ಉಡುಪಿ: ಉಡುಪಿಯ ಕುಂದಾಪುರ ಸಮೀಪದ ವಕ್ವಾಡಿಯಲ್ಲಿ ಗಾಂಜಾ ನಶೆಯಲ್ಲಿ ಬಂದ ಹತ್ತಾರು ಯುವಕರ ಗ್ಯಾಂಗ್‌ವೊಂದು ತಲ್ವಾರ್ (Assault Case) ಝಳಪಿಸಿದೆ. ನಿನ್ನೆ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ನಾಲ್ಕೈದು ಜನರಿಗೆ ಗಂಭೀರವಾಗಿ ಗಾಯವಾಗಿದೆ.
ವಕ್ವಾಡಿಯಲ್ಲಿ ಗಾಂಜಾ ನಶೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ದಾಂಧಲೆ ಮಾಡಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಆಟೋ, ಬೈಕ್ ಮೇಲು ತಲ್ವಾರ್ ಬೀಸಿ ಹಾನಿ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಪಕ್ಕದಲ್ಲಿ ನಿಂತಿದ್ದ ಅಶೋಕ್ ಮತ್ತು ಚಂದ್ರಶೇಖರ್ ಎಂಬುವವರ ಮೇಲೆ ದಾಳಿ ಮಾಡಿದ್ದಾರೆ.
ಇದರಿಂದಾಗಿ ವಕ್ವಾಡಿಯ ಚಂದ್ರಶೇಖರ್ (27) ಮತ್ತು ಅಶೋಕ್ ದೇವಾಡಿಗ (45) ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಕ್ವಾಡಿಯ ಆದರ್ಶ(33), ಎಡ್ವರ್ಡ್(35), ಗಣೇಶ್ ಕುಂಭಾಶಿ(28), ಗೋವರ್ಧನ್(32)ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳು ಪರಾರಿ ಆಗಿದ್ದು, ಪೊಲೀಸ್‌ರು ಹುಡುಕಾಟ ನಡೆಸಿದ್ದಾರೆ.
ವಕ್ವಾಡಿ, ಗೋಪಾಡಿ ಭಾಗದಲ್ಲಿ ಗಾಂಜಾ, ಡ್ರಗ್ ನಶೆ ವಿಪರೀತವಾಗಿದ್ದು, ಅಪರಾಧ ಚಟುವಟಿಕೆ ಹೆಚ್ಚಾಗಿದೆ. ಹಲವಾರು ವರ್ಷಗಳಿಂದ ದಂಧೆ ಜತೆಗೆ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಸಾಕಷ್ಟು ಭಾರಿ ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರು ಇದುವರೆಗೂ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಜನರು ಕಿಡಿಕಾರಿದ್ದಾರೆ.
ಇದನ್ನೂ ಓದಿ: CM Siddaramaiah: ಇಂದು ಕಟಕಟೆ ಏರಲಿದೆ ಮುಡಾ ಪ್ರಕರಣ; 20 ಅಂಶಗಳೊಂದಿಗೆ ಸಿದ್ದರಾಮಯ್ಯ ಹೈಕೋರ್ಟ್‌ಗೆ; ಇಂದು ಏನೇನಾಗಲಿದೆ?
ಚಿಕ್ಕಬಳ್ಳಾಪುರದಲ್ಲಿ ರೋಡ್ ರೋಮಿಯೊಗಳ ವ್ಹೀಲಿಂಗ್
ಚಿಕ್ಕಬಳ್ಳಾಪುರದಲ್ಲಿ ರೋಡ್ ರೋಮಿಯೊಗಳ ವ್ಹೀಲಿಂಗ್ ಹುಚ್ಚಾಟ ಹೆಚ್ಚಾಗಿದೆ. ಹುಡುಗಿಯರಿಗೆ ಗಾಳ ಹಾಕಲು ಬಸ್ ಹಿಂದೆ ವ್ಹೀಲಿಂಗ್ ಮಾಡಿ ಫೋಸ್ ಕೊಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 44 ಸೇರಿದಂತೆ ಹಲವು ರಸ್ತೆಗಳಲ್ಲಿ ವ್ಹೀಲಿಂಗ್ ಹಾವಳಿಗೆ ಇತರ ಸವಾರರು ಆತಂಕಗೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