Site icon Vistara News

Drugs Menace: ಮಣಿಪಾಲದಲ್ಲಿ ತಡರಾತ್ರಿ ಪೊಲೀಸ್‌ ದಾಳಿ: ವಿದ್ಯಾರ್ಥಿಗಳ ಕುಡಿತ, ಗಾಂಜಾ ಸೇವನೆಗೆ ಬ್ರೇಕ್‌

manipal drugs

ಉಡುಪಿ: ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಹಲವು ಕಡೆ ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿರುವ ರಸ್ತೆ ಬದಿಯ ಅಡ್ಡಾಗಳಿಗೆ ದಾಳಿ (police raid) ನಡೆಸಿದ್ದಾರೆ.

ಉಡುಪಿ ಜಿಲ್ಲೆಯ ಮಣಿಪಾಲ ನಗರದಲ್ಲಿ ಪೊಲೀಸರ ವೀಕೆಂಡ್ ಕಾರ್ಯಾಚರಣೆ ನಡೆದಿದೆ. ತಡರಾತ್ರಿ ಅನುಮಾನಾಸ್ಪದ ಹೋಟೆಲ್‌ಗಳಿಗೆ ರೈಡ್ ಮಾಡಿದ ಮಣಿಪಾಲ ಪೊಲೀಸರು ಅನಧಿಕೃತ ರೀತಿಯಲ್ಲಿ ಅವಧಿ ಮೀರಿ ಹೋಟೆಲ್ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾಕಷ್ಟು ವಿದ್ಯಾರ್ಥಿಗಳು, ಅಪ್ರಾಪ್ತ ವಯಸ್ಕರು ಮದ್ಯ ಸೇವನೆಯಲ್ಲಿ ತೊಡಗಿದ್ದುದು ಕಂಡುಬಂದಿದೆ. ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಗಾಂಜಾ ಮತ್ತಿತರ ಡ್ರಗ್ಸ್‌ ಅಂಶಗಳಿಗಾಗಿ (Drugs cace)ಶೋಧಿಸಲಾಗುತ್ತಿದೆ.

ಇಲ್ಲಿನ ಹೋಟೆಲ್‌ಗಳ ಚಟುವಟಿಕೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಅಲ್ಲದೆ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮಣಿಪಾಲ ಠಾಣಾಧಿಕಾರಿ ದೇವರಾಜ್ ನೇತೃತ್ವದಲ್ಲಿ ತಂಡದಿಂದ ರಾತ್ರಿ ಕಾರ್ಯಾಚರಣೆ ನಡೆದಿದೆ. ಶನಿವಾರ ತಡರಾತ್ರಿ ನಾಕಾಬಂದಿ, ಚೆಕ್‌ಪೋಸ್ಟ್ ಹಾಕಿ ವಾಹನ ತಪಾಸಣೆ ನಡೆಸಲಾಗಿದೆ.

ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶದಿಂದ ಮಣಿಪಾಲಕ್ಕೆ ದೇಶದ ನಾನಾ ಕಡೆಗಳಿಂದ ಹಾಗೂ ವಿದೇಶದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಇಲ್ಲಿನ ಹಲವು ವಿದ್ಯಾರ್ಥಿಗಳು ಗಾಂಜಾ ಮತ್ತು ಡ್ರಗ್ಸ್ ಪ್ರಕರಣಗಳಲ್ಲಿ (Drugs Menace) ಸಿಲುಕಿಕೊಂಡಿದ್ದಾರೆ. ಇಡೀ ದಕ್ಷಿಣ ಕನ್ನಡಕ್ಕೆ ಇಲ್ಲಿಯೇ ದೇಶಿ- ವಿದೇಶಿ ಡ್ರಗ್ಸ್‌ ಬಂದಿಳಿಯುತ್ತಿದೆ ಎಂಬ ಅನುಮಾನಗಳಿವೆ. ಅದರಲ್ಲೂ ಮಣಿಪಾಲದಲ್ಲಿನ ಕೆಲವು ಹೋಟೆಲ್‌ಗಳಿಂದ ನಿಯಮ ಮೀರಿ ವ್ಯವಹಾರ ನಡೆಯುತ್ತಿದ್ದು, ಅಮಲುಕೋರ ವಿದ್ಯಾರ್ಥಿಗಳನ್ನು ಇವು ಪೋಷಿಸುತ್ತಿವೆ. ವಿದ್ಯಾರ್ಥಿಗಳಿಗೋಸ್ಕರ ಹೋಟೆಲ್‌ನ ಆಂತರಿಕ ವಿನ್ಯಾಸ, ಮದ್ಯ ನೀಡುವ ಸಮಯ ಇತ್ಯಾದಿಗಳಲ್ಲೂ ಹಲವಾರು ಕಾನೂನುಬಾಹಿರ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: Drugs Menace: ಡ್ರಗ್ಸ್ ಹಾವಳಿ ತಡೆಗೆ ವಿಶೇಷ ತಂಡ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

Exit mobile version