ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ (Nethrajyothi Paramedical College) ನಡೆದ ಟಾಯ್ಲೆಟ್‌ನಲ್ಲಿ ವಿಡಿಯೊ ಚಿತ್ರೀಕರಣ ಪ್ರಕರಣ (Udupi Toilet Case)ಕ್ಕೆ ಸಂಬಂಧಿಸಿ ಪ್ರಚೋದನಾಕಾರಿ ಭಾಷಣ (Inflammatory speach) ಮತ್ತು ಮಾತುಗಳನ್ನು ಆಡಿದ ಮೂವರು ಹಿಂದು ಸಂಘಟನೆಗಳ (Hindu organizations) ನಾಯಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ವಿಶ್ವ ಹಿಂದು ಪರಿಷತ್ ಮುಖಂಡ (VHP Leader) ಶರಣ್ ಪಂಪ್‌ವೆಲ್ (Sharan Pumpwell), ಬಜರಂಗದಳ ನಾಯಕ (Bajarangdal leader) ದಿನೇಶ್ ಮೆಂಡನ್ (Dinesh Menodon), ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ (BJP Mahila Morcha president( ವೀಣಾ ಶೆಟ್ಟಿ (Veena Shetty) ಅವರ ಮೇಲೆ ಕೇಸು ದಾಖಲಾಗಿದೆ.
ನೇತ್ರಜ್ಯೋತಿ ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (Three Muslim Students) ಹಿಂದು ವಿದ್ಯಾರ್ಥಿನಿಯೊಬ್ಬರ (Hindu student) ಟಾಯ್ಲೆಟ್ ಬಳಕೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಗುಪ್ತವಾಗಿ ಚಿತ್ರೀಕರಿಸಿದ್ದಾರೆ ಎಂಬ ಈ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿರುವ ಹಿಂದೂ ಸಂಘಟನೆಗಳು, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಗುರುವಾರ (ಆಗಸ್ಟ್ 3) ಉಡುಪಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದವು. ಈ ವೇಳೆ ನಾಯಕರು ಮಾಡಿದ ಭಾಷಣವನ್ನು ಆಧರಿಸಿ ಉಡುಪಿ ನಗರ ಠಾಣಾ ಎಸ್ ಐ ಪುನೀತ್ ಮೂಲಕ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಪ್ರತಿಭಟನಾ ಸಭೆಯಲ್ಲಿ ಪ್ರಚೋದನ್ಮಾತಕವಾಗಿ ಭಾಷಣ ಮಾಡಿದ್ದಾರೆ, ಸಾರ್ವಜನಿಕ ಶಾಂತಿಗೆ ಭಂಗ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಯಾರ ಮೇಲೆ ಪ್ರಕರಣ ದಾಖಲು? ಯಾರ ಮಾತಿಗೆ ಆಕ್ಷೇಪ?
1. ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್
ಅವರು ಹೇಳಿದ್ದೇನು?: ಹಿಂದು ಮಹಿಳೆಯರು ಕೈಯಲ್ಲಿ ತಲವಾರು ಹಿಡಿಯಬೇಕು
1. ಇಂಥ ದಾಳಿಗಳು ಇಂದಿಗೇ ಕೊನೆಯಾಗಬೇಕು. ಇಂದಿಗೇ ಕೊನೆಯಾಗಬೇಕು ಎಂದರೆ ಹಿಂದೂ ತಾಯಂದಿರು ಎಚ್ಚರ ಆಗಬೇಕು. ಸೌಟು, ಪೊರಕೆ ಹಿಡಿಯುವ ಕೈಯ್ಯಲ್ಲಿ ಶಸ್ತ್ರಾಸ್ತ್ರ ಹಿಡಿಯಿರಿ. ಅನ್ಯಾಯವಾದಾಗ ತಲವಾರು, ಕತ್ತಿ ಹಿಡಿಯಲು ರೆಡಿ ಆಗಬೇಕಾಗಿದೆ.. ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಕೊಡಬೇಕಾಗಿದೆ.
2. ಮುಸ್ಲಿಮರು ಈಗ ಹಿಂದು ಯುವತಿಯರು ಮತ್ತು ಶ್ರದ್ಧಾಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ದಾರೆ. ಉಡುಪಿಯ ಕಾಲೇಜಿನಲ್ಲಿ ನಡೆಸಿದ ಮಾದರಿಯಲ್ಲೇ ವಿಡಿಯೊಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೊಗಳನ್ನು ಬ್ಲ್ಯಾಕ್ ಮೇಲ್ ಮಾಡಲು, ಮತಾಂತರ ಮಾಡಲು ಬಳಸುತ್ತಾರೆ.
