Site icon Vistara News

ಫಾಜಿಲ್ ಹತ್ಯೆಗೆ ಬಳಸಿದ್ದ ಇಯಾನ್‌ ಕಾರು ಪತ್ತೆ: ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಫಾಜಿಲ್

ಉಡುಪಿ: ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಸಂಬಂಧಿಸಿದ ಮಹತ್ವದ ಸಾಕ್ಷಿಯೊಂದು ಕಾರ್ಕಳ ತಾಲೂಕು ಇನ್ನಾದಲ್ಲಿ ಪತ್ತೆಯಾಗಿದೆ. ಫಾಜಿಲ್ ಹತ್ಯೆಗೆ ಬಳಸಿದ್ದ ಬಿಳಿ ಬಣ್ಣದ ಇಯಾನ್ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

ನಿರ್ಜನ ಪ್ರದೇಶದಲ್ಲಿದ್ದ ಕಾರಿನ ಬಗ್ಗೆ ಭಾನುವಾರ ಮುಂಜಾನೆ ಸ್ಥಳೀಯರು ಉಡುಪಿ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ. ಸಿಸಿಟಿವಿ ದೃಶ್ಯದ ಆಧಾರದಲ್ಲಿ, ಹತ್ಯೆ ಸಂಬಂಧ ಆರೋಪಿಗಳು ಬಳಿಸಿದ್ದದ್ದು ಇದೇ ಕಾರು ಎಂದು ತಿಳಿದುಬಂದಿದೆ.

ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ಮಾಡಿದ ಆರೋಪಿಗಳು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಪಡುಬಿದ್ರೆ ಮೂಲಕ ಇನ್ನಾಗೆ ಬಂದು, KA19MJ8496 ಸಂಖ್ಯೆಯ ಕಾರನ್ನು ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗಿದೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಮತ್ತಷ್ಟು ಮಾಹಿತಿ ಲಭಿಸಬೇಕಿದೆ.

ಇದನ್ನೂ ಓದಿ | ಸುರತ್ಕಲ್‌ ಫಾಜಿಲ್‌ ಹತ್ಯೆ: ಮೊದಲ ಆರೋಪಿ ಅರೆಸ್ಟ್‌, ಇವನು ಹಂತಕರು ಬಂದ ಕಾರಿನ ಚಾಲಕ

Exit mobile version