Site icon Vistara News

Heart Attack : ವಿಡಿಯೊಗ್ರಫಿ ಮಾಡುತ್ತಿದ್ದಾಗಲೇ ಹೃದಯಾಘಾತ; ಸ್ಥಳದಲ್ಲೇ ಕುಸಿದು ಮೃತ್ಯು

Heart attack Photographer death

ಉಡುಪಿ: ವ್ಯಕ್ತಿಯೊಬ್ಬರು ವಿಡಿಯೊಗ್ರಫಿ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್‌ ಶೆಟ್ಟಿ (45) ಮೃತಪಟ್ಟವರು (Videographer death).

ಕಾರ್ಕಳ ತಾಲೂಕಿನ (Karkala News) ಕಡ್ತಲ ಗ್ರಾಮದ ಕುಕ್ಕುಜೆ ಎಂಬಲ್ಲಿ ನಡೆದ ಘಟನೆ ಇದಾಗಿದೆ. ಕುಕ್ಕುಜೆಯಲ್ಲಿ ಮನೆಯೊಂದರ ಗೃಹ ಪ್ರವೇಶದ ವಿಡಿಯೋಗ್ರಫಿಗೆ ದೀಪಕ್‌ ಹೋಗಿದ್ದರು. ಅಲ್ಲಿ ವಿಡಿಯೊಗ್ರಫಿ ಮಾಡುತ್ತಿದ್ದಾಗಲೇ ದಿಢೀರನೆ ಕುಸಿದುಬಿದ್ದರು.

ಅಲ್ಲಿದ್ದವರೆಲ್ಲ ದೀಪಕ್‌ ಶೆಟ್ಟಿ ಅವರನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ಅಲ್ಲಿ ಕರೆದೊಯ್ಯುವ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು. ದೀಪ್‌ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿವೆ. ಸಣ್ಣ ವಯಸ್ಸಿನಲ್ಲೇ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಣ್ಣ ಸಣ್ಣ ಮಕ್ಕಳು ಕೂಡಾ ಹೃದಯಾಘಾತಕ್ಕೆ ಬಲಿಯಾದ ಘಟನೆಗಳು ವರದಿಯಾಗುತ್ತಿವೆ.

ಇದನ್ನೂ ಓದಿ : Heart Attack : ನಮಾಜ್‌ ಮಾಡುತ್ತಿದ್ದಾಗ ಕುಳಿತಲ್ಲೇ ಕುಸಿದು ಬಿದ್ದು ಮೃತ್ಯು; ವಿಡಿಯೊ ಇದೆ

ಛೇ.. 2 ವರ್ಷದ ಮಗಳನ್ನು ನೇಣಿಗೆ ಹಾಕಿ ತಾನೂ ಕೊರಳೊಡ್ಡಿದ ತಾಯಿ!

ಕಲಬುರಗಿ: ಬದುಕಿನ ಬವಣೆಗಳು ಏನಿರುತ್ತವೋ? ಸಹಿಸಲಾಗದ ಸಂಕಷ್ಟಗಳು ಹೇಗಿರುತ್ತವೋ? ಜೀವನವೇ ಬೇಡ ಎನ್ನುವಷ್ಟು ಜಿಗುಪ್ಸೆ ಮೂಡಿಸುವ ಭಯಾನಕ ಘಟನೆಗಳು ಹಲವರ ಬಾಳಿನಲ್ಲಿ ನಡೆಯುತ್ತಲೇ ಇರುತ್ತದೆ. ಅಂಥ ಹೊತ್ತಿನಲ್ಲೇ ಇಂಥ ಘಟನೆಗಳು (Self Harming) ನಡೆಯುವುದು. ಹೌದು, ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗಳನ್ನು ಕೊಂದು ತಾನೂ ಸಾವಿಗೆ ಶರಣಾಗಿದ್ದಾಳೆ (Woman ends life with Child). ಕಲಬುರಗಿ ಜಿಲ್ಲೆಯ (Kalaburagi news) ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ಈ ಕರುಳು ಹಿಂಡುವ ಘಟನೆ ನಡೆದಿದೆ.

ತಾಯಿಯೊಬ್ಬಳು ತನ್ನ ಎರಡು ವರ್ಚದ ಪುಟ್ಟ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಶಿವಲೀಲಾ ಆನಂದ(24) ಎಂಬಾಕೆಯೇ ತನ್ನ ಪುಟ್ಟ ಮಗಳು, ಎರಡು ವರ್ಷದ ವರ್ಷಿತಾಳನ್ನು ಕೊಂದು ತಾನೂ ಜೀವನ ಮುಗಿಸಿಕೊಂಡವಳು.

ಮೊದಲು ಎರಡು ವರ್ಷದ ಮಗಳನ್ನು ನೇಣಿಗೆ ಹಾಕಿ ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ ತಾಯಿ ಶಿವಲೀಲಾ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕೆ ಸಾವಿಗೆ ಶರಣಾಗಿದ್ದಾಳೆ.

ಗಂಡ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು ಶಿವಲೀಲಾ ಮಗುವನ್ನು ಕೊಂದು ತಾನೂ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಂಡ ಆನಂದ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version