Site icon Vistara News

Death news: ಒಂದೇ ದಿನ ಉಸಿರಿನ ನಾದ ನಿಲ್ಲಿಸಿದ ಸಹೋದರರು

artists death

ಉಡುಪಿ: ವಾದ್ಯ ಕಲಾವಿದರಾದ ಅಣ್ಣ ಹಾಗೂ ತಮ್ಮ ಒಂದೇ ದಿನ ಸಾವನ್ನಪ್ಪಿದ ಘಟನೆ ಗುರುವಾರ ಬ್ರಹ್ಮಾವರ ತಾಲೂಕಿನ ದೇವಾಡಿಗರಬೆಟ್ಟು ಎಂಬಲ್ಲಿ ಸಂಭವಿಸಿದೆ.

ದೇವಾಡಿಗರಬೆಟ್ಟು ರಾಘವೇಂದ್ರ (ಮೋನ 40) ಹಾಗೂ ಗಣೇಶ್ ದೇವಾಡಿಗ (51) ಸಾವನ್ನಪ್ಪಿದವರು. ಗುರುವಾರ ಬೆಳಗ್ಗೆ ರಾಘವೇಂದ್ರ ಅಲ್ಪಕಾಲದ ಅಸೌಖ್ಯದಿಂದ ಸಾವನ್ನಪ್ಪಿದ್ದರು. ತಮ್ಮನ ಸಾವಿನ ಸುದ್ದಿ ತಿಳಿದು ಮಧ್ಯಾಹ್ನ ಗಣೇಶ್ ದೇವಾಡಿಗ ಮೃತಪಟ್ಟಿದ್ದಾರೆ.

ಅಣ್ಣ ತಮ್ಮಂದಿರು ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಕೂಡ ವಾದ್ಯ ಸಂಗೀತದಲ್ಲಿ ಪ್ರಸಿದ್ಧಿ ಪಡೆದವರಾಗಿದ್ದರು. ಒಂದೇ ದಿನ ಸಂಗೀತದ ಸ್ವರ ನಿಲ್ಲಿಸಿದ ಸಹೋದರರಿಬ್ಬರ ಸಾವಿಗೆ ಇಡಿ ಊರೇ ಕಂಬನಿ ಮಿಡಿದಿದೆ.

ಇದನ್ನೂ ಓದಿ: Balipa Narayana Bhagavatha : ತೆಂಕು ತಿಟ್ಟಿನ ಭಾಗವತ ಬಲಿಪ ನಾರಾಯಣ ಭಾಗವತ ನಿಧನ

Exit mobile version