Site icon Vistara News

Udupi Toilet Case: ಉಡುಪಿಯ ಆ 3 ಮುಸ್ಲಿಂ ವಿದ್ಯಾರ್ಥಿನಿಯರನ್ನು ಜಿಹಾದಿ ರಕ್ಕಸಿಯರಿಗೆ ಹೋಲಿಸಿದ ಶರಣ್‌ ಪಂಪ್‌ವೆಲ್

Udupi protest Sharan Pumpwell

ಉಡುಪಿ: ಸನಾತನ ಹಿಂದು ಸಂಸ್ಕೃತಿ (Hindu Culture) ನಾಶ ಮಾಡಲು ಮೂವರು ರಾಕ್ಷಸಿಯರು ಬಂದಿದ್ದಾರೆ. ಅವರೀಗ ಜಿಹಾದಿ ರಾಕ್ಷಸಿಯರ (Jihadi demons) ಮೂಲಕ ಹಿಂದೂ ಹೆಣ್ಮಕ್ಕಳ ಮಾನ ತೆಗೆಯಲು ಸಂಚು ಮಾಡಿದ್ದಾರೆ. ನಾವು ಹಿಂದು ರಕ್ಷಕರಾಗಿ ಆ ಜಿಹಾದಿ ರಾಕ್ಷಸಿಯರಿಗೆ ಉತ್ತರ ಕೊಡುತ್ತೇವೆ ಎಂದು ಬೆಂಕಿ ಭಾಷಣ ಮಾಡಿದ್ದಾರೆ ವಿಶ್ವ ಹಿಂದು ಪರಿಷತ್‌ (Vishwa hindu Parishat) ಮುಖಂಡ ಶರಣ್‌ ಪಂಪ್‌ವೆಲ್‌ (Sharan Pumpwell).

ಉಡುಪಿ ಕಾಲೇಜಿನ ವಿಡಿಯೊ ಪ್ರಕರಣದ (Udupi Toilet Case) ಸಮಗ್ರ ತನಿಖೆಗೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳದ ಜಂಟಿ ಸಹಯೋಗದಲ್ಲಿ ಗುರುವಾರ ಕೃಷ್ಣ ಮಠದ ಪಾರ್ಕಿಂಗ್‌ ಏರಿಯಾದಲ್ಲಿ ನಡೆದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಜರಂಗ ದಳ ಮುಖಂಡ ಸುನಿಲ್ ಕೆ ಆರ್‌, ಈ ಪ್ರಕರಣದ ವಿಚಾರದಲ್ಲಿ ಟ್ವೀಟ್‌ ಮಾಡಿ ಅದು ರಾಷ್ಟ್ರಾದ್ಯಂತ ಸದ್ದು ಆಗುವಂತೆ ಮಾಡಿದ ಸಾಮಾಜಿಕ ಕಾರ್ಯಕರ್ತೆ ರಶ್ಮೀ ಸಾವಂತ್‌, ಮುಖ್ಯಮಂತ್ರಿಗಳ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪ ಎದುರಿಸಿ ಬಂಧಿತರಾದ ಬಿಜೆಪಿ ಮಾಧ್ಯಮ ಪ್ರಕೋಷ್ಠದ ಶಕುಂತಲಾ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಮತ್ತಿತರರು ಭಾಗಿಯಾಗಿದ್ದರು.

ಪ್ರತಿಭಟನಾಕಾರರನ್ನ ನಿಯಂತ್ರಿಸುವಲ್ಲಿ ಖಾಕಿ ಸರ್ಕಸ್! | College Washroom Video Row | Vistara News

ʻʻಇಂಥ ದಾಳಿಗಳು ಇಂದಿಗೇ ಕೊನೆಯಾಗಬೇಕು. ಇಂದಿಗೇ ಕೊನೆಯಾಗಬೇಕು ಎಂದರೆ ಹಿಂದೂ ತಾಯಂದಿರು ಎಚ್ಚರ ಆಗಬೇಕು. ಸೌಟು, ಪೊರಕೆ ಹಿಡಿಯುವ ಕೈಯ್ಯಲ್ಲಿ ಶಸ್ತ್ರಾಸ್ತ್ರ ಹಿಡಿಯಿರಿ. ಅನ್ಯಾಯವಾದಾಗ ತಲವಾರು, ಕತ್ತಿ ಹಿಡಿಯಲು ರೆಡಿ ಆಗಬೇಕಾಗಿದೆ.. ನಮ್ಮ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಎಚ್ಚರಿಕೆ ಕೊಡಬೇಕಾಗಿದೆʼʼ ಎಂದು ಹೇಳಿದರು ಶರಣ್‌ ಪಂಪ್‌ವೆಲ್‌.

ಮುಸ್ಲಿಮರು ಈಗ ಹಿಂದು ಯುವತಿಯರು ಮತ್ತು ಶ್ರದ್ಧಾಕೇಂದ್ರಗಳನ್ನು ಟಾರ್ಗೆಟ್‌ ಮಾಡಿದ್ದಾರೆ. ಉಡುಪಿಯ ಕಾಲೇಜಿನಲ್ಲಿ ನಡೆಸಿದ ಮಾದರಿಯಲ್ಲೇ ವಿಡಿಯೊಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೊಗಳನ್ನು ಬ್ಲ್ಯಾಕ್ ಮೇಲ್ ಮಾಡಲು, ಮತಾಂತರ ಮಾಡಲು ಬಳಸುತ್ತಾರೆ ಎಂದು ಆಪಾದಿಸಿದರು.

ಮೊಬೈಲ್‌ನಲ್ಲಿ ಯುವತಿಯ ನಗ್ನ ವಿಡಿಯೊ ಸಿಕ್ಕಿದೆ!

ಕಾಲೇಜಿನ ಆಡಳಿತ ಮಂಡಳಿ ಆಪಾದಿತ ಮೂವರು ವಿದ್ಯಾರ್ಥಿನಿಯರು ಮೊಬೈಲ್‌ ಯಾಕೆ ಸೀಜ್‌ ಮಾಡಲಿಲ್ಲ ಎಂದು ಪ್ರಶ್ನಿಸಿದ ಶರಣ್‌ ಪಂಪ್‌ವೆಲ್‌, ಮೊಬೈಲ್ ನಲ್ಲಿ ಇನ್ನೊಂದು ಯುವತಿಯ ನಗ್ನ ವಿಡಿಯೊ ಸಿಕ್ಕಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಕಾಲೇಜಿನಲ್ಲಿ ಇಂಥ ಘಟನೆಗಳು ಒಂದು ವರ್ಷದಿಂದಲೇ ನಡೆಯುತ್ತಿದೆ. ಕಾಲೇಜಿನ ಶಿಕ್ಷಕಿಯೊಬ್ಬರು ಬಹಳ ಹಿಂದೆಯೇ ಆಡಳಿತ ಮಂಡಳಿಗೆ ಈ ಬಗ್ಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಆಪಾದಿಸಿದರು.

ಆಡಳಿತಾಧಿಕಾರಿಯನ್ನು ಕಿತ್ತು ಹಾಕಿ

ಇಂಥ ಘಟನೆ ಯಾವತ್ತೂ ಮರುಕಳಿಸಬಾರದು ಎಂದು ಕಾಲೇಜಿನ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿರುವ ಶರಣ್‌ ಪಂಪ್‌ವೆಲ್‌, ಆಡಳಿತಾಧಿಕಾರಿ ಅಬ್ದುಲ್ ಖಾದರ್‌ನನ್ನು ಕಾಲೇಜಿನಿಂದ ವಜಾ ಮಾಡಿ. ವಜಾ ಮಾಡದಿದ್ದರೆ ಬ್ಯೂಟಿಫುಲ್ ಪನಿಷ್ಮೆಂಟ್ ಮಾಡಲು ಗೊತ್ತಿದೆ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿನಿಯರಿಗೆ ಪಿಎಫ್‌ಐ ನಂಟು?

ಮೂವರು ಆರೋಪಿತ ವಿದ್ಯಾರ್ಥಿನಿಯರಿಗೆ ನಿಷೇಧಿತ ಪಿಎಫ್ ಐ ಜೊತೆ ನಂಟು ಇದೆ. ಇವರ ಸಂಬಂಧಿಕರಾಗಿರುವ ಹುಸೇನ್ ಭಾವ ಎಂಬವ ಕೆಎಫ್‌ಡಿಯಲ್ಲಿದ್ದ. ಈಗ ಎಸ್ ಡಿಪಿಐ ಸದಸ್ಯ ಎಂದು ಹೇಳಿದ ಶರಣ್‌, ಆರೋಪಿ ವಿದ್ಯಾರ್ಥಿನಿಯರ ಹಿಂದೆ ಪಿಎಫ್ ಐ ಕೈವಾಡ ಇದೆ ಎಂಬ ಶಂಕೆ ಇದೆ. ಆರೋಪಿ ಯುವತಿಯ ಸಹೋದರ ಸೌದಿಯಿಂದ ಧಮ್ಕಿ ಹಾಕುವ, ಮಾನಹಾನಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂಧೂ ಹೇಳಿದರು.

ಮುಸ್ಲಿಂ ಮುಖಂಡರೇಕೆ ಖಂಡಿಸುತ್ತಿಲ್ಲ?

ʻʻದೇಶವನ್ನು ಇಸ್ಲಾಮೀಕರಣ ಮಾಡುವ ಕೆಲಸ ಆಗುತ್ತಿದೆʼʼ ಎಂದು ಆರೋಪಿಸಿದ ಶರಣ್‌ ಪಂಪ್‌ವೆಲ್‌, ಉಡುಪಿಯ ಘಟನೆಯ ಬಗ್ಗೆ ಧಾರ್ಮಿಕ ಮುಖಂಡರು, ಉಲೇಮಾಗಳು, ಧಾರ್ಮಿಕ ಸಂಘಟನೆಗಳು ಯಾಕೆ ಮಾತೆತ್ತುತ್ತಿಲ್ಲ? ಇಷ್ಟು ದೊಡ್ಡ ಪ್ರಕರಣ ಆದರೂ ಯಾಕೆ ಖಂಡಿಸುತ್ತಿಲ್ಲ?ʼʼ ಎಂದು ಪ್ರಶ್ನಿಸಿದರು.

ಮದರಸಾ ಶಿಕ್ಷಣದಿಂದ ಭಾರತದ ಐಕ್ಯತೆಗೆ ಧಕ್ಕೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲೂ ಮದರಸ ಶಿಕ್ಷಣ ಬ್ಯಾನ್ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಶರಣ್ ಪಂಪ್‌ವೆಲ್‌ ಮಾಡಿದರು.

ಇದನ್ನೂ ಓದಿ: Udupi Toilet Case : ರಾಜಭವನದ ಅಂಗಳ ಪ್ರವೇಶಿಸಲಿದೆ ಉಡುಪಿ ವಿಡಿಯೊ ಕೇಸ್‌; SIT ತನಿಖೆಗೆ ಬಿಜೆಪಿ ಒತ್ತಡ

Exit mobile version