ಉಡುಪಿ: ಶಾಲಾ ಬಾಲಕಿಯರಿಗೆ (School Students) ಲೈಂಗಿಕ ಕಿರುಕುಳ (Physical Abuse) ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮುಕ ಶಾಲಾ ಮುಖ್ಯ ಶಿಕ್ಷಕನ ಬಂಧನವಾಗಿದೆ. ವಿದ್ಯಾರ್ಥಿನಿಯರ ದೂರಿನ ಮೇರೆಗೆ ಕಾರ್ಕಳ ಪೊಲೀಸರು (Karkala Police) ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಕಳ ಬೋಳ ವಂಜಾರಕಟ್ಟೆ ನಿವಾಸಿ ರಾಜೇಂದ್ರ ಆಚಾರ್ (58) ಬಂಧಿತ ಆರೋಪಿ. ಇಚ್ಚೋಡಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಆಗಿರುವ ರಾಜೇಂದ್ರ ಆಚಾರ್ ಮೇಲೆ ಈ ಹಿಂದೆಯೂ ಹಲವು ಬಾರಿ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು.
ಶಾಲಾ ವಿದ್ಯಾರ್ಥಿನಿಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಇದೀಗ ಕಾರ್ಕಳ ಗ್ರಾಮಾಂತರ ಪೊಲೀಸರು ಆರೋಪಿ ರಾಜೇಂದ್ರ ಆಚಾರ್ ಬಂಧಿಸಿದ್ದಾರೆ.
ಇದನ್ನೂ ಓದಿ: Road Accident : ನಿಂತಿದ್ದ ಕಸದ ಲಾರಿಗೆ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು; ಕೊಡಗಿನಲ್ಲಿ ಪಲ್ಟಿ ಹೊಡೆದ ಬಸ್
ಕುರಾನ್ ಕಲಿಯಲು ಹೋದ ಬಾಲಕನ ಮೇಲೆ ಮಸೀದಿಯಲ್ಲೇ ಅತ್ಯಾಚಾರ; ಇದೆಂಥ ಅನಾಚಾರ!
ಇಸ್ಲಾಮಾಬಾದ್: ರಂಜಾನ್ ಹಬ್ಬದ (Ramzan) ಸಂದರ್ಭದಲ್ಲಿ ಮುಸ್ಲಿಮರು ನಿತ್ಯವೂ ಮಸೀದಿಗಳಿಗೆ ಹೋಗುವುದು, ಕಡ್ಡಾಯವಾಗಿ ನಮಾಜ್ ಮಾಡುವುದು ಸಹಜ. ಮಕ್ಕಳು ಕೂಡ ಮಸೀದಿಗಳಿಗೆ ತೆರಳಿ, ಕುರಾನ್ (Quran) ಅಧ್ಯಯನ ಮಾಡುವುದು, ಪವಿತ್ರ ಸಂದೇಶಗಳನ್ನು ಅರಿಯುವುದು, ಕಲಿಯುವುದು ಕೂಡ ಮಹತ್ವದ ಸಂಗತಿಯಾಗಿದೆ. ಆದರೆ, ಪಾಕಿಸ್ತಾನದಲ್ಲಿ (Pakistan) ಕುರಾನ್ ಕಲಿಯಲೆಂದು ಮಸೀದಿಗೆ ತೆರಳಿದ 13 ವರ್ಷದ ಬಾಲಕನ ಮೇಲೆ ದುರುಳನೊಬ್ಬ ಅತ್ಯಾಚಾರ ಎಸಗಿದ್ದಾನೆ. ಇದು ಈಗ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ. ಮಸೀದಿಯ ಬಾತ್‌ರೂಮ್‌ನಲ್ಲಿ ದುಷ್ಟನು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಹೌದು, ಪಾಕಿಸ್ತಾನದ ಮುಜಫ್ಫರ್‌ಗಢದ ಕೋಟ್ ಅಡ್ಡುಸ್ ಪಟ್ಟಣದಲ್ಲಿರುವ ಮಸೀದಿಯಲ್ಲಿ 28 ವರ್ಷದ ವ್ಯಕ್ತಿಯೊಬ್ಬ 13 ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಂಜಾನ್ ಹಿನ್ನೆಲೆಯಲ್ಲಿ ಕುರಾನ್ ಕಲಿಯಲು ಬಾಲಕನು ಮಸೀದಿಗೆ ತೆರಳಿದ್ದಾಗ ವಿಕೃತ ಕಾಮಿಯು ಇಂತಹ ಕೃತ್ಯ ಎಸಗಿದ್ದಾನೆ. ಬಾಲಕನ ಮೇಲೆ ಅತ್ಯಾಚಾರ ಎಸಗಿದ್ದನ್ನು ಮಸೀದಿಯ ಮೌಲ್ವಿಯು ನೋಡಿದ್ದಾರೆ. ಬಳಿಕ ಅವರು ವಿಕೃತ ಕಾಮಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಡಿದ ತಪ್ಪಿಗೆ ಈಗ ದುರುಳನು ಕಂಬಿ ಎಣಿಸುತ್ತಿದ್ದಾನೆ.
