Site icon Vistara News

Cow slaughter : ಹೀಗೊಬ್ಬ ಕಟುಕ; ಜಮೀನಿಗೆ ಬರುವ ಹಸುಗಳ ಗುಂಡಿಟ್ಟು ಕೊಲ್ಲುವ ಕಿರಾತಕ!

Cow slaughter Bynduru

ಉಡುಪಿ: ಗೋವುಗಳ ಹತ್ಯೆ (Cow slaughter), ಕಳ್ಳ ಸಾಗಾಟ, ಅಕ್ರಮವಾಗಿ ಮಾಂಸ ಮಾಡಿ ಮಾರಾಟ ಮಾಡುವ ದಂಧೆಯ ವಿರುದ್ಧ ದೊಡ್ಡ ಹೋರಾಟಗಳು, ಹಿಂಸಾಚಾರಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ಸರ್ವ ರೀತಿಯಲ್ಲೂ ಮನುಷ್ಯನಿಗೆ ಉಪಕಾರಿಯಾದ ಗೋವುಗಳನ್ನು ಕೊಲೆ ಮಾಡಬೇಡಿ, ಕಟುಕರ ಕೈಗೆ ಕೊಡಬೇಡಿ ಎನ್ನುವುದು ಎಲ್ಲ ಕಡೆಯೂ ಹೆಚ್ಚುತ್ತಿರುವ ಬೇಡಿಕೆ. ಇದರ ನಡುವೆ ಇಲ್ಲೊಬ್ಬ ಕಟುಕ ಮೋಜಿಗೆ ಎಂಬಂತೆ ದನ ಕರುಗಳನ್ನು ಗುಂಡಿಟ್ಟು (Man Shoots and kills cows) ಸಾಯಿಸುತ್ತಿದ್ದಾನೆ.

ಉಡುಪಿ ಜಿಲ್ಲೆ (Udupi News) ಬೈಂದೂರಿನ ಬೆಳ್ಳಾಲ ಗ್ರಾಮದ ಅಂಗಡಿಜಡ್ಡು ಎಂಬಲ್ಲಿ ವಾಸವಾಗಿರುವ ನರಸಿಂಹ ಎಂಬಾತ ಬೆನ್ನು ಬೆನ್ನಿಗೇ ನಾಲ್ಕು ಹಸುಗಳನ್ನು ಕೊಂದು (Four Cows killed) ಹಾಕಿದ್ದಾನೆ. ಆತ ಕೊಲೆ ಮಾಡುವುದು ಕಟುಕರ ಕತ್ತಿಯಿಂದಲ್ಲ. ತನ್ನದೇ ನಾಡಕೋವಿಯಿಂದ ಗುಂಡು ಹೊಡೆದು.

ಈ ಭಾಗ ಪಶ್ಚಿಮ ಘಟ್ಟದ ತಪ್ಪಲಾಗಿರುವುದರಿಂದ ಕಾಡು ಪ್ರಾಣಿಗಳ ಉಪಟಳ ತಡೆಯಲು ಸರ್ಕಾರ ನಾಡಕೋವಿಗೆ ಪರವಾನಗಿಯನ್ನು ಕೊಡುತ್ತದೆ. ನರಸಿಂಹ ಎಂಬ ಈ ಕಿರಾತಕ ಅದನ್ನು ನಾಡಿನ ಬಡಪಾಯಿ ಪ್ರಾಣಿಗಳ ಹತ್ಯೆಗೆ ಬಳಸುತ್ತಿದ್ದಾನೆ ಎಂದು ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ನರಸಿಂಹ ತನ್ನ ಜಮೀನಿಗೆ ಬಂದ ಹಸುಗಳನ್ನು ಬೈದೋ, ಹೊಡೆದೋ, ಕಲ್ಲೆಸೆದೋ ಓಡಿಸುವ ಬದಲು ಅವುಗಳಿಗೆ ಗುರಿ ಇಟ್ಟು ಗುಂಡು ಹಾರಿಸಿ ಕೊಲ್ಲುತ್ತಿದ್ದಾನೆ ಎಂದು ಸಾವನ್ನಪ್ಪಿದ ದನಗಳ ಮಾಲೀಕರು ಆರೋಪಿಸಿದ್ದಾರೆ.

