ಉಡುಪಿ : ಮಸೀದಿಗೆ ನಮಾಜ್ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ನಮಾಜ್ ಮಾಡುತ್ತಾ ಕುಳಿತಲ್ಲೇ ಕುಸಿದು (Died while doing Namaz) ಬಿದ್ದು ಹೃದಯಾಘಾತದಿಂದ (Heart Attack) ಪ್ರಾಣ ಕಳೆದುಕೊಂಡಿದ್ದಾರೆ. ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ (Anjuman Mosque Udupi) ಶುಕ್ರವಾರ ಈ ಘಟನೆ ನಡೆದಿದೆ.
ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಷ್ತಾಕ್ (55) ಅವರೇ ನಮಾಜ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡವರು. ಮುಷ್ತಾಕ್ ಅವರು ಶುಕ್ರವಾರ ಮಧ್ಯಾಹ್ನದ ಜುಮಾ ನಮಾಜ್‌ಗಾಗಿ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಗೆ ಬಂದಿದ್ದರು. ಅವರು ಖುತ್ಬಾ ಕೇಳಲು ಕುಳಿತಿದ್ದಾಗ ಒಮ್ಮಿಂದೊಮ್ಮೆಗೇ ಏನೋ ಆದಂತಾಗಿ ಕುಳಿತದಲ್ಲೇ ಕುಸಿದು ಎದುರಿಗೆ ಬಿದ್ದರು.
ಅವರ ಜತೆಗೆ ನಮಾಜ್ ಮಾಡುತ್ತಿದ್ದವರಿಗೆ ಮೊದಲು ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ. ಅರಿವಾದ ಬಳಿಕ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಅವಿವಾಹಿತರಾಗಿದ್ದ ಮುಷ್ತಾಕ್ ಅವರ ಮೃತದೇಹದ ದಫನ ಕ್ರಿಯೆ ದೊಡ್ಡಣಗುಡ್ಡೆ ಮಸೀದಿಯಲ್ಲಿ ನಡೆಯಿತು.
ಇದನ್ನೂ ಓದಿ: Heart Attack : ಕ್ರಿಕೆಟ್ ಆಡುತ್ತಿದ್ದ ಬ್ಯಾಂಕ್ ಉದ್ಯೋಗಿ ಅಲ್ಲೇ ಕುಸಿದು ಬಿದ್ದು ಸಾವು
ಹೇಮಾವತಿ ಹಿನ್ನೀರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು
ಹಾಸನ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ತಾಲೂಕು ಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ವಿದ್ಯಾರ್ಥಿ ನೀರಿನಲ್ಲಿ ಮುಗಿ ಮೃತಪಟ್ಟಿದ್ದಾನೆ.
ಬೇಲೂರು ಮೂಲದ ಗಿರೀಶ್ (20) ಮೃತ ಯುವಕ. ಹಾಸನದ ರಾಜೀವ್ ಕಾಲೇಜ್‌ನಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ. ಕಾಲೇಜಿಗೆ ರಜಾ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಗಿರೀಶ್ ಈಜಲು ತೆರಳಿದ್ದ. ಸರಿಯಾಗಿ ಈಜು ಬಾರದದಿದ್ದರೂ ನೀರಿಗೆ ಇಳಿದಿದ್ದ. ಹೀಗಾಗಿ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಹೊರತೆಗೆದಿದ್ದಾರೆ.
ಗೆಳೆಯರ ಜತೆ ನೀರಾಟಕ್ಕೆ ಬಂದ ಹುಡುಗ ಎಲ್ಲರ ಕಣ್ಣೆದುರೇ ಜಲಸಮಾಧಿ
ಚಿಕ್ಕಬಳ್ಳಾಪುರ : ಇಲ್ಲಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ (Shrinivasa sagara Jalashaya) ಬೆಂಗಳೂರು ಮೂಲದ ಯುವಕನೊಬ್ಬ (Young Man from Bangalore) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ (Drowned in Pond). ಸ್ನೇಹಿತರ ಜತೆ ಬಂದಿದ್ದ ಯುವಕ ಮೋಜು ಮಸ್ತಿ ಮಾಡುತ್ತಾ ನೀರಿಗಿಳಿದಾಗ ಮುಳುಗಿ ಮೃತಪಟ್ಟಿದ್ದಾನೆ.
ಬೆಂಗಳೂರಿನ ಬಾಬೂಸಾಪಾಳ್ಯ ನಿವಾಸಿಯಾಗಿರುವ 23 ವರ್ಷದ ಅಭಿ ಮೃತ ಯುವಕ. ಆತ ತನ್ನ ಗೆಳೆಯರ ಜತೆ ಚಿಕ್ಕ ಬಳ್ಳಾಪುರ ತಾಲೂಕಿನ (Chikkaballapura News) ಶ್ರೀನಿವಾಸ ಸಾಗರ ಜಲಾಶಯ ನೋಡಲು ಬಂದಿದ್ದ. ಜಲಾಶಯದ ನೀರಿನಲ್ಲಿ ಈಜಾಡಲು ಹೋಗಿ ನೀರು ಪಾಲಾಗಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶವ ಶೋಧಕಾರ್ಯ ನಡೆಯುತ್ತಿದೆ.
ತಂದೆತಾಯಿಗೆ ಒಬ್ಬನೆ ಮಗನಾಗಿದ್ದ ಅಭಿ ನೀರುಪಾಲಾಗಿರುವುದರಿಂದ ಕುಟುಂಬ ಕಣ್ಣೀರಿಡುತ್ತಿದೆ. ಮನೆಯವರು ಕೂಡಾ ಆಗಮಿಸಿದ್ದು ಶವದ ಹುಡುಕಾಟ ಮುಂದುವರಿದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.