Site icon Vistara News

Udupi Toilet Case : ವಿಡಿಯೊ ಚಿತ್ರೀಕರಣ ಪ್ರಕರಣ; ಉಡುಪಿ ಕಾಲೇಜಿನೊಳಗೆ ಖುಷ್ಬೂ ವಿಚಾರಣೆ, ಹೊರಗಡೆ ABVP ಪ್ರತಿಭಟನೆ

ABVP Students protest

ಉಡುಪಿ: ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (Three Muslim students) ಹಿಂದು ವಿದ್ಯಾರ್ಥಿನಿಯೊಬ್ಬಳ ಟಾಯ್ಲೆಟ್‌ ಬಳಕೆಯ (Udupi Toilet Case) ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ (Udupi Toilet Case) ಎಂಬ ಆರೋಪದೊಂದಿಗೆ ದೇಶಾದ್ಯಂತ ಸುದ್ದಿಯಾದ ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿಗೆ (Nethrajyothi Paramedical College) ರಾಷ್ಟ್ರೀಯ ಮಹಿಳಾ ಆಯೋಗದ (National Womens Commission) ಸದಸ್ಯೆ ಖುಷ್ಬೂ ಸುಂದರ್‌ (Khushboo Sundar) ಅವರು ಗುರುವಾರ ಬೆಳಗ್ಗೆ ಆಗಮಿಸಿದ್ದು ಆಡಳಿತ ಮಂಡಳಿಯ ಜತೆ ಮಾತುಕತೆ ಆರಂಭಿಸಿದ್ದಾರೆ. ಇದರ ಜತೆಗೆ ಕಾಲೇಜಿನ ಹೊರಗಡೆ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಮಳೆಯಲ್ಲೇ ಪ್ರತಿಭಟನೆ (Protest by ABVP Students) ನಡೆಸುತ್ತಿದ್ದಾರೆ.

ಕಾಲೇಜಿನ ಟಾಯ್ಲೆಟ್‌ನಲ್ಲಿ ಮೊಬೈಲ್‌ ಇಟ್ಟು ಶೂಟಿಂಗ್‌ ನಡೆಸಿದ ವಿದ್ಯಾರ್ಥಿನಿಯರು ಬಳಿಕ ಈ ವಿಡಿಯೊವನ್ನು ತಮ್ಮ ಸಮುದಾಯದ ಯುವಕರ ವಾಟ್ಸ್‌ ಆಪ್‌ ಗ್ರೂಪ್‌ಗೆ ಶೇರ್‌ ಮಾಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಆದರೆ, ಕಾಲೇಜು ಆಡಳಿತ ಮಂಡಳಿ ಮತ್ತು ಉಡುಪಿ ಪೊಲೀಸರು ಈ ರೀತಿ ವಿಡಿಯೊ ಹಂಚಿಕೆಯಾಗಿಲ್ಲ. ಈಗ ಉಡುಪಿ ಕಾಲೇಜಿನ ಹೆಸರಿನಲ್ಲಿ ಓಡಾಡುತ್ತಿರುವ ವಿಡಿಯೊ ನಕಲಿ ಎಂದು ಹೇಳುತ್ತಿದ್ದಾರೆ.

ಆದರೆ, ರಾಜ್ಯಾದ್ಯಂತ ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಇದರ ವಿರುದ್ಧ ಸಿಡಿದು ನಿಂತಿದ್ದು ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಿವೆ. ಮೊಬೈಲ್‌ನಲ್ಲಿ ಶೂಟಿಂಗ್‌ ನಡೆಸಿದ ಯುವತಿಯರ ಮೇಲೆ ಕೇಸು ದಾಖಲಿಸಿ ಬಂಧಿಸಬೇಕು ಎನ್ನುವುದು ಬಿಜೆಪಿ ಮತ್ತು ಹಿಂದು ಪರ ಸಂಘಟನೆಗಳ ಬೇಡಿಕೆ. ಇದೊಂದು ಜಿಹಾದಿ ಕೃತ್ಯವಾಗಿದ್ದು, ಕಾಣದ ಕೈಗಳು ಮುಸ್ಲಿಂ ಯುವತಿಯರನ್ನು ಬಳಸಿಕೊಂಡು ಈ ಕೃತ್ಯ ನಡೆಸಿವೆ. ವಿದ್ಯಾರ್ಥಿನಿಯರೇ ಇಂಥ ಕೃತ್ಯದಲ್ಲಿ ಭಾಗಿಯಾಗಿರುವುದು ಅತ್ಯಂತ ಅಪಾಯಕಾರಿ ಎನ್ನುವುದು ಹಿಂದೂ ಸಂಘಟನೆಗಳ ವಾದ.