Pakistan 🇵🇰: 13 year old boy (Husnain Muavia) was raped in the bathroom of Masjid e Siddique-e-Akbar!
— Jimmy (@A_Rizvi112) April 5, 2024
Victim and rapist were in the same mosque 🕌 for Aetekaaf (religious retreat during the last few days of the Holy month of Ramadan … pic.twitter.com/M6uPqu77Nm
ಮೌಲ್ವಿಗೇ ಬೆದರಿಕೆ ಹಾಕಿದ ದುಷ್ಟ
ಬಾಲಕನ ಮೇಲೆ ಅತ್ಯಾಚಾರ ಎಸಗಿದ ಕೃತ್ಯವನ್ನು ನೋಡಿದ ಮೌಲ್ವಿಗೇ ದುಷ್ಟನು ಬೆದರಿಕೆ ಹಾಕಿದ್ದಾನೆ. “ಇದರ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಂದು ಹಾಕುತ್ತೇನೆ” ಎಂಬುದಾಗಿ ಮೌಲ್ವಿಗೆ ಬೆದರಿಕೆ ಹಾಕಿದ ಕಾಮುಕನು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈತನ ಬೆದರಿಕೆಯನ್ನು ಲೆಕ್ಕಿಸದ ಮೌಲ್ವಿಯು ನಾಚಿಕೆಗೇಡಿನ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮಸೀದಿಯಲ್ಲಿಯೇ ಅತ್ಯಾಚಾರಕ್ಕೀಡಾದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ಅತ್ಯಾಚಾರ ಪ್ರಕರಣ ಮೊದಲು ಮೌಲ್ವಿಗೆ ಗೊತ್ತಾಗುತ್ತಲೇ ಅವರು ಅಲ್ಲಿದ್ದ ಜನರಿಗೆ ತಿಳಿಸಿದ್ದಾರೆ. ಎಲ್ಲರೂ ಒಗ್ಗೂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣ ಬಯಲಾಗುತ್ತಲೇ ಸುತ್ತಮುತ್ತಲಿನ ಜನ ಮಕ್ಕಳನ್ನು ಮಸೀದಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಲ್ಲಿ ಬಾಲಕಿ ಮೇಲೆ ಅತ್ಯಾಚಾರಿವೆಸಗಿದ್ದವನಿಗೆ 20 ವರ್ಷ ಜೈಲು
ಬೆಂಗಳೂರು: ಬಾಲಕಿಯನ್ನು ಕಾಮದ ಕಣ್ಣಿಂದ ನೋಡಿದ ದುಷ್ಟನೊಬ್ಬನಿಗೆ 20 ವರ್ಷ ಜೈಲು ಶಿಕ್ಷೆ (20 years of sentence) ವಿಧಿಸಲಾಗಿದೆ. ಪುಟ್ಟ ಬಾಲಕಿಯ ಮೇಲೆ (POCSO Case) ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದ.
ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. 2022ರ ಜನವರಿ 22ರಂದು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಒಬ್ಬಂಟಿಯಾಗಿದ್ದ 8 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯವನೇ ಲೈಂಗಿಕ ದೌರ್ಜನ್ಯವೆಸಗಿದ್ದ.
ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿತ್ತು. ವಾದ ಆಲಿಸಿದ ನ್ಯಾಯಾಲಯವು 2024ರ ಏಪ್ರಿಲ್ 2ರಂದು ತೀರ್ಪು ಪ್ರಕಟಿಸಿದೆ.
ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನು ನ್ಯಾಯಾಲಯವು ವಿಧಿಸಿದೆ. ಬಾಲಕಿಯ ಪಕ್ಕದ ಮನೆಯಲ್ಲಿದ್ದ ಆರೋಪಿ, ಒಬ್ಬಳೆ ಮನೆಯಲ್ಲಿ ಇದ್ದಾಗ ಕೃತ್ಯ ಎಸಗಿದ್ದ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