆದ ವಿಡಿಯೊ ಚಿತ್ರೀಕರಣ (Udupi Toilet case) ಪ್ರಕರಣ ತೀವ್ರಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಈ ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿರುವ ಬಿಜೆಪಿ ರಾಜ್ಯಪಾಲರಿಗೆ (Complaint to Governor) ದೂರು ನೀಡಲು ನಿರ್ಧರಿಸಿದೆ. ಹೆಣ್ಣು ಮಕ್ಕಳ ಮಾನಕ್ಕೆ ಸಂಬಂಧಿಸಿದ ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ಪ್ರದರ್ಶಿಸುತ್ತಿದೆ, ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆಪಾದಿಸುತ್ತಿರುವ ಬಿಜೆಪಿ ಇದರ ಬಗ್ಗೆ ವಿಶೇಷ ತನಿಖಾ ತಂಡ (SIT) ಮೂಲಕ ತನಿಖೆಗೆ ಒತ್ತಾಯಿಸುತ್ತಿದೆ. ಇದೇ ಬೇಡಿಕೆಯನ್ನು ಅದು ರಾಜ್ಯಪಾಲರ (Governor of Karnataka) ಮುಂದೆಯೂ ಇಡಲಿದೆ.
ಆಗಸ್ಟ್ 4ರಂದು (ಶುಕ್ರವಾರ) ಕರಾವಳಿ ಭಾಗದ ಬಿಜೆಪಿ ಶಾಸಕರು, ಮುಖಂಡರು, ಹಿಂದೂಪರ ಸಂಘಟನೆಗಳ ಸದಸ್ಯರ ನಿಯೋಗವೊಂದು ರಾಜ್ಯಪಾಲರನ್ನು ಭೇಟಿ ಮಾಡಲಿದೆ. ಶುಕ್ರವಾರ ಮಧ್ಯಾಹ್ನ 12.30ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಕೊಡಲಿರುವ ಬಿಜೆಪಿ ನಿಯೋಗವು ವಿಡಿಯೊ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಒತ್ತಾಯಿಸಲಿದೆ. ರಾಜ್ಯಪಾಲರ ಭೇಟಿಗೂ ಮುನ್ನ ಬಿಜೆಪಿ ನಾಯಕರು ವಿಧಾನಸೌಧದಲ್ಲಿ ಸಭೆ ನಡೆಸಲಿದ್ದಾರೆ.
ಉಡುಪಿಯಲ್ಲಿ ಬೃಹತ್ ಪ್ರತಿಭಟನೆ
ಉಡುಪಿ ಕಾಲೇಜಿನ ವಿಡಿಯೊ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಹಿಂದೂ ಸಂಘಟನೆಗಳ ಜಂಟಿ ಸಹಯೋಗದಲ್ಲಿ ಗುರುವಾರ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಹಿಂದೂ ಸಂಘಟನೆ ಮುಖಂಡರಾದ ಶರಣ್ ಪಂಪ್‌ವೆಲ್, ಸುನೀಲ್ ಕೆ ಆರ್ ಭಾಗಿಯಾಗಿರುವ ಕಾರ್ಯಕ್ರಮದಲ್ಲಿ ಈ ಪ್ರಕರಣದ ವಿಚಾರದಲ್ಲಿ ಟ್ವೀಟ್ ಮಾಡಿ ಅದು ರಾಷ್ಟ್ರಾದ್ಯಂತ ಸದ್ದು ಆಗುವಂತೆ ಮಾಡಿದ ಸಾಮಾಜಿಕ ಕಾರ್ಯಕರ್ತೆ ರಶ್ಮೀ ಸಾವಂತ್, ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಎದುರಿಸಿ ಬಂಧಿತರಾದ ಬಿಜೆಪಿ ಮಾಧ್ಯಮ ಪ್ರಕೋಷ್ಠದ ಶಕುಂತಲಾ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮತ್ತಿತರರು ಭಾಗಿಯಾಗಿದ್ದಾರೆ.
ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗ ದಳದ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯ ಸಭಾ ಕಾರ್ಯಕ್ರಮಕ್ಕೆ ಮೊದಲು ಜೋಡುಕಟ್ಟೆಯಿಂದ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದವರೆಗೆ ಬೃಹತ್ ರ‍್ಯಾಲಿ ನಡೆಯಿತು.
ಕಳೆದು ಹೋದ ಮಾನ ಮತ್ತೆ ಬರುವುದಿಲ್ಲ
ಸಮಾರಂಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ರಶ್ಮೀ ಸಾಮಂತ್ ಅವರು, ಹಿಂದೂ ಸಮಾಜದ ಮೇಲೆ ನಿರಂತರ ದಾಳಿ ಆಗುತ್ತಿದೆ. ಆದರೆ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ʻʻಕಾಲೇಜಿನಲ್ಲಿ ನಡೆದ ಘಟನೆ ಅಪರಾಧ ಅಂತ ಯಾರೂ ಪರಿಗಣಿಸಿಲ್ಲ. ಹಿಂದುಗಳ ಮೇಲೆ ಅನ್ಯಾಯವಾದರೆ ಅದು ಅಪರಾಧ ಅಲ್ಲ ಅಂತ ಸಮಾಜ ಪರಿಗಣಿಸುತ್ತದೆ. ಇದು ಉಡುಪಿ ಜಿಲ್ಲೆಗೆ ನಾಚಿಕೆಗೇಡಿನ ಸಂಗತಿ. ಯುವತಿಯರ ಮರ್ಯಾದೆ ಒಮ್ಮೆ ಕಳೆದುಕೊಂಡರೆ ಮತ್ತೆ ವಾಪಾಸ್ ಪಡೆಯಲು ಸಾಧ್ಯವಿಲ್ಲʼʼ ಎಂದು ಹೇಳಿದರು ರಶ್ಮೀ ಸಾಮಂತ್.
ಇದನ್ನೂ ಓದಿ: Udupi Toilet Case : ಉಡುಪಿ ವಿಡಿಯೊ ಪ್ರಕರಣ SIT ತನಿಖೆ ಅಗತ್ಯ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