3. ಸನಾತನ ಹಿಂದು ಸಂಸ್ಕೃತಿ (Hindu Culture) ನಾಶ ಮಾಡಲು ಮೂವರು ರಾಕ್ಷಸಿಯರು ಬಂದಿದ್ದಾರೆ. ಅವರೀಗ ಜಿಹಾದಿ ರಾಕ್ಷಸಿಯರ (Jihadi demons) ಮೂಲಕ ಹಿಂದೂ ಹೆಣ್ಮಕ್ಕಳ ಮಾನ ತೆಗೆಯಲು ಸಂಚು ಮಾಡಿದ್ದಾರೆ. ನಾವು ಹಿಂದು ರಕ್ಷಕರಾಗಿ ಆ ಜಿಹಾದಿ ರಾಕ್ಷಸಿಯರಿಗೆ ಉತ್ತರ ಕೊಡುತ್ತೇವೆ.
2. ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್
ಅವರು ಹೇಳಿದ್ದೇನು: ಆದಿ ಉಡುಪಿಯ ಬೆತ್ತಲೆ ಪ್ರಕರಣವನ್ನು ಉಲ್ಲೇಖಿಸಿ ಭಾಷಣ ಮಾಡಿದ್ದರು. ಈ ಹಿಂದೆ ದನದ ಮಾಂಸ ಮಾರಾಟ ಮಾಡಿದ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಬೆತ್ತಲೆಯಾಗಿಸಿ ಹಲ್ಲೆ ಮಾಡಲಾಗಿತ್ತು.
3. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ
ಅವರು ಹೇಳಿದ್ದೇನು?: ಮುಸ್ಲಿಂ ಹುಡುಗಿಯರನ್ನು ಶಾಲಾ ಕಾಲೇಜಿಗೆ ಸೇರಿಸಬೇಡಿ, ಮದರಸಗಳಿಗೆ ಸೇರಿಸಿ ಎಂದಿದ್ದರು ವೀಣಾಶೆಟ್ಟಿ. ಜತೆಗೆ ಕೋಮು ದ್ವೇಷ, ಧರ್ಮ ತಾರತಮ್ಯ ಮಾಡುವ ಹೇಳಿಕೆ ಎಂಬ ಕಾರಣಕ್ಕೆ ಕೇಸು ದಾಖಲಿಸಲಾಗಿದೆ. ವೀಣಾ ಶೆಟ್ಟಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.
ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡ ಕೋರ್ಟ್
ಈ ನಡುವೆ, ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ವಿದ್ಯಾರ್ಥಿನಿಯ ಹೇಳಿಕೆಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಜೆಎಂಎಫ್ ಸಿ ಕೋರ್ಟ್ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಆಕೆ ಈಗಾಗಲೇ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಆದರೆ, ಅದರ ಅಧಿಕೃತತೆಗಾಗಿ, ಪೊಲೀಸ್ ತನಿಖೆಯ ಒಂದು ಭಾಗವಾಗಿ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ದಾಖಲಿಸಲಾಗಿದೆ.
ನ್ಯಾಯಾಧೀಶರು ʻʻನಿಮ್ಮ ಮೇಲೆ ಯಾವುದಾದರೂ ಒತ್ತಡ ಇದೆಯಾ? ಯಾರಾದ್ರೂ ಹೇಳಿಕೊಟ್ಟದ್ದನ್ನು ಹೇಳುತ್ತಿದ್ದೀರಾ?ʼʼ ಎಂದು ಪ್ರಶ್ನಿಸಿದರು. ಆಗ ವಿದ್ಯಾರ್ಥಿನಿ, ʻಒತ್ತಡದ ಹೇಳಿಕೆ ಅಲ್ಲ ಸರ್ʼ ಎಂದು ಹೇಳಿ ಜುಲೈ 18ರಂದು ಏನು ನಡೆಯಿತು ಎನ್ನುವುದರ ವಿವರವನ್ನು ನೀಡಿದರು. ಕೋರ್ಟ್ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿತು.
ಇದನ್ನೂ ಓದಿ: Udupi Toilet Case: ಉಡುಪಿಯ ಆ 3 ಮುಸ್ಲಿಂ ವಿದ್ಯಾರ್ಥಿನಿಯರನ್ನು ಜಿಹಾದಿ ರಕ್ಕಸಿಯರಿಗೆ ಹೋಲಿಸಿದ ಶರಣ್ ಪಂಪ್‌ವೆಲ್