ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸಂಘಟನೆಯಾಗಿರುವ ಹಿಂದು ಜಾಗರಣ ವೇದಿಕೆಯ (Hindu Jagarana Vedike) 20ಕ್ಕೂ ಅಧಿಕ ಮುಖಂಡರ (Hindu Leaders) ಫೇಸ್ ಬುಕ್ ಪ್ರೊಫೈಲ್‌ಗಳನ್ನು (FB profile Deleted) ಏಕಕಾಲದಲ್ಲಿ ಡಿಲೀಟ್ (Facebook profiles deleted) ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಯ ರಾಜ್ಯದ ಪ್ರಮುಖರ ಪ್ರೊಫೈಲ್‌ಗಳು ಇದ್ದಕ್ಕಿದ್ದಂತೆಯೇ ಕಾಣೆಯಾಗಿವೆ.
ವಿಸ್ತಾರ ನ್ಯೂಸ್‌ಗೆ ಈ ವಿಚಾರವನ್ನು ತಿಳಿಸಿರುವ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ (Shrikant Shetty Karkala) ಅವರು ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಹಿಂಜಾವೇಯ ರಾಜ್ಯದ 20ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ. ಇದು ಸರಕಾರದ ಸೂಚನೆಯಂತೆ ತೆಗೆದುಹಾಕಿದ್ದೋ, ಹ್ಯಾಕರ್ಸ್‌ಗಳನ್ನು ಬಳಸಿ ಮಾಡಿದ್ದಾರೋ ? ಎಂಬುವುದರ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದರು.
ಹಿಂದೂ ವಿಚಾರಗಳನ್ನು, ಹೋರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎನ್ನುವುದು ನಮ್ಮ ಸಂಶಯ. ಈ ರೀತಿಯಾಗಿ ನಡೆದಿರುವ ಈ ಸೈಬರ್ ದಾಳಿ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕುತಂತ್ರ ಎಂದು ಅವರು ಆರೋಪಿಸಿದರು.
ʻʻ2014ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಅ ರೀತಿಯ ಅಭಿಯಾನ ಈ ಬಾರಿ ಅಗಬಾರದು ಎನ್ನುವ ನಿಟ್ಟಿನಲ್ಲಿ ಹಿಂದೂ ಮುಖಂಡರ ಪೇಜ್ ಗಳನ್ನು ತೆಗೆದು ಹಾಕಿರುವ ಸಾಧ್ಯತೆಗಳಿವೆʼʼ ಎಂದು ಅವರು ಹೇಳಿದರು.
ಇದನ್ನೂ ಓದಿ : Udhayanidhi Stalin: ಸಂಸತ್‌ಗೆ ಮುರ್ಮುರನ್ನು ಆಹ್ವಾನಿಸದಿರುವುದೇ ಸನಾತನ ಧರ್ಮ ಎಂದ ಉದಯನಿಧಿ
ಆದರೆ, ಹಿಂದೂ ಜಾಗರಣ ವೇದಿಕೆ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡಿರುವಂಥದ್ದಲ್ಲ. ನಾವು ಕೇವಲ ಫೇಸ್ ಬುಕ್ ಹುಲಿಗಳು ನಾವಲ್ಲ. ಹಿಂಜಾವೇ ಜನರ ಮಧ್ಯೆ ಕೆಲಸ ಮಾಡಿದೆ, ಮುಂದೆಯು ಮಾಡಲಿದೆʼʼ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸನಾತನ ಧರ್ಮ ಕುರಿತ ಕೋರ್ಟ್ ಅಭಿಮತ ಹಿಂದೂ ದ್ವೇಷಿಗಳ ಕಣ್ಣು ತೆರೆಸಲಿ
ಹಿಂದು ಜಾಗರಣ ವೇದಿಕೆ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರೂ ಆಗಲೇ ಸಾಮಾಜಿಕ ಜಾಲತಾಣದಲ್ಲಿ ಹಿಂದುತ್ವ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಇದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಶ್ರೀಕಾಂತ್ ಶೆಟ್ಟಿ ಅವರ ಆರೋಪ.
ನಮ್ಮ ಹೋರಾಟ ಹಿಂದೂ ವಿರೋಧಿಗಳನ್ನು ಭಸ್ಮ ಮಾಡಲಿದೆ
ಜಾಗರಣ ವೇದಿಕೆ ಅಧಿಕೃತ ಫೇಸ್ಬುಕ್ ಪೇಜನ್ನು ಬ್ಯಾನ್ ಮಾಡಲಾಗಿದೆ. ಹಿಂದೂ ಚಳುವಳಿಯ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗಿದೆ. ಹಿಂದು ಜಾಗರಣ ವೇದಿಕೆಯ ಧ್ವನಿಯನ್ನು ಹತ್ತಿಕ್ಕುವ ಶಕ್ತಿಗಳಿಗೆ ಬೆದರುವುದಿಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾದ ದೋ.ಕೇಶವ ಮೂರ್ತಿ ಹೇಳಿದ್ದಾರೆ.
ʻʻಕಳೆದ ವಾರದಿಂದ ಜಾಗರಣ ವೇದಿಕೆಯ ಪ್ರಮುಖರನ್ನೇ ಗುರಿಯಾಗಿಸಲಾಗಿದೆ. ಹಿಂದೂ ಚಳುವಳಿಯನ್ನು ಜನರಿಗೆ ತಲುಪಿಸುವ ಮಾರ್ಗ ತಡೆಯಲಾಗಿದೆ. ರಾಜ್ಯ ಸರಕಾರಿ ಕೃಪಾಪೋಷಿತ ವ್ಯವಸ್ಥೆಗಳು ದಾಳಿ ನಡೆಸುತ್ತಿದೆʼʼ ಎಂದು ಹೇಳಿರುವ ಅವರು, ʻʻನಾವು ಸೋಷಿಯಲ್ ಮೀಡಿಯಾ ನಂಬಿ ಹಿಂದೂ ಹೋರಾಟಗಳನ್ನು ಸಂಘಟಿಸಿಲ್ಲ. ಜನರ ನಡುವೆಯೇ ಹೊರಾಟಗಳು ಎದ್ದು ಹಿಂಜಾವೆ ರೂಪುಗೊಂಡಿದೆ. ನಮ್ಮ ಹೋರಾಟ ಹಿಂದೂ ವಿರೋಧಿಗಳನ್ನು ಭಸ್ಮ ಮಾಡಲಿದೆʼʼ ಎಂದು ಆಕ್ರೋಶದಿಂದ ಹೇಳಿದ್ದಾರೆ.