ಉಡುಪಿ: ಕುಂತರೂ ನಿಂತರೂ ಈಗಂತೂ ರಿಷಬ್ ಶೆಟ್ಟಿ (Rishab Shetty) ನಟನೆಯ ಕಾಂತಾರ ಸಿನಿಮಾ ಬಗ್ಗೆಯೇ ಮಾತುಕತೆ ಜೋರಾಗಿದೆ.
ಇತ್ತೀಚೆಗೆ ತೆರೆ ಕಂಡ ಕಾಂತಾರ ಸಿನಿಮಾ ದೇಶ- ವಿದೇಶಗಳಲ್ಲಿ ಹೆಸರು ಮಾಡುತ್ತಿದೆ. ಕರಾವಳಿ ಸಂಸ್ಕೃತಿ, ಆಚರಣೆಗೆ ಬೆಳಕು ಹಿಡಿದ ಕಾಂತಾರ ಚಲನಚಿತ್ರಕ್ಕೆ ರಂಗೋಲಿ ಮೂಲಕ ಅಭಿನಂದನೆ ಅರ್ಪಿಸಲಾಗಿದೆ.
ಇಲ್ಲಿನ ಸಾಲಿಗ್ರಾಮದ ವಿಶ್ವಕರ್ಮ ಸಭಾಭವನದಲ್ಲಿ ಪಂಜುರ್ಲಿ ವೇಷ ಕಟ್ಟಿರುವ ಮತ್ತು ಕೋಣ ಓಡಿಸುವ ರಿಷಭ್ ಶೆಟ್ಟಿಯ ಚಿತ್ರವನ್ನು ರಂಗೋಲಿಯಿಂದ ರಚಿಸಲಾಗಿದೆ. ಸುಮಾರು 7 ಅಡಿ ಎತ್ತರದ 9 ಅಡಿ ಅಗಲ ಇರುವ ರಂಗೋಲಿ ಬಿಡಸಲಾಗುತ್ತಿದೆ.
ಸ್ಫೂರ್ತಿ ಆಚಾರ್ಯ ಮತ್ತು ಅಶ್ವತ್ಥ್ ಆಚಾರ್ಯ ಎಂಬುವವರು ರಂಗೋಲಿ ಸೃಷ್ಟಿಕರ್ತರಾಗಿದ್ದು, ಶನಿವಾರ ಮುಂಜಾನೆಯಿಂದ ರಂಗೋಲಿ ರಚನೆ ಶುರುವಾಗಿತ್ತು.
ಭಾನುವಾರದ ಹೊತ್ತಿಗೆ ರಂಗೋಲಿ ರಚನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸೋಮವಾರ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಕಾಂತಾರ ರಂಗೋಲಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಇದನ್ನೂ ಓದಿ | Kantara Movie | ತುಮಕೂರಿನಲ್ಲಿ ಅರ್ಧಕ್ಕೆ ಸ್ಥಗಿತಗೊಂಡ ಕಾಂತಾರ ಪ್ರದರ್ಶನ; ಪ್ರೇಕ್ಷಕರ ಪ್ರತಿಭಟನೆ