ಈ ನಡುವೆ ಪೊಲೀಸರು ಪ್ರಕರಣ ನಡೆದ ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿನಿಯರ ಮೇಲೆ ಕೇಸು ದಾಖಲಿಸಿಕೊಂಡಿದೆ. ಜತೆಗೆ ಉಡುಪಿ ಕಾಲೇಜಿನ ವಿಡಿಯೊ ಎಂದು ನಕಲಿ ವಿಡಿಯೊಗಳನ್ನು ಹರಿಯಬಿಡುತ್ತಿರುವ ಕೆಲವರ ಮೇಲೆ ಕೇಸು ದಾಖಲಿಸಿಕೊಂಡಿದೆ.

ಕಾಲೇಜಿಗೆ ಆಗಮಿಸಿದ ಖುಷ್ಬೂ ಸುಂದರ್

ಸಂತ್ರಸ್ತ ವಿದ್ಯಾರ್ಥಿನಿ ಜತೆ ಖುಷ್ಬೂ ಮಾತುಕತೆ

ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಸುಂದರ್ ಅವರು ನೇತ್ರ ಜ್ಯೋತಿ ಕಾಲೇಜಿಗೆ ಆಗಮಿಸಿ ಸಂತ್ರಸ್ತೆ ವಿದ್ಯಾರ್ಥಿನಿ ಮತ್ತು ಆಡಳಿತ ಮಂಡಳಿ ಜೊತೆಗೂ ಮಾತುಕತೆ ನಡೆಸಿದರು. ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ನೇತ್ರಜ್ಯೋತಿ ಕಾಲೇಜಿನ ಒಳಗೆ ಹೋಗುವ ಮುನ್ನ ಖುಷ್ಬೂ ಸುಂದರ್‌ ಹೇಳಿದರು.

ಸುರಿಯುವ ಮಳೆಯಲ್ಲೂ ಎಬಿವಿಪಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಉಡುಪಿ ನೇತ್ರ ಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ವಿವಾದಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಹುತಾತ್ಮರ ಸ್ಮಾರಕದ ಬಳಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ.

ABVP protest at Udupi

ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಬೇಕು, ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿರುವ ವಿದ್ಯಾರ್ಥಿಗಳು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರುವಂತೆ ಪಟ್ಟುಹಿಡಿದಿದ್ದಾರೆ. ಸುರಿಯುತ್ತಿರುವ ಮಳೆಯಲ್ಲೂ ಪ್ರತಿಭಟನೆ ನಡೆಯುತ್ತಿದೆ.

ಖಾಸಗಿ ಯೂಟ್ಯೂಬ್‌ ಚಾನೆಲ್‌ ಮೇಲೆ ಎಫ್‌ಐಆರ್‌

ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ವಿಡಿಯೊ ಎಂದು ನಕಲಿ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ ಖಾಸಗಿ ಯೂಟ್ಯೂಬ್ ಚಾನೆಲ್ ಮೇಲೆ ಎಫ್ ಐಆರ್ ದಾಖಲಾಗಿದೆ.

ಯೂಟ್ಯೂಬ್ ಚಾನೆಲ್ ನಲ್ಲಿ ಎಡಿಟೆಡ್ ಫೇಕ್ ವಿಡಿಯೊ ಅಪ್ ಲೋಡ್ ಮಾಡಿ ಅದನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಕಾಲುಸಿಂಗ್ ಚೌಹಾಣ್ ಎಂಬಾತನ ಮೇಲೆ ಕೋಮು ದ್ವೇಷ ಹರಡಿ ಸೌಹಾರ್ದತೆಗೆ ಧಕ್ಕೆ ಮಾಡುವ ಪ್ರಯತ್ನ ಎಂದು ಕೇಸು ದಾಖಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Udupi Toilet Video : ಟಾಯ್ಲೆಟ್ಟಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR

ಮಲ್ಪೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಒಂದು ವಿಡಿಯೊ ಶೂಟಿಂಗ್‌ ಮಾಡಿದ್ದಾರೆನ್ನಲಾದ ಮೂವರು ವಿದ್ಯಾರ್ಥಿನಿಯರು, ಕಾಲೇಜು ಆಡಳಿತ ಮಂಡಳಿ ಮೇಲಿನ ಪ್ರಕರಣ, ಇನ್ನೊಂದು ಫೇಕ್‌ ವಿಡಿಯೊ ಹಂಚಿದ ಆರೋಪದಲ್ಲಿ ಖಾಸಗಿ ಯೂ ಟ್ಯೂಬ್‌ ಚಾನೆಲ್‌ ಮೇಲೆ ಕೇಸು.

Exit mobile version