ಆತನ ನಾಡಕೋವಿಯ ಗರ್ಜನೆಗೆ ಈವರೆಗೆ ನಾಲ್ಕು ಹಸುಗಳು ಪ್ರಾಣ ಕಳೆದುಕೊಂಡಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಲ್ಲಿ ಗುಲಾಬಿ ಎಂಬ ಮಹಿಳೆಯ ಎರಡು ಹಸುಗಳು ಸೇರಿವೆ.

ಈ ನಡುವೆ, ಸುಮಾರು ಆರು ಹಸುಗಳು ಆತನ ಗುಂಡಿನಿಂದ ಗಾಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Cow Smugglers : ಗೋವುಗಳ ಜತೆಗೆ ಎಸ್ಕೇಪ್‌ ಆಗುತ್ತಿದ್ದ ದುರುಳರು; ಚೇಸ್‌ ಮಾಡಿ ಬಗ್ಗು ಬಡಿದ ಖಾಕಿ ಪಡೆ

ನನ್ನ ಜಮೀನಿಗೆ ಯಾವುದೇ ದನ ಕರುಗಳು ಬರಬಾರದು, ಬಂದರೆ ಗುಂಡಿಟ್ಟು ಸಾಯಿಸುತ್ತೇನೆ ಎಂದು ನರಸಿಂಹ ದನಗಳ ಮಾಲೀಕರಿಗೂ ಬೆದರಿಕೆ ಹಾಕಿದ್ದಾನಂತೆ. ಈ ಭಾಗದಲ್ಲಿ ದನಗಳನ್ನು ಹಾಡಿಗೆ ಬಿಡುವ ವಾಡಿಕೆ ಇದೆ. ಆಗ ಕೆಲವೊಮ್ಮೆ ಕೆಲವು ದನಗಳು ಕಣ್ಣು ತಪ್ಪಿಸಿ ಓಡಾಡುತ್ತವೆ. ಕೆಲವು ಪಕ್ಕದ ತೋಟಕ್ಕೆ ನುಗ್ಗುತ್ತವೆ

ಈ ರೀತಿ ಬಂದ ದನಗಳನ್ನು ಓಡಿಸುವುದು, ಹೊಡೆಯುವುದು, ಕಟ್ಟಿ ಹಾಕುವುದು, ಕಲ್ಲೆಸೆಯುವುದು ಮೊದಲಾದ ಕೆಲಸಗಳು ನಡೆಯುತ್ತವೆ. ದನಗಳು ಬರುವ ವಿಚಾರದಲ್ಲಿ ಮನೆಗಳ ನಡುವೆ ಜಗಳಗಳು ಕೂಡಾ ನಡೆಯುತ್ತವೆ. ಹೀಗಾಗಿ ಹೆಚ್ಚಿನವರು ಬೇರೆಯವರ ತೋಟಕ್ಕೆ ಹೋಗದಂತೆ ಎಚ್ಚರಿಕೆ ವಹಿಸುತ್ತಾರೆ.

ನರಸಿಂಹನ ಗುಂಡಿಗೆ ಬಲಿಯಾದ ಹಸುಗಳು

ಆದರೆ, ಕಣ್ಣು ತಪ್ಪಿಸಿ ಹೋಗುವ ದನಗಳಿಗೆ ಕಡಿಮೆ ಇಲ್ಲ. ಹೀಗೆ ಹೋಗುವ ದನಗಳನ್ನೇ ಗುಂಡಿನ ಮೊನೆಯ ಟಾರ್ಗೆಟ್‌ ಆಗಿ ಮಾಡಿಕೊಂಡು ಕೊಲೆ ಮಾಡುತ್ತಿರುವುದು ನರಸಿಂಹನ ಕ್ರೌರ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ ಗುಲಾಬಿ ಮತ್ತು ಇತರರು ಪೊಲೀಸ್‌ ಠಾಣೆಗೆ ದೂರು ನೀಡುತ್ತಿದ್ದಂತೆಯೇ ಆರೋಪಿ ನರಸಿಂಹ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಈಗ ಬಲೆ ಬೀಸಿದ್ದಾರೆ.

Exit mobile version