ಉಡುಪಿ : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದ್ ಮಧ್ವರಾಜ್ ಅವರು ಅವಕಾಶವಾದಿ ರಾಜಕಾರಣಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಮೋದ್ ಮೇಲೆ ಸಾಕಷ್ಟು ನಿರೀಖ್ಷೆ ಇತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಬುಧವಾರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧೃವನಾರಾಯಣ್, ಮೊದಲ ಬಾರಿ ಶಾಸಕರಾದ ಅವರನ್ನು ಮಂತ್ರಿ ಮಾಡಲಾಗಿತ್ತು. ಇತ್ತೀಚಿಗೆ ಉಪಾಧ್ಯಕ್ಷ ಸ್ಥಾನ ಕುಡಾ ನೀಡಲಾಗಿತ್ತು. ಹೀಗಿದ್ದರೂ ಅವರು ಪಕ್ಷದ ಮುಖಂಡ ಜೊತೆ ಹೋಗುವ ಮುನ್ನ ಚರ್ಚೆ ನಡೆಸಿರಲಿಲ್ಲ. ಆದರೆ ವ್ಯಕ್ತಿಗಿಂತ ಪಕ್ಷ ಮಿಗಿಲಾಗಿದ್ದು. ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಹೇಳಿದರು.
ಪ್ರಮೋದ್ ಜಿಲ್ಲಾ ಕಾಂಗ್ರೆಸ್ ವಿರುದ್ಧ ಮಾತನಾಡುವುದು ಶೋಭೆ ತರುವುದಿಲ್ಲ. ಅವರು ಹೇಳಿದವರಿಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅವಕಾಶ ಕೊಟ್ಟಿದ್ದೇವೆ. ಅದರೆ ಅವರು ಕಾಂಗ್ರೆಸ್ ಬಿಟ್ಟು ಹೋಗಿರುವುದು ದುರಾದೃಷ್ಟಕರ. ಅವರಿಗೆ ಸಣ್ಣ ವಯಸ್ಸಿನಲ್ಲಿ ಎಲ್ಲಾ ಹುದ್ದೆ ಕೊಟ್ಟಿದ್ದೇವೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಮೋದ್ ಮೇಲೆ ಬಹಳ ನಿರೀಕ್ಷೆ ಸಹಾ ಇಟ್ಟಿದ್ದರು. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ, ಮತದಾರರಿಗೆ ದ್ರೋಹ ಮಾಡಿದ್ದಾರೆ. ಮಧ್ವರಾಜ್ ಅವರ ವೈಯಕ್ತಿಕ ಆಸೆ ಏನಿದೆ ಗೊತ್ತಿಲ್ಲ. ರಾಜಕಾರಣ ನಿಂತ ನೀರಲ್ಲ, ಉಡುಪಿಯಲ್ಲಿ ಮತ್ತೆ ಪಕ್ಷ ಕಟ್ಟುತ್ತೇವೆ. ಜಿಲ್ಲೆಯಲ್ಲಿ ಕಾಂಗ್ರೆಸನ್ನು ತಳಮಟ್ಟದಿಂದ ಕಟ್ಟುತ್ತೇವೆ ಎಂದರು.
ಇದನ್ನೂ ಓದಿ | ಉಡುಪಿ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜಿನಾಮೆ
ನಳಿನ್ ಕುಮಾರ್ ಕುರಿತು ಪ್ರತಿಕ್ರಿಯಿಸಿದ ಧ್ರುವನಾರಾಯಣ್, ಅವರು ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಮಾಡೋದು ಬಿಜೆಪಿಯ ಅವರ ಹಗಲುಗನಸು ಯಾಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್‌ನ ಪರ್ಫಾಮೆನ್ಸ್ ಚೆನ್ನಾಗಿದೆ.
ನಳಿನ್ ಕುಮಾರ್ ಒಬ್ಬ ಹಿಟ್ ಆಂಡ್ ರನ್ ಕೇಸ್. ಸಿದ್ದರಾಮಯ್ಯ ಅವರಿಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಆಡಳಿತಗಾರ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ ಮತ್ತು ನಳಿನ್ ಕುಮಾರ್ ಕಟೀಲ್ ಅಸಮರ್ಥ ರಾಜ್ಯಾಧ್ಯಕ್ಷ ಎಂದರು.
ಇದನ್ನು ಓದಿ | JDS ಜನತಾ ಜಲಧಾರೆಗೆ ಮೇ 13ರಂದು ತೆರೆ: ಬೆಂಗಳೂರಿನಲ್ಲಿ 5 ಲಕ್ಷ ಜನರ ಸಮಾವೇಶ