Site icon Vistara News

ತೇಲಿ ಬಂದ ಮೈಕ್ರೋ ಪ್ಲಾಸ್ಟಿಕ್‌, ಎಣ್ಣೆ ಜಿಡ್ಡು

ಮೈಕ್ರೋ ಪ್ರಾಸ್ಟಿಕ್

ಉಡುಪಿ: ಕುಂದಾಪುರ ತಾಲೂಕು ವ್ಯಾಪ್ತಿಯ ಬೀಜಾಡಿ ಸಮುದ್ರ ತೀರದಲ್ಲಿ ಮೈಕ್ರೋ ಪ್ಲಾಸ್ಟಿಕ್‌, ಎಣ್ಣೆ ಜಿಡ್ಡು ತೇಲಿ ಬರುತ್ತಿದೆ. ಇದರಿಂದ ಸಮುದ್ರ ತೀರವು ಕಲುಷಿತವಾಗುತ್ತಿದೆ.

ಸಮುದ್ರದ ನೀರಿನ ಬಣ್ಣ ಬದಲಾಗಿದ್ದು, ಮುಟ್ಟಿದರೆ ಕೈಗೆ ಎಣ್ಣೆಯ ಜಿಡ್ಡು ಅಂಟುಕೊಳ್ಳುತ್ತದೆ. ಸಮುದ್ರದ ನೀರಿನಲ್ಲಿ ಎಣ್ಣೆ ಜಿಡ್ಡಿನ ಜತೆ ಸೇರಿರುವ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ಸುಟ್ಟ ಎಣ್ಣೆಯ ವಾಸನೆ ತರುತ್ತಿದೆ ಮತ್ತು ಕಡಲ ನೀರು ಮುಟ್ಟಿದರೆ ಕೈ ತುರಿಕೆ ಬರತ್ತಿದೆ.

ಕಡಲ ತಡಿಯ ಜನರಲ್ಲಿ ಈ ಬಗ್ಗೆ ಆತಂಕ ಹೆಚ್ಚಾಗಿದೆ. ಜಲಚರಗಳಿಗೂ ಸಮಸ್ಯೆ ಉಂಟಾಗುತ್ತಿದೆ. ಬೀಜಾಡಿ ಜತೆಗೆ, ಜಿಲ್ಲೆಯ ಕೋಡಿ, ಮರವಂತೆ ಬೀಚ್‌ನಲ್ಲಿಯು ಸಮುದ್ರದ ನೀರಿನ ಬಣ್ಣ ಬದಲಾಗಿದೆ.

ಇದನ್ನೂ ಓದಿ: Video | ಮಲ್ಪೆ ಕಡಲ ಅಲೆಗಳ ಮೇಲೆ ತೇಲುವ ಸೇತುವೆ

Exit mobile version