ಉಡುಪಿ: ಕುಂದಾಪುರದಲ್ಲಿ ಲವ್ ಸೆಕ್ಸ್ ಜಿಹಾದ್ ಕಾರಣಕ್ಕೆ ಶಿಲ್ಪಾ ದೇವಾಡಿಗ ಸಾವು ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಅಜೀಜ್ ಮತ್ತು ಆತನ ಸಹೋದರರಾದ ರಹೀಂ, ಅಬ್ದುಲ್ ಖಾದರ್, ರಶೀದ್ ಎಂದು ಗುರುತಿಸಲಾಗಿದೆ.
ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ವಿಷ ಸೇವಿಸಿ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಜೀಜ್ ಎಂಬಾತ ಶಿಲ್ಪಾ ದೇವಾಡಿಗ ಜತೆಗೆ ಪ್ರೀತಿ ಪ್ರೇಮದ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದ. ವಿವಾಹಿತನಾಗಿದ್ದ ಅಜೀಜ್ ಶಿಲ್ಪಾಳನ್ನು ಮದುವೆಯಾಗಲು ಹಾಗೂ ಇಸ್ಲಾಂಗೆ ಮತಾಂತರವಾಗಲು ಒತ್ತಡ ಹಾಕಿದ್ದ. ಇಬ್ಬರ ಖಾಸಗಿ ವಿಚಾರಗಳನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ ಆರೋಪಿ, ತನ್ನ ಮಾತಿಗೆ ಒಪ್ಪದಿದ್ದರೆ ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಈ ಹಿನ್ನೆಲೆಯಲ್ಲಿ ಶಿಲ್ಪಾ ದೇವಾಡಿಗ ಮನನೊಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಭಟ್ಕಳದಿಂದ ಉಡುಪಿಗೆ ಹೋಗುವ ಮಾಗದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಅವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. ಆರೋಪಿ ಅಜೀಜ್‌ಗೆ 7 ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಇರಿಸುವಂತೆ ಕೋರ್ಟ್ ಆದೇಶಿಸಿದೆ. ಅಲ್ಲದೆ, ಆರೋಪಿಗೆ ಆಶ್ರಯ ನೀಡಿದ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿಡುವಂತೆ ಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ: LOVE JIHAD| ಲವ್ ಜಿಹಾದ್‌ಗೆ ಕುಂದಾಪುರದ ಹಿಂದೂ ಯುವತಿ ಬಲಿ