ಬೆಂಗಳೂರು: ರಾಜಧಾನಿಯ ಬಾಲಕನೊಬ್ಬ ಅಪ್ಪ- ಅಮ್ಮ ಕೊಡಿಸಿದ ಮೊಬೈಲ್‌ನಲ್ಲಿ ತನಗೆ ಬೇಕೆನಿಸಿದ ಸ್ಥಳದ ಬಗ್ಗೆ ಸರ್ಚ್ ಮಾಡುತ್ತಾ ನಾಪತ್ತೆ (Child missing) ಆಗಿದ್ದಾನೆ.
9ನೇ ತರಗತಿ ಓದುತ್ತಿರುವ ಬಾಲಕ ಆದಿತ್ಯ, ಕಟ್ಟಿಂಗ್ ಶಾಪ್‌ಗೆಂದು ಹೋದ ಬಳಿಕ ಕಣ್ಮರೆಯಾಗಿದ್ದಾನೆ. ಪರಾರಿಯಾಗುವ ಮುನ್ನ ಈತ ಮೊಬೈಲ್‌ನಲ್ಲಿ ಗೂಗಲ್‌ನಲ್ಲಿ ಮಲ್ಪೆ ಎಂದು ಸರ್ಚ್ ಮಾಡಿದ್ದ ಎಂಬುದು ತಿಳಿದುಬಂದಿದೆ. ಮನೆಯಲ್ಲಿದ್ದ ತನ್ನ ಬಟ್ಟೆಗಳನ್ನು ತೆಗೆದುಕೊಂಡು ಆತ ಹೋಗಿದ್ದಾನೆ.
ಆದಿತ್ಯನಿಗೆ 120 ರೂಪಾಯಿ ಕೊಟ್ಟು ಪೋಷಕರು ಕಟ್ಟಿಂಗ್ ಶಾಪ್‌ಗೆ ಕಳಿಸಿದ್ದರು. ಅಲ್ಲಿಂದ ನಾಪತ್ತೆಯಾಗಿದ್ದಾನೆ. Googleನಲ್ಲಿ ಈತ ಮಲ್ಪೆ ಎಂದು ಸರ್ಚ್ ಮಾಡಿರುವುದರಿಂದ, ಮಲ್ಪೆ ಕಡೆ ಹೋಗಿರುವ ಸಾಧ್ಯತೆ ಇದೆ ಎಂದು ದೂರು ನೀಡಿದ ತಂದೆ ತಾಯಿ ತಿಳಿಸಿದ್ದಾರೆ. ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಉಡುಪಿ ಜಿಲ್ಲೆಯ ಮಲ್ಪೆ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಪೋಷಕರು ಮಾಹಿತಿ ನೀಡಿದ್ದಾರೆ.
ಪೊಲೀಸರ ಜತೆಗೆ ಮಗನಿಗಾಗಿ ಪೋಷಕರು ಜ್ಯೋತಿಷಿ ಮೊರೆಯನ್ನೂ ಹೋಗಿದ್ದಾರೆ. ಜ್ಯೋತಿಷಿಯನ್ನು ಕೇಳಿದಾಗ ದಕ್ಷಿಣ ಕನ್ನಡ ಭಾಗದಲ್ಲಿದ್ದಾನೆಂದು ಹೇಳಿದ್ದಾರಂತೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Missing Case: ಪ್ರೀತಿಸಿ ಮದುವೆಯಾದ, 2 ಮಗುವಾದ ಬಳಿಕ ನಾಪತ್ತೆಯಾದ; ವರ್ಷವಾದರೂ ಇಲ್ಲ ಪತಿ ಸುಳಿವು