Site icon Vistara News

Theft case : ಕಳ್ಳತನ ಮಾಡುತ್ತಿರುವಾಗಲೇ ಕಳ್ಳ ಲಾಕ್‌; ಸಿಸಿ ಕ್ಯಾಮೆರಾ ಲೈವ್ ಸ್ಟ್ರೀಮ್ ಆಧರಿಸಿ ಅರೆಸ್ಟ್‌

theft case

ಉಡುಪಿ: ಕಳ್ಳತನ ಮಾಡುತ್ತಿರುವಾಗಲೇ ಸಿಸಿ ಕ್ಯಾಮೆರಾ ಲೈವ್ ಸ್ಟ್ರೀಮ್ ಆಧರಿಸಿ ಕಳ್ಳನನ್ನು ರೆಡ್‌ ಹ್ಯಾಂಡ್‌ ಆಗಿ ಪೊಲೀಸರು (theft Case) ಹಿಡಿದಿದ್ದಾರೆ. ಉಡುಪಿಯ ಕುಂದಾಪುರ ಸಮೀಪದ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘ ಹೊಸಾಡು ಕಛೇರಿಗೆ ಕಳ್ಳನೊಬ್ಬ ನುಗ್ಗಿದ್ದ. ಮಧ್ಯರಾತ್ರಿ 1:45ರ ಸುಮಾರಿಗೆ ಕಚೇರಿಯ ಕಿಟಕಿ ಮುರಿದು ಒಳ ನುಗ್ಗಿದ ಕಳ್ಳ ಜಾಲಾಡುತ್ತಿದ್ದ. ಆದರೆ ಇತ್ತ ಲೈವ್ ಮಾನಿಟರಿಂಗ್ ಮೂಲಕ ಕಳ್ಳನ ಚಲನವಲನವನ್ನು ಲೈವ್ ಮಾನಿಟರಿಂಗ್ ಸಂಸ್ಥೆ ಗಮನಿಸಿತ್ತು. ಕೂಡಲೇ ಕುಂದಾಪುರ ಮೂಲದ ಸೈನ್ ಇನ್ ಸಿಸಿ ಕ್ಯಾಮೆರಾ ಲೈವ್ ಮಾನಿಟರಿಂಗ್ ಸಂಸ್ಥೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ 10 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಕಳ್ಳನನ್ನು ಕಿಟಿಕಿಯಿಂದಲೇ ಎಳೆದು ಬಂಧಿಸಿದ್ದಾರೆ. ಬಂಧಿತನು ಕೇರಳ ಮೂಲದವನು ಎಂದು ತಿಳಿದು ಬಂದಿದ್ದು, ಗಂಗೊಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಕಳ್ಳತನದ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ವೇಗವಾಗಿ ಬಂದು ಬೈಕ್‌ಗೆ ರಭಸವಾಗಿ ಗುದ್ದಿದ ಬಸ್‌; ನಜ್ಜುಗುಜ್ಜಾದ ಸವಾರ

ಖತರ್ನಾಕ್‌ ಕಳ್ಳ ಅರೆಸ್ಟ್‌

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳತನ, ದರೋಡೆ ಸೇರಿ 10ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಫೀಲಿಫ್ ಕೃಷ್ಣ ಸಿದ್ಧಿ ಬಂಧಿತ ಆರೋಪಿಯಾಗಿದ್ದಾನೆ.

ಯಲ್ಲಾಪುರ ತಾಲೂಕಿನ ನಿವಾಸಿ ಫೀಲಿಫ್ ಸಿದ್ಧಿ, ಬೈಕ್, ಅಡಿಕೆ ಕಳ್ಳತನ, ದರೋಡೆ ಸೇರಿ 10ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬಂಧಿತನಿಂದ 3 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಸಿದ್ದಪ್ಪ ಗುಡಿ, ವಿಜಯರಾಜ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version