Site icon Vistara News

Azaan controversy | ಕ್ರೀಡಾಕೂಟದಲ್ಲಿ ಹಿಂದೂ ಮಕ್ಕಳಿಂದ ಆಜಾನ್‌, ಶಾಲೆಯ ಬಗ್ಗೆ ಆಕ್ರೋಶ, ಕ್ಷಮೆಯಾಚನೆ

hindu girls

ಉಡುಪಿ: ಶಾಲಾ ಕ್ರೀಡಾಕೂಟದ ಸ್ವಾಗತ ನೃತ್ಯದಲ್ಲಿ ಹಿಂದೂ ಮಕ್ಕಳಿಂದ ಆಜಾನ್‌ ಮಾಡಿಸಿದ ಹಾಗೂ ಅದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಶಾಲೆ ಆಡಳಿತದಿಂದ ಕ್ಷಮೆ ಕೇಳಿಸಿದ ಘಟನೆ ನಡೆದಿದೆ.

ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿತ್ತು. ಶಂಕರನಾರಾಯಣದ ಮದರ್ ಥೇರೆಸಾ ಮೆಮೋರಿಯಲ್ ಶಾಲೆಯಲ್ಲಿ ಕ್ರೀಡಾಕೂಟ ಆಯೋಜನೆಯಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಾಗತ ನೃತ್ಯ ಮಾಡಿದ್ದರು. ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ ಮತದ ಹಾಡುಗಳಿಗೆ ವಿದ್ಯಾರ್ಥಿನಿಯರಿಂದ ನೃತ್ಯ ಮಾಡಿಸಲಾಗಿತ್ತು. ಹಿಂದೂ ವಿದ್ಯಾರ್ಥಿಗಳಿಂದ ಆಜಾನ್‌ (ಅಲ್ಲಾಹು ಅಕ್ಬರ್) ಮಾಡಿಸಲಾಗಿತ್ತು.

ಇದಕ್ಕೆ ಕೆಲ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಕಲ್ಗದೆಯಿಂದ ಖಂಡನೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳು ಆಜಾನ್ ಮಾಡಿದ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಶಂಕರನಾರಾಯಣ ಭಾಗದ ಸ್ಥಳೀಯ ಹಿಂದೂ ಪರ ಸಂಘಟನೆಗಳು ಖಂಡಿಸಿದ್ದವು. ಶಾಲಾ ಆಡಳಿತ ಮಂಡಳಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಕ್ಷಮೆ ಯಾಚಿಸಿದ್ದಾರೆ. ʼʼಕ್ರೀಡಾಕೂಟದ ಸ್ವಾಗತದ ವೇಳೆಯಲ್ಲಿ ಸರ್ವಧರ್ಮಗಳನ್ನೂ ಗೌರವಿಸುವ ಗೀತೆಯನ್ನು ಹಾಡಿ ನೃತ್ಯ ಮಾಡಲಾಗಿದೆ. ಯಾವುದೇ ಮತಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿಲ್ಲ ಅಥವಾ ಯಾರನ್ನೂ ಕಡೆಗಣಿಸಿಲ್ಲʼʼ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ | ಉಡುಪಿಯಲ್ಲಿ ಸಾವರ್ಕರ್‌ ವರ್ಸಸ್‌ ಆಸ್ಕರ್‌: ಬ್ರಹ್ಮಗಿರಿ ಸರ್ಕಲ್‌ಗೆ ಹೆಸರಿಡುವ ವಿಚಾರದಲ್ಲಿ ಬಿಜೆಪಿ ನಾಯಕರ ನಡುವೆ ಫೈಟ್‌

Exit mobile version